ತವರಿಗೆ ಹಣ ಕೊಟ್ಟ ಪತ್ನಿ.. ಕೊಂದು ಸಂಪ್‌ಗೆ ಹಾಕಿದ ಪತಿ..!
ತವರಿಗೆ ಹಣ ಕೊಟ್ಟ ಪತ್ನಿ.. ಕೊಂದು ಸಂಪ್‌ಗೆ ಹಾಕಿದ ಪತಿ..!

ದಾಬಸ್‌ಪೇಟೆ, (ಮೇ.03); ಹಣಕಾಸಿನ ವಿಚಾರದ ಜಗಳದಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಕೊಲೆಯಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸೋಂಪುರ ಹೋಬಳಿಯ ಗೊಟ್ಟಿಗೆರೆ ಗ್ರಾಮದ ಜಯಲಕ್ಷ್ಮಿ (36 ವರ್ಷ) ಕೊಲೆಯಾದ ಮಹಿಳೆ. ಶ್ರೀನಿವಾಸ್ (42 ವರ್ಷ) ಕೊಲೆ ಆರೋಪಿ. 

ಶ್ರೀನಿವಾಸ್ ಅವರ ಒಂದೂವರೆ ಎಕರೆ ಜಮೀನು ಕಳೆದ ಒಂದು ವರ್ಷದ ಹಿಂದೆ ಅವೇರಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಎರಡು ಕೋಟಿಗೂ ಅಧಿಕ ಪರಿಹಾರ ಹಣ ಬಂದಿತ್ತು. 

ಈ ಹಣದಲ್ಲಿ ಕೊಲೆಗೀಡಾಗಿರುವ ಜಯ ಲಕ್ಷ್ಮಿ ಬಹುಪಾಲು ಹಣವನ್ನು ತವರು ಮನೆಗೆ ನೀಡಿದ್ದರು. ಈ ವಿಚಾರದಲ್ಲಿ ಆಗಾಗ ಪತಿಪತ್ನಿಯರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಏ.29ರಂದು ಬೆಳಗ್ಗೆ ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ವಾದವಿವಾದ ವಾಗಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಶ್ರೀನಿವಾಸ್ ಜಯಲಕ್ಷ್ಮಿ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.

ಶ್ರೀನಿವಾಸ್ ಮನೆ ಮುಂದೆ ಇದ್ದ ನೀರಿನ ಸಂಪ್‌ಗೆ ಶವವನ್ನು ಹಾಕಿದ್ದ. ಮಕ್ಕಳು ಪತ್ನಿಯನ್ನು ಪ್ರಶ್ನಿಸಿದಾಗ ಹುಡುಕುವ ನಾಟಕ ಆಡಿದ್ದಾನೆ. ಬಳಿಕ ಶವ ವನ್ನು ಹೂಳಲು ದೊಡ್ಡ ಗುಂಡಿ ತೆಗೆದಿದ್ದಾನೆ. ಇದನ್ನು ಮಕ್ಕಳು ಪ್ರಶ್ನಿಸಿದಾಗಲೂ ಗಿಡ ನೆಡಲು ಎಂದು ಯಾಮಾರಿಸಿದ್ದಾನೆ. 

ಮೇ 30ರಂದು ಬೆಳಗ್ಗೆ ಮೃತ ಮಹಿಳೆ ಮಗಳು ಸಂಪ್‌ನಲ್ಲಿ ನೀರು ತೆಗೆದುಕೊಳ್ಳಲು ಬಾಗಿಲು ತೆಗೆದಾಗ ತಾಯಿಯ ಶವ ಕಂಡಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಮಕ್ಕಳನ್ನು ಬೆದರಿಸಿದ್ದಾನೆ. ಆದರೂ ಮಕ್ಕಳು ತಾಯಿಯ ತವರುಮನೆ, ಊರಿನವರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics

HL

education

HL

crime

HL

crime