ಹೆತ್ತ ತಾಯಿಯ ಕೊಂದು ನೇಣಿಗೆ ಶರಣಾದ ಮಗ..!
ಹೆತ್ತ ತಾಯಿಯ ಕೊಂದು ನೇಣಿಗೆ ಶರಣಾದ ಮಗ..!

ಧಾರವಾಡ, (ಮಾ.04); ಹೆತ್ತ ಮಗನೇ ತಾಯಿಯನ್ನು ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸಯಲ್ಲಾಪುರ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ತಾಯಿ ಶಾರದಾ (60 ವರ್ಷ) ಹತ್ಯೆಗೈದ ಮಗ ರಾಜೇಶ (40 ವರ್ಷ) ಎಂದು ಗುರುತಿಸಲಾಗಿದೆ.

ರಾಜೇಶ್ ತಾಯಿ ಶಾರದಾ ಅವರು ಸರ್ಕಾರದಿಂದ 19 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದರು. ಈ ಪಿಂಚಣಿ ಹಣಕ್ಕಾಗಿ ಹಾಗೂ ಖಾಲಿ ಸೈಟ್‌ಗಾಗಿ ಮಗ ರಾಜೇಶ್ ಅವರನ್ನು ಪೀಡಿಸುತ್ತಿದ್ದ ಅಲ್ಲದೇ ಖಾಲಿ ಜಾಗವನ್ನು ತನ್ನ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದ ಅದಕ್ಕಾಗಿ ತಾಯಿ ಜೊತೆ ನಿರಂತರ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಈ ವೇಳೆ ತಾಯಿ ಹಾಗೂ ಮಗನ ನಡುವೆ ಜಗಳ ತಾರಕ್ಕಕ್ಕೇರಿದ್ದು, ಕೋಪದಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....