ಕೆಲ ಮಾಧ್ಯಮಗಳು ಮೋದಿಯನ್ನು ಇಂದ್ರ- ಚಂದ್ರ ಎಂಬಂತೆ ಬಿಂಬಿಸುತ್ತಿವೆ.. ತಾಕತ್ ಇದ್ರೆ ರಾಹುಲ್ ಜೊತೆ ಮೋದಿ ಚರ್ಚೆಗೆ ಬರಲಿ: ಸಚಿವ ಸಂತೋಷ್ ಲಾಡ್ ಸವಾಲು
ಕೆಲ ಮಾಧ್ಯಮಗಳು ಮೋದಿಯನ್ನು ಇಂದ್ರ- ಚಂದ್ರ ಎಂಬಂತೆ ಬಿಂಬಿಸುತ್ತಿವೆ.. ತಾಕತ್ ಇದ್ರೆ ರಾಹುಲ್ ಜೊತೆ ಮೋದಿ ಚರ್ಚೆಗೆ ಬರಲಿ: ಸಚಿವ ಸಂತೋಷ್ ಲಾಡ್ ಸವಾಲು

ಜಮಖಂಡಿ, (ಮೇ.04); 'ಪ್ರಧಾನಿ ಮೋದಿ ಅವರಿಗೆ ತಾಕತ್ತಿದ್ದರೆ ರಾಹುಲ್ ಗಾಂಧಿ ಬಳಿ ಹತ್ತು ನಿಮಿಷವಾದೂ ನಿಂತು, ಚರ್ಚೆ ಮಾಡಲಿ. ಆಗ ಅವರ ಮುಖವಾಡ ಗೊತ್ತಾಗುತ್ತದೆ. ನಿಜವಾಗಿ ಅವರು ಕೆಲಸ ಮಾಡಿದ್ದರೆ ಅಷ್ಟೊಂದು ಪ್ರಚಾರ ಏಕೆ ಬೇಕಿತ್ತು' ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.

ಇಲ್ಲಿನ ಶಿವಾಜಿ ವೃತ್ತದಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

'ಮೋದಿಯಿಂದ ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ. ಹತ್ತು ವರ್ಷದಲ್ಲಿ ಅಧೋಗತಿಗೆ ತಲುಪಿದೆ. ಉದ್ಯಮಿಗಳ ರೂ.25 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿ, ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ' ಎಂದು ಕೇಳಿದರು.

ಮೋದಿ ಅವರಿಗೆ ತಾಕತ್ತಿದ್ದರೆ ರಾಹುಲ್ ಗಾಂಧಿ ಬಳಿ ಹತ್ತು ನಿಮಿಷವಾದೂ ನಿಂತು, ಚರ್ಚೆ ಮಾಡಲಿ. ಆಗ ಅವರ ಮುಖವಾಡ ಗೊತ್ತಾಗುತ್ತದೆ. ಇಲ್ಲ ಮಾಧ್ಯಮಗಳು ಇಬ್ಬರನ್ನು ಒಟ್ಟಿಗೆಕೂರಿಸಿ, ತಲಾ ಐದ್ ಐದು ಪ್ರಶ್ನೆ ಮಾಡಿ. ಅದ್ ಬಿಟ್ಟು ಮೂರ್ ಜನ ರೂಮಲ್ ಹೇಳಿಕೊಟ್ಟ ಪ್ರಶ್ನೆ ಮಾಡೋದಲ್ಲ ಎಂದು ಇತ್ತೀಚೆಗೆ ಮೋದಿ ಸಂದರ್ಶನಗಳ ಕುರಿತು ಆಕ್ರೋಶ ಹೊರಹಾಕಿದರು.

'ಈ ದೇಶದಲ್ಲಿ ಒಳ್ಳೆಯದಾದರೆ ಮೋದಿ ಕಾರಣ, ಕೆಟ್ಟದಾದರೆ ಕಾಂಗ್ರೆಸ್‌ ಕಾರಣವೆಂದು ಅಪಪ್ರಚಾರ ಮಾಡಲಾಗುತ್ತಿದೆ. ಕೆಲ ಮಾಧ್ಯಮದವರು ಇವರನ್ನು ಇಂದ್ರ- ಚಂದ್ರ ಎಂಬಂತೆ ಬಿಂಬಿಸುತ್ತಿವೆ. 

ನಾವು ಭಾರತೀಯ ಹಿಂದೂಗಳು, ಬಿಜೆಪಿ, ಆರ್‌ಎಸ್‌ಎಸ್‌ನವರಂತೆ ನಕಲಿ ಹಿಂದೂಗಳಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಬ್ರಿಟಿಷರು ಈ ದೇಶ ಬಿಟ್ಟು ಹೋಗುವಾಗ ಶಾಲೆ, ಆಸ್ಪತ್ರೆ, ನೀರು, ರೈಲು, ಅಂಗನವಾಡಿ ಇರಲಿಲ್ಲ. ಕುಷ್ಟ, ಪೋಲಿಯೊ ಕಾಯಿಲೆಯಿಂದ ಜನರು ಬಳಲುತಿದ್ದರು. ಇದೆಲ್ಲವನ್ನೂ ಎದುರಿಸಿ ಕಾಂಗ್ರೆಸ್, ದೇಶವನ್ನು ಕಟ್ಟಿದೆ' ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics

HL

education