ಹರಿತಲೇಖನಿ ದಿನಕ್ಕೊಂದು ಕಥೆ: ಮುಂಗೋಪಿ ದೂರ್ವಾಸ ಮುನಿ
ಹರಿತಲೇಖನಿ ದಿನಕ್ಕೊಂದು ಕಥೆ: ಮುಂಗೋಪಿ ದೂರ್ವಾಸ ಮುನಿ

ಹರಿತಲೇಖನಿ ದಿನಕ್ಕೊಂದು ಕಥೆ: ದೂರ್ವಾಸ ಮುನಿ
ದೂರ್ವಾಸ ಅತ್ರಿ ಮುನಿ ಮತ್ತು ಅನಸೂಯ ದಂಪತಿಗಳ ಮಗ. ಇವರು ತನ್ನ ಮುಂಗೋಪಕ್ಕೆ ಹೆಸರುವಾಸಿ. ಇದರಿಂದಾಗಿ ಮಾನವರಿಂದ ಹಾಗೂ ದೇವತೆಗಳಿಂದ ಅತ್ಯಂತ ಹೆಚ್ಚು ಗೌರವ ಪಡೆಯುತ್ತಿದ್ದರು.

ಮಹಾಭಾರತದಲ್ಲಿ, ರಾಜಕುಮಾರಿ ಕುಂತಿಯು ಮಾಡಿದ ಶುಶ್ರೂಷೆಯಿಂದ ಸಂತೃಪ್ತಿಗೊಂಡು ಆಕೆಗೆ ಯಾವ ದೇವತೆಯನ್ನಾದರೂ ವಶಪಡಿಸಿಕೊಳ್ಳಬಹುದಾದ ಮಹಿಮೆಯುಳ್ಳ ಮಂತ್ರಗಳನ್ನು ಉಪದೇಶಿಸಿದ. ಆ ಮಂತ್ರಗಳ ಮಹಿಮೆಯಿಂದಲೇ ಕುಂತಿ ಕರ್ಣ ಯುಧಿಷ್ಠಿರ ಭೀಮಾರ್ಜುನರನ್ನೂ ಮಾದ್ರಿ ನಕುಲ ಸಹದೇವರನ್ನೂ ಪಡೆದುದು.

ಅಂತಹ ಮಂತ್ರದ 'ಅದ್ಭುತ' ಶಕ್ತಿಯನ್ನು , ಕುಂತಿಯು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ, ಸೂರ್ಯ ಪ್ರತ್ಯಕ್ಷನಾಗಿದ್ದನ್ನು ಕಂಡು ಹೆದರಿದವಳಾದಳು ಮತ್ತು ಹಿಂತಿರುಗಿ ಹೋಗಲು ಬೇಡಿಕೊಂಡಳು. ಆದರೆ, ಸೂರ್ಯನು ಹೋಗುವ ಮುನ್ನ ಮಂತ್ರದ ಫಲವನ್ನು ನೀಡಿಯೇ /ಪೂರೈಸಿಯೇ ಹೋಗಬೇಕಾಗುತ್ತದೆ.

ಸೂರ್ಯನು ತನ್ನ ಮಾಯಾ ಶಕ್ತಿಯಿಂದ 'ಕುಂತಿ' ಗೆ ಮಗುವೊಂದನ್ನು ದಯಪಾಲಿಸಿ, ಆಕೆಯ ಶೀಲವನ್ನೂ ಸಹ ಉಳಿಸಿ ಹೋಗುತ್ತಾನೆ. ಇದರಿಂದಾಗಿ ಮದುವೆಯಾಗದ ರಾಜಕುಮಾರಿಗೆ 'ಮಗು' ಹೇಗಾದೀತು? ಎಂಬ ಮುಜುಗರದಿಂದ ಪಾರು ಮಾಡುತ್ತಾನೆ ಅಥವಾ ಸಮಾಜದ ಪ್ರಶ್ನೆಗಳಿಗೆ ಆಸ್ಪದ ಇಲ್ಲದಂತೆ ಮಾಡುತ್ತಾನೆ.

ಕುಂತಿಯು ಮಗುವನ್ನು ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಕುರುಕ್ಷೇತ್ರ ದ ಮಹಾಯುದ್ಧದಲ್ಲಿ , ಕರ್ಣ ನು ಒಂದು 'ಕೇಂದ್ರೀಯ' ಮಹಾಪಾತ್ರವನ್ನು ಹೊಂದಿ ಬೆಳೆಯುತ್ತಾನೆ. ವೃತ್ತಿಯಲ್ಲಿ ಚಮ್ಮಾರರಾಗಿದ್ದರು.

ದುರ್ಯೋಧನ ದುರ್ವಾಸನಿಗೆ ಹಲವು ಆತಿಥ್ಯ ಮಾಡಿ ಅನುಗ್ರಹಕ್ಕೆ ಪಾತ್ರನಾಗಿ, ವನವಾಸದಲ್ಲಿದ್ದ ಪಾಂಡವರಲ್ಲಿಗೆ ಅವೇಳೆಯಲ್ಲಿ ಹೋಗಿ ಅನ್ನವನ್ನು ಬೇಡಿ , ಅವರಿಗೆ ಶಾಪ ಕೊಡಬೇಕೆಂದು ಹೇಳಿ ಕಳುಹಿಸಿದ. ಆದರೆ ಶ್ರೀಕೃಷ್ಣನ ಕೃಪೆಯಿದ್ದ ಪಾಂಡವರಲ್ಲಿ ಊಟ ಮಾಡದೇ ಹೊಟ್ಟೆ ತುಂಬಿತಾಗಿ ದುರ್ವಾಸ ತನ್ನ ಶಿಷ್ಯರೊಂದಿಗೆ ಅಲ್ಲಿಂದ ಹೊರಟುಹೋದ.

ಒಮ್ಮೆ ಅಂಬರೀಷನಲ್ಲಿಗೆ ಹೋಗಿ, ಅವನನ್ನು ಕೊಲ್ಲಲು ದುರ್ದೇವತೆಯನ್ನು ಸೃಷ್ಟಿಸಿದ. ಅಂಬರೀಷ ವಿಷ್ಣುಚಕ್ರವನ್ನು ಪ್ರಾರ್ಥಿಸಲು ಅದರ ಭಯದಿಂದ ಅಂಬರೀಷನನ್ನೇ ಮರೆಹೊಕ್ಕು ಬದುಕಿಕೊಂಡ.

ಶ್ವೇತಕಿಯೆಂಬ ಅರಸನಿಂದ ಅನೇಕ ಯಜ್ಞಗಳನ್ನು ಮಾಡಿಸಿದ, ಕುರುಕ್ಷೇತ್ರದಲ್ಲಿ ವಾಸಮಾಡುವ ಮುದ್ಗಲ ಅಥವಾ ವ್ರೀಹಿದ್ರೋಣನೆಂಬ ವಹರ್ಷಿಯನ್ನು ಪರೀಕ್ಷಿಸಿ ಅನುಗ್ರಹಿಸಿದ.

ಒಮ್ಮೆ ಈತ ದೇವಲೋಕಸಂಚಾರ ಮಾಡಿ ಬರುತ್ತಿರಲು ವಿದ್ಯಾಧರೆಯೊಬ್ಬಳ ಕೈಯಲ್ಲಿದ್ದ ಹೂಮಾಲೆಯನ್ನು ಕಂಡು, ಮೋಹಭರಿತನಾಗಿ ಅವಳಲ್ಲಿ ಬೇಡಿ ಅದನ್ನು ಪಡೆದು, ತಲೆಗೆ ಸುತ್ತಿಕೊಂಡು ಬರುತ್ತಿದ್ದ. ಆಗ ಇಂದ್ರ ಶಚಿಯೊಂದಿಗೆ ಐರಾವತದ ಮೇಲೆ ಬರುತ್ತಿರುವುದನ್ನು ಕಂಡು ಆ ಮಾಲೆಯನ್ನು ಇಂದ್ರನ ಮೇಲೆಸೆದ.

ಇಂದ್ರ ಅದನ್ನು ಐರಾವತದ ಕುಂಭ ಸ್ಥಳದ ಮೇಲೆ ಹಾಕಿದ. ಐರಾವತ ಅದರ ಪರಿಮಳದಿಂದ ಮದಿಸಿ ಹೂಮಾಲೆಯನ್ನು ನೆಲಕ್ಕೆಸೆಯಿತು. ಇದರಿಂದ ಕ್ರೋಧಗೊಂಡ ದುರ್ವಾಸ ಆತನ ಮೂರು ಲೋಕದ ಸಂಪತ್ತೂ ನಾಶವಾಗಲಿ ಎಂದು ಶಾಪವಿತ್ತ.

ಒಮ್ಮೆ ಭೂಪ್ರದಕ್ಷಿಣೆಗೆ ಹೊರಟ ಈ ಮುನಿ ಕಾಶೀ ಕ್ಷೇತ್ರಕ್ಕೆ ಬಂದ, ಒಡನೆಯೇ ಈತನ ಮನಸ್ಸು ಶಾಂತಿ ಸಮಾಧಾನಗಳಿಂದ ತುಂಬಿತು. ಕಾಶೀ ಕ್ಷೇತ್ರವನ್ನು ಹೊಗಳಿ ತಪಸ್ಸು ಮಾಡಲಾರಂಭಿಸಿದ. ಆದರೆ ಭಗವಂತ ಪ್ರಸನ್ನನಾಗಲಿಲ್ಲ.

ಕ್ರೋಧಗೊಂಡ ಮುನಿ ಕ್ಷೇತ್ರವನ್ನೇ ಶಪಿಸಲು ಮನಸ್ಸು ಮಾಡಿದ. ಇದನ್ನರಿತ ಈಶ್ವರ ಮೈದೋರಿ ಮುನಿಯನ್ನು ಸಮಾಧಾನ ಪಡಿಸಿ, ಮುಕ್ತಿ ದೊರೆಯುವ ಈ ಕ್ಷೇತ್ರದಲ್ಲಿ ನೀನು ಬೇಡುವ ವರವಾದರೂ ಯಾವುದು ಎಂದು ಕೇಳಿದ. ಆಗ ಮುನಿ ತನ್ನ ತಿಳಿಗೇಡಿತನಕ್ಕೆ ತಾನೇ ನಾಚಿ ಭಗವಂತನನ್ನು ಪ್ರಾರ್ಥಿಸಿ ಜ್ಞಾನಸಿದ್ಧಿಯನ್ನು ಪಡೆದರು.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others