ಬಡವರ ಪರವಾಗಿ ಕೆಲಸ ಮಾಡಿದ ಮಾನವೀಯ ಹೃದಯವಂತ ಕೆ.ಶಿವರಾಮ್
ಬಡವರ ಪರವಾಗಿ ಕೆಲಸ ಮಾಡಿದ ಮಾನವೀಯ ಹೃದಯವಂತ ಕೆ.ಶಿವರಾಮ್

ದೊಡ್ಡಬಳ್ಳಾಪುರ, (ಮಾ.01); ‘ಉನ್ನತ ಸರ್ಕಾರಿ ಹುದ್ದೆಯನ್ನು ಬಳಸಿಕೊಂಡು ಬಡವರ ಪರವಾಗಿ ಕೆಲಸ ಮಾಡಿದ ಮಾನವೀಯ ಹೃದಯವಂತ ಶಿವರಾಮ್’ ಗುರುವಾರ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು ಕುರಿತಂತೆ  ಛಲವಾದಿ ಮಹಾಸಭಾ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಗಣ್ಯರು ಅವರನ್ನು ಸ್ಮರಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಮಾತೃ ಭಾಷೆಯಾದ ಕನ್ನಡದಲ್ಲಿ ಪ್ರಥಮ ಬಾರಿಗೆ ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗುವ ಮೂಲಕ ಇಡೀ ನಾಡು ಹೆಮ್ಮೆ ಪಡುವಂತೆ ಮಾಡಿದ ಕೀರ್ತಿ ಶಿವರಾಮ್ ಅವರದ್ದು. ಸಾಧನೆಗೆ ಬಡತನ ಅಡ್ಡಿಯಲ್ಲಿ, ಪರಿಶ್ರಮ ಇದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವ ನುಡಿಯನ್ನು ನಿಜ ಜೀವನದಲ್ಲಿ ಸಾಕಾರ ಮಾಡಿದವರು.

ಅಂಬೇಡ್ಕರ್ ಅವರ ಆಶಯದಂತೆ ಬಡವರು ಹಾಗೂ ಹಿಂದುಳಿದ ಸಮುದಾಯ ವಿದ್ಯಾವಂತರಾಗಬೇಕು. ಆಗ ಮಾತ್ರ ಸಮಾನತೆ ಸಾಧಿಸಲು ಸಾಧ್ಯ ಎನ್ನುವ ಸತ್ಯದ ಅರಿವನ್ನು ಹೊಂದಿದ್ದರು. ತಾವು ಅಧಿಕಾರದಲ್ಲಿ ಇದ್ದಷ್ಟು ದಿನವು ಬಡವರ ಪರವಾಗಿ ಸಹಾಯ ಮಾಡುವ ಯಾವುದೇ ಕೆಲಸ ಇದ್ದರು ಅದಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದರು.

ದಾವರಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಹಾಗೂ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾಗ ಬಡವರ ಪರವಾದ ಹಲವಾರು ಕೆಲಸಗಳನ್ನು ತಮ್ಮ ಶಕ್ತಿ ಮೀರಿ ಮಾಡಿದ್ದಾರೆ. ಆರ್ಥಿಕವಾಗಿ ಸಬಲರಾಗಲು ಅಗತ್ಯ ಇರುವ ಶಾಶ್ವತ ಕೆಲಸಗಳನ್ನು ಮಾಡಿದ್ದರು ಎಂದು ಸ್ಮರಿಸಿದರು.

ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜಪ್ಪ ಮಾತನಾಡಿ, ಪಶುಪಾಲನ ಇಲಾಖೆಯಲ್ಲಿ  ಕೆಲಸ ಮಾಡುವಾಗ ನಮ್ಮ ತಾಲೂಕು ಸೇರಿದಂತೆ ರಾಜ್ಯದ ಹಲವಾರು ಜನ ಬಡವರಿಗೆ ಹಸುಗಳನ್ನು ಕೊಡಿಸುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಶಿವರಾಮ್ ಮಾಡಿದ್ದರು.

ತಮ್ಮ ಸಮುದಾಯವು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಛಲವಾದಿ ಮಹಾಸಭಾ ಸ್ಥಾಪನೆ ಮಾಡುವ ಮೂಲಕ ಸರ್ಕಾರದ ಯೋಜನೆಗಳು, ರಾಜಕೀಯ ಪ್ರಾತಿನಿಧ್ಯವನ್ನು ದೊರಕಿಸಲು ಶ್ರಮಿಸಿದ್ದರು ಎಂದು ಸ್ಮರಿಸಿದರು.

ಶ್ರದ್ದಾಂಜಲಿ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ,ಛಲವಾದಿ ಮಹಾಸಭಾ ಕಾರ್ಯದರ್ಶಿ ಮೂರ್ತಿ, ಮುಖಂಡರಾದ ಉದಯಶಂಕರ್, ವೆಂಕಟೇಶ್, ನಾಗರಾಜ್, ಮುನಿಯಪ್ಪ, ದೊಡ್ಡನರಸಪ್ಪ, ವಕೀಲರ ಸಂಘದ ನಿರ್ದೇಶಕ ಶಿವಕುಮಾರ್ ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime