15 ರಾಷ್ಟ್ರಗಳಲ್ಲಿ ಕೋವಿಶೀಲ್ಡ್‌ ನಿಷೇಧ.. ಭಾರತದಲ್ಲಿ ನಿಷೇಧಿಸಿಲ್ಲವೇಕೆ..!: ಸಂತ್ರಸ್ತರ ಕುಟುಂಬ ಕೋರ್ಟ್‌ಗೆ!
15 ರಾಷ್ಟ್ರಗಳಲ್ಲಿ ಕೋವಿಶೀಲ್ಡ್‌ ನಿಷೇಧ.. ಭಾರತದಲ್ಲಿ ನಿಷೇಧಿಸಿಲ್ಲವೇಕೆ..!: ಸಂತ್ರಸ್ತರ ಕುಟುಂಬ ಕೋರ್ಟ್‌ಗೆ!

ನವದೆಹಲಿ, (ಮೇ.04): ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಸಾಧ್ಯತೆ ಇದೆ ಎಂದು ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ನ್ಯಾಯಾಲಯದ ಮುಂದೆ ಒಪ್ಪಿಕೊಂಡ ಬೆನ್ನಲ್ಲೇ, ಆಸ್ಟ್ರಾಜೆನಿಕಾ ಮತ್ತು ಅದನ್ನು ಭಾರತದಲ್ಲಿ ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಂತ್ರಸ್ತ ಕುಟುಂಬಗಳು ನಿರ್ಧರಿಸಿವೆ.

ಹೈದ್ರಾಬಾದ್‌ನ ವೇಣುಗೋಪಾಲನ್‌ ಅವರ ಪುತ್ರಿ ಕಾರುಣ್ಯ, ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದ್ದಳು. ಇದಕ್ಕೆ ಲಸಿಕೆಯೇ ಕಾರಣ ಎಂದು ಈ ಮೊದಲು ಕೂಡಾ ಆರೋಪಿಸಿದ್ದ ವೇಣುಗೋಪಾಲ್ ಇದೀಗ ಆಸ್ಪಾಜೆನಿಕಾ ಕಂಪನಿಯ ತಪ್ರೊಪ್ಪಿಗೆ ಬೆನ್ನಲ್ಲೇ ಈ ವಿಷಯವನ್ನು ನ್ಯಾಯಾಲಯದ ಮುಂದೆ ಇಡಲು ನಿರ್ಧರಿಸಿದ್ದಾರೆ.

ತಮ್ಮ ಪುತ್ರಿಯ ಜೊತೆಗೆ ಇದೇ ಲಸಿಕೆಗೆ ಬಲಿಯಾದ ಕುಟುಂಬಗಳ ಸದಸ್ಯರನ್ನು ಕೂಡಾ ಅವರು ಸಂಪರ್ಕಿಸುತ್ತಿದ್ದು, ಈಗಾಗಲೇ 8 ಕುಟುಂಬಗಳು ವೇಣುಗೋಪಾಲ್ ಸಂಪರ್ಕಕ್ಕೆ ಬಂದಿವೆ. ಅವರ ವೇಣುಗೋಪಾಲ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋವಿಶೀಲ್ಡ್ ರಕ್ತ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡುತ್ತದೆ ಮತ್ತು ಅದು ಮಾರಣಾಂತಿಕವಾಗಬಹುದು ಎಂದು ಸರ್ಕಾರಕ್ಕೆ ತಿಳಿದಿತ್ತು. ಸೀರಮ್ ಇನ್ಸ್ಟಿಟ್ಯೂಟ್, ತಯಾರಕರು, ಇದು ತಿಳಿದಿತ್ತು.

ಫೆಬ್ರವರಿ 2021 ರಲ್ಲಿ ಸ್ವತಃ (ಎಸ್‌ಐಐಗೆ ಇದು ಫೆಬ್ರವರಿಯಲ್ಲಿ ತಿಳಿದಿತ್ತು ಮತ್ತು ಗೋಐಗೆ ತಿಳಿಸುವುದು ಕರ್ತವ್ಯವಾಗಿದೆ) ಎಲ್ಲಾ ಬಲಿಪಶುಗಳು ಆ ಲಸಿಕೆ ಅನ್ನು ತೆಗೆದುಕೊಂಡರು ಮತ್ತು ನಿಧನರಾದರು.

ನನ್ನ ಮಗಳೂ ಸೇರಿದಂತೆ. ಆದರೂ ಅವರು ಅದನ್ನು ನಿಲ್ಲಿಸಲಿಲ್ಲ ಆದರೆ ತಮ್ಮ 'ಸುರಕ್ಷಿತ ಮತ್ತು ಪರಿಣಾಮಕಾರಿ' ಸುಳ್ಳುಗಳೊಂದಿಗೆ ರೋಲ್‌ಔಟ್‌ನಲ್ಲಿ ದ್ವಿಗುಣಗೊಳಿಸಿದರು.

ನಿಮ್ಮ ಪ್ರೀತಿಪಾತ್ರರು/ಸ್ನೇಹಿತರು ಮತ್ತು ಕುಟುಂಬದ ವಲಯದಲ್ಲಿ ಯಾರಾದರೂ ಲಸಿಕೆಯನ್ನು ತೆಗೆದುಕೊಂಡರೆ ಮತ್ತು ಅದರ ತೊಡಕುಗಳಿಂದ ಮರಣಹೊಂದಿದರೆ, ದಯವಿಟ್ಟು ನನಗೆ ಡಿಎಂ ಮಾಡಿ.

ನಾವು ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಮಾಡುತ್ತೇವೆ ಮತ್ತು ಪ್ರತಿಯೊಬ್ಬ ಅಪರಾಧಿಯನ್ನು ನ್ಯಾಯಕ್ಕೆ ತರುತ್ತೇವೆ. ಮತ್ತು ಇದನ್ನು ಎಂದಿಗೂ ಪುನರಾವರ್ತಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ದೇಶಗಳ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಎಂದಿದ್ದಾರೆ.

ಅಸ್ಟ್ರಾಜೆನಿಕಾ ಇದನ್ನು ಬಹಳ ಹಿಂದೆಯೇ ಒಪ್ಪಿ ಕೊಂಡಿದ್ದರೆ ಬಹಳ ಜೀವ ಉಳಿಸಬಹುದಿತ್ತು. ಯುರೋಪ್‌ನ 15 ರಾಷ್ಟ್ರಗಳಲ್ಲಿ ಕೋವಿಶೀಲ್ಡ್‌ ಲಸಿಕೆ ನಿಷೇಧಿಸಿದ್ದರೂ, ಭಾರತದಲ್ಲಿ ನಿಷೇಧಿಸದ ಕುರಿತು ಸಂತ್ರಸ್ತ ಕುಟುಂಬಗಳೆಲ್ಲ ಸೇರಿ ಹೊಸ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics