ಕರಡಿ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿದೆ ಜಂಗಲ್ ಲಾಡ್ಜ್; ಇಲ್ಲಿದೆ ವಿಡಿಯೋ
ಕರಡಿ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿದೆ ಜಂಗಲ್ ಲಾಡ್ಜ್; ಇಲ್ಲಿದೆ ವಿಡಿಯೋ

ವಿಜಯಪುರ, (ಮಾ.03); ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಜಂಗಲ್ ಲಾಡ್ಜ್ ಬಳಿ ಅಮ್ಮನ ಬೆನ್ನೇರಿ ಮರಿ ಕರಡಿಗಳ ತುಂಟಾಟ, ನೋಡುಗರ ಮನಸ್ಸನ್ನ ಮುದಗೊಳಿಸಿದೆ.

ತಾಯಿ ಮಗುವಿನ ಬಾಂಧವ್ಯವೇ ಹಾಗೇ, ಕೇವಲ ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಕೂಡ ಈ ಬಾಂಧವ್ಯ ಹೊರತಾಗಿಲ್ಲ ಎಂಬುದಕ್ಕೆ ಈ ಕರಡಿಗಳು ಸಾಕ್ಷ್ಯ ನೀಡಿದೆ. 

ಹತ್ತು ದಿನದ ಎರಡು ಮರಿಗಳ ಮುದ್ದಿನ ಆಟಕ್ಕೆ ಸಫಾರಿ ಪ್ರಿಯರು, ಫೋಟೋಗ್ರಾಫರ್ ಗಳು ಮನಸೋತಿದ್ದಾರೆ. ಕರಡಿ ಸಫಾರಿ, bird watch ಗೆ ಪ್ರಖ್ಯಾತಿ ಕಮಲಾಪುರದ ಜಂಗಲ್ ಲಾಡ್ಜ್ ಪಡೆದಿದೆ.

ಸಫಾರಿಗೆ ಬರುವವರ ಕಾತುರ, ಕೌತುಕ ಹೆಚ್ಚಿಸಿದ ಮರಿಗಳು, ಅಮ್ಮನ ಬೆನ್ನೇರಿ ಮರಿಗಳು ಬಂಡೆ ಹತ್ತಿ ಇಳಿಯುವುದನ್ನು ಸಫಾರಿ ಪ್ರಿಯರು ಕಣ್ತುಂಬಿಕೊಂಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--