ಬೆಂ.ಗ್ರಾ.ಜಿಲ್ಲೆಯಲ್ಲಿ ಮಳೆ; ಸಿಡಿಲು ಬಡಿದು ಒಬ್ಬ ಮಹಿಳೆ, 20ಕ್ಕೂ ಹೆಚ್ಚು ಕುರಿ-ಮೇಕೆ ಸಾವು..!
ಬೆಂ.ಗ್ರಾ.ಜಿಲ್ಲೆಯಲ್ಲಿ ಮಳೆ; ಸಿಡಿಲು ಬಡಿದು ಒಬ್ಬ ಮಹಿಳೆ, 20ಕ್ಕೂ ಹೆಚ್ಚು ಕುರಿ-ಮೇಕೆ ಸಾವು..!

ಹೊಸಕೋಟೆ, (ಮೇ.03): ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಆರ್ಭಟಿಸಲಾರಂಭಿಸಿದೆ. ಇದರ ನಡುವೆಯೇ ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಗಣಗಲೂರು ಗ್ರಾಮದಲ್ಲಿ ಶುಕ್ರವಾರ ಸಿಡಿಲು ಬಡಿದು ಕುರಿಗಾಯಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ರತ್ನಮ್ಮ(43 ವರ್ಷ) ಮೃತ ಮಹಿಳೆಯಾಗಿದ್ದು, ಈಕೆ ಜತೆ 20ಕ್ಕೂ ಹೆಚ್ಚು ಕುರಿ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ.

ಗಣಗಲು ಗ್ರಾಮದ ಕುರಿಗಾಹಿ ಮಹಿಳೆ ರತ್ನಮ್ಮ ಶುಕ್ರವಾರ ಎಂದಿನಂತೆ ಕುರಿ ಮೇಕೆಗಳನ್ನು ಗ್ರಾಮದ ಹೊರ ಭಾಗದಲ್ಲಿ ಮೇಯಿಸಲು ಹೋಗಿದ್ದಾಳೆ. ಈ ವೇಳೆ ಜೋರು ಮಳೆ ಶುರುವಾಗಿದ್ದು, ರಕ್ಷಣೆಗಾಗಿ ರತ್ನಮ್ಮ ತನ್ನ ಕುರಿ ಮೇಕೆಗಳೊಂದಿಗೆ ಹತ್ತಿರದ ಬೇವಿನ ಮರದಡಿಯಲ್ಲಿ ಆಶ್ರಯಪಡೆದುಕೊಂಡಿದ್ದಾಳೆ.

ಈ ಸಮಯದಲ್ಲಿ  ಸಿಡಿಲು ಬಡಿದಿದ್ದು, ಮರದಡಿಯಲ್ಲಿದ್ದ ರತ್ನಮ್ಮ ಹಾಗೂ ಸುಮಾರು 20ಕ್ಕೂ ಹೆಚ್ಚು ಕುರಿಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ವಿಷಯ ತಿಳಿದು ಸ್ಥಳಕ್ಕೆ ಹೊಸಕೋಟೆ ಉಪ ವಿಭಾಗದ ಡಿವೈಎಪಿ ಪಿ.ಮಲ್ಲೇಶ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ಘಟನೆಯ ಬಗ್ಗೆ ಪ್ರಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಹೊಸಕೋಟೆ ತಾಲೂಕಿನಲ್ಲಿ ಕುರಿ ಮತ್ತು ಮೇಕೆಗಳನ್ನು ಮೇಯಿಸಲು ಹೋಗಿ ಮಳೆ ಬಂದಾಗ ಮರದಡಿಯಲ್ಲಿ ನಿಂತಿದ್ದ ಮಹಿಳೆಗೆ ಸಿಡಿಲು ಬಡಿದು ಮಹಿಳೆ ಹಾಗೂ ಕುರಿ ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಿಡಿಲು ಬಡಿದು ಸಾವನ್ನಪ್ಪಿರುವ ಮಹಿಳೆ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

politics

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics