ಮೋದಿ ಮಾತಿಗೆ ಡ್ಯಾನ್ಸ್ ಮಾಡುವ ಬಸವರಾಜ ಬೊಮ್ಮಾಯಿನ ಸೋಲಿಸಿ ಮನೆಗೆ ಕಳಿಸಿ: ಸಿಎಂ ಕರೆ
ಮೋದಿ ಮಾತಿಗೆ ಡ್ಯಾನ್ಸ್ ಮಾಡುವ ಬಸವರಾಜ ಬೊಮ್ಮಾಯಿನ ಸೋಲಿಸಿ ಮನೆಗೆ ಕಳಿಸಿ: ಸಿಎಂ ಕರೆ

ರಾಣೆಬೆನ್ನೂರು, (ಮೇ 3): ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ. ಕರಿ ಕಂಬಳಿ ವೇಷದ ಮೋದಿಯವರದ್ದು ಡ್ರಾಮಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರ ಮಠ ಅವರ ಗೆಲುವಿನ ಸಂದೇಶ ನೀಡಲು ನಡೆಸಿದ ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 

ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕೊಂಡು ಡ್ರಾಮಾ ಮಾಡ್ತಾವ್ರೆ. 

ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ ಎಂದು ಕರೆ ನೀಡಿದರು. 

ಕಾರ್ಮಿಕರು, ರೈತರು, ಮಹಿಳೆಯರು, ಶ್ರಮಿಕರು, ಹಿಂದುಳಿದವರು ಸೇರಿ ಎಲ್ಲ ವರ್ಗಗಳಿಗೆ ಆರ್ಥಿಕ ಶಕ್ತಿ ನೀಡುವುದು ಕಾಂಗ್ರೆಸ್ ಮಾತ್ರ. ಇತಿಹಾಸ ತೆಗೆದು ನೋಡಿ ಎಂದರು. 

ಹತಾಶ ಮೋದಿಯಿಂದ ಸುಳ್ಳುಗಳ ಸುರಿಮಳೆ: ಈ ಬಾರಿ NDA ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗಿ ಮೋದಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ. ನಾಚಿಕೆ ಇಲ್ಲದೆ ಸುಳ್ಳು ಹೇಳುತ್ತಿದ್ದಾರೆ. 

ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಹಿಂದುಳಿದವರ ಮೀಸಲಾತಿ ಕಿತ್ತುಕೊಳ್ಳುತ್ತದೆ ಎನ್ನುವ ಸುಳ್ಳುಗಳನ್ನು ಸೃಷ್ಟಿಸಿ, ಸುಳ್ಳುಗಳಿಂದ ಹಿಂದುಳಿದವರನ್ನು ಬಕ್ರಾ ಮಾಡಬಹುದು ಎಂದುಕೊಂಡು ಓಡಾಡುತ್ತಿದ್ದಾರೆ. 

ಮೋದಿಯವರೇ ಸಂವಿಧಾನ ಓದಿ, ನಿಮಗೆ ಓದಲು ಆಗದಿದ್ದರೆ ಯಾರಿಂದಲಾದರೂ ಓದಿಸಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. 

ಮಂಡಲ್ ವರದಿಯನ್ನು ವಿರೋಧಿಸಿ ರಥಯಾತ್ರೆ ನಡೆಸಿ ಅಮಾಯಕ ಹಿಂದುಳಿದ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸಿ ದೂಡಿದ್ದು ನಿಮ್ಮವರೇ ಅಲ್ಲವೇ ಮೋದಿ? 

ಮಗಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಟ್ಟಾಗ ಇದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಅಲ್ಲವೇ ಮೋದಿಜಿ. ನಿಮಗೆ ತಿಳಿವಳಿಕೆ ಇಲ್ಲದಿದ್ದರೆ ಸ್ವಲ್ಪ ಓದಿ ತಿಳಿದುಕೊಳ್ಳಿ ಎಂದರು.

ಈ ಕಾರಣಕ್ಕೆ ಮಹಿಳೆಯರು, ಶ್ರಮಿಕರು, ದುಡಿಯುವ ವರ್ಗಗಳು, ಹಿಂದುಳಿದವರು, ದಲಿತರು ಒಂದೇ ಒಂದು ಮತವನ್ನೂ ಬಿಜೆಪಿಗೆ ಹಾಕಬಾರದು ಎಂದು ಕರೆ ನೀಡಿದರು. 

ಬೊಮ್ಮಾಯಿ ಡ್ಯಾನ್ಸ್ ಡ್ಯಾನ್ಸ್: ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿ ಪಡಿಸಿ ಎಂದರೆ ಮೋದಿ ಹೇಳಿದಂತೆ ಡ್ಯಾನ್ಸ್ ಡ್ಯಾನ್ಸ್ ಮಾಡಿಕೊಂಡು ಕಾಲ ಕಳೆದರು ಎಂದು ವ್ಯಂಗ್ಯವಾಡಿದರು. 

ಮೋದಿ ಎದುರಿಗೆ ಹೆದರಿ, ಬೆದರಿ ನಿಂತು ರಾಜ್ಯದ ಪರವಾಗಿ ಮಾತನಾಡದೆ 40% ಕಮಿಷನ್ ಎಣಿಸಿಕೊಂಡು ತಾಕತ್ತು, ದಮ್ಮು ಅಂತ ಡೈಲಾಗ್ ಹೊಡ್ಕೊಂಡು ಓಡಾಡುತ್ತಿದ್ದಾರೆ ಎಂದರು.

ರಾಜ್ಯಕ್ಜೆ, ಹಾವೇರಿ ಗದಗ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ನಯಾಪೈಸೆ ಅನುಕೂಲ ಮಾಡದ ಬೊಮ್ಮಾಯಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು. 

ಈ ಬೊಮ್ಮಾಯಿ ಕತೆ ಒಂದಾದರೆ  ಆ ಮೋದಿ ಕತೆ ಇನ್ನೊಂದು. ಮೋದಿ ಮೋದಿ ಎಂದು ನಂಬಿದ್ದ ದೇಶದ ಯುವಕ ಯುವತಿಯರಿಗೆ ಮೂರು ನಾಮ ಬಳಿದು ಕೈಗೆ ಖಾಲಿ ಚೊಂಬು ನೀಡಿದ ಮೋದಿ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದೆಯೇ ಎಂದು ಪ್ರಶ್ನಿಸಿದರು.

ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀವಿ ಎಂದು ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿ ಗೆದ್ದು ಬಂದ ಮೋದಿ ಡೀಸೆಲ್,‌ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಕಾಳುಬೇಳೆ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿ ಭಾರತೀಯರ ಕೈಗೆ ಖಾಲಿ ಚೊಂಬು ನೀಡಿದರು. 

ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನಂಬಿಸಿ ರೈತರ ಓಟು ಪಡೆದ ಮೋದಿ ಈಗ ರೈತರ ಖರ್ಚು ಮೂರು ಪಟ್ಟು ಆಗುವಂತೆ ಮಾಡಿ ರೈತರ ಕೈಗೂ ಖಾಲಿ ಚೊಂಬು ನೀಡಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನಾನು ಮುಖ್ಯಮಂತ್ರಿಯಾಗಿ ಸಾಲ ಮನ್ನಾ ಮಾಡಿದೆ. ನಾವು ಮಾಡಿದ ಕಸಲಸವನ್ನು ಮೋದಿಯಾಗಲಿ, ಬೊಮ್ಮಾಯಿ ಆಗಲಿ ಏಕೆ ಮಾಡಲಾಗಲಿಲ್ಲ ಎಂದು ಪ್ರಶ್ನಿಸಿದರು. 

ನಾನು ಸಿಎಂ ಆಗಿದ್ದಾಗ 14000 ಮನೆಗಳನ್ನು ಕಟ್ಟಿಸಿ ಜನರಿಗೆ ಕೊಟ್ಟೆವು. ನೀವು ಸಿಎಂ ಆಗಿ ಒಂದೇ ಒಂದು ಮನೆಯನ್ನೂ ಕೊಡಲಾಗಲಿಲ್ಲವಲ್ಲಾ ಏಕೆ? ಈ ಚಂದಕ್ಕೆ ನಿಮಗೆ ಓಟು ಬೇಕಾ ಎಂದು ಪ್ರಶ್ನಿಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲಾ ಜಾತಿ, ಎಲ್ಲಾ ಧರ್ಮಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಶಕ್ತಿ ನೀಡುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. 

AICC ಯಿಂದ 25 ಗ್ಯಾರಂಟಿಗಳಿಗೆ ರಾಹುಲ್ , ಖರ್ಗೆ ಸಹಿ ಮಾಡಿದ್ದಾರೆ; ರಾಜ್ಯದಲ್ಲಿ ನಾವು ಐದು ಗ್ಯಾರಂಟಿಗಳನ್ನು ಕೊಟ್ಟಂತೆ ರಾಷ್ಟ್ರೀಯ ಕಾಂಗ್ರೆಸ್ 25 ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಈ ಗ್ಯಾರಂಟಿ ಪತ್ರಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಸಹಿ ಹಾಕಿದ್ದಾರೆ ಎಂದರು. 

ಮಹಿಳೆಯರ ಖಾತೆಗೆ ಒಂದು ಲಕ್ಷ ರೂಪಾಯಿ, ಇಡಿ ದೇಶದ ರೈತರ ಸಾಲ ಸಂಪೂರ್ಣ ಮನ್ನಾ, ನಿರುದ್ಯೋಗಿ ಯುವಕ ಯುವತಿಯರ ಖಾತೆಗೆ ಒಂದು ಲಕ್ಷ ರೂಪಾಯಿ ಜಮೆ ಆಗ್ತದೆ, ಪ್ರತಿಯೊಬ್ಬ ಭಾರತೀಯರಿಗೆ 25 ಲಕ್ಷದ ಆರೋಗ್ಯ ವಿಮೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿಯಂತೆ ಕಾಯ್ದೆ ಜಾರಿ ಮಾಡಿ ರೈತರಿಗೆ ನೆರವು, ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಇಂತಹ 25 ಗ್ಯಾರಂಟಿಗಳ ಪತ್ರಕ್ಕೆ ರಾಹುಲ್ ಮತ್ತು ಮಲ್ಲಿಕಾರ್ಜುಖ ಖರ್ಗೆಯವರು ಸಹಿ ಹಾಕಿದ್ದಾರೆ. 

ಬಿಜೆಪಿ ಭಾರತೀಯರ ಭಾವನೆಗಳನ್ನು ಕೆರಳಿಸಿ ಬದುಕಿನ ಜತೆ ಚೆಲ್ಲಾಟ ಆಡುತ್ತದೆ. ಕಾಂಗ್ರೆಸ್ ಭಾರತೀಯರ ಭಾವನೆಗಳನ್ನು ಗೌರವಿಸುತ್ತಲೇ ಬದುಕನ್ನು ಮೇಲೆತ್ತುವ ಕೆಲಸ ಮಾಡುತ್ತದೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics

HL

education