ಕಚ್ಚತೀವು ವಿವಾದ; ಅಣ್ಣಾಮಲೈ ಹೇಳಿದ್ದು ಸುಳ್ಳೆಂದ ಶ್ರೀಲಂಕಾ ಸಚಿವ..!
ಕಚ್ಚತೀವು ವಿವಾದ; ಅಣ್ಣಾಮಲೈ ಹೇಳಿದ್ದು ಸುಳ್ಳೆಂದ ಶ್ರೀಲಂಕಾ ಸಚಿವ..!

ಚೆನ್ನೈ, (ಏ.02): ಕಚ್ಚತೀವು ದ್ವೀಪವನ್ನು ಶ್ರೀಲಂಕಾದಿಂದ ಹಿಂದಕ್ಕೆ ಪಡೆಯಲು ಭಾರತ  ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮಿಳುನಾಡು ಮೂಲದ ಶ್ರೀಲಂಕಾ ಸಚಿವ ಜೀವನ್ ಥೋಂಡಮನ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಬಳಿಕ ಭಾರತದಲ್ಲಿ ವಿವಾದಗಳು ಭುಗಿಲೆದ್ದಿತ್ತು. ಆದರೆ ಇದನ್ನು ಹಿಂದಕ್ಕೆ ಪಡೆಯಲು ಭಾರತ ಸರ್ಕಾರ ಈವರೆಗೆ ಪ್ರಯತ್ನಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರು ಇತ್ತಿಚೆಗೆ ಶ್ರೀಲಂಕಾದಿಂದ ಕಚ್ಚತೀವು ದ್ವೀಪವನ್ನು ಮರುಪಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿರುವುದು ಸುಳ್ಳು ಎಂದಿರುವ ಅವರು, ಕಚ್ಚತೀವು ದ್ವೀಪದ ಅಧಿಕಾರವನ್ನು ಹಿಂದಿರುಗಿಸಲು ಭಾರತದಿಂದ ಅಧಿಕೃತ ಸಂವಹನ ನಡೆದಿಲ್ಲ. 

ಇದೇ ವೇಳೆ ಶ್ರೀಲಂಕಾದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಆರೋಗ್ಯಕರವಾಗಿದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....