ಕನ್ನಡ ನಾಮಫಲಕ ಕಡ್ಡಾಯ; ಸತ್ತಗುರು ಆದ ಸದ್ಗುರು..!
ಕನ್ನಡ ನಾಮಫಲಕ ಕಡ್ಡಾಯ; ಸತ್ತಗುರು ಆದ ಸದ್ಗುರು..!

ಬೆಂಗಳೂರು, (ಏ.01): ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024ದ ಅನ್ವಯ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಇರಲೇಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಗಳಲ್ಲಿನ ಪ್ರಗತಿ ಕುರಿತಂತೆ ಖುದ್ದು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕದ ಅಂಗಡಿ ಮಾಲೀಕರು ಎಲ್ಲಾ ವ್ಯವಹಾರಗಳಿಗೆ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ.

ಈ ನಿಯಮವನ್ನು ಅಳವಡಿಸಿಕೊಳ್ಳಲು ಹೋದ ಅಂಗಡಿ ಮಾಲೀಕನೋರ್ವ, ಬರಹಗಾರನ ಎಡವಟ್ಟಿನಿಂದ ಮುಜುಗರಕ್ಕೆ ಒಳಗಾಗಿದ್ದಾನೆ.

ಬೆಳಗಾವಿಯ ಬಟ್ಟೆ ಅಂಗಡಿಯ ನಾಮಫಲಕದಲ್ಲಿ ಕನ್ನಡದಲ್ಲಿ ಸತ್ತಗುರು ಎಂದು ಬರೆಯಲಾಗಿದೆ. ವಾಸ್ತವವಾಗಿ ಆ ಅಂಗಡಿಯ ಹೆಸರು ಸದ್ಗುರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರವಾದ ಟ್ರೋಲ್ಗೆ ಗುರಿಯಾಗಿದೆ.

ಕೂಡಲೇ ಎಚ್ಚೆತ್ತ ಅಂಗಡಿ ಮಾಲೀಕ, ಕನ್ನಡ ಮಾತನಾಡುವ ಸ್ಥಳೀಯರ ಸಹಾಯದಿಂದ, ಸರಿಯಾದ ಕನ್ನಡ ಅನುವಾದಗಳನ್ನು ಹಾಕುವ ಮೂಲಕ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರು.

ಕನ್ನಡ ನಾಮಫಲಕದ ಗಡುವು ಸಮೀಪಿಸುತ್ತಿದ್ದಂತೆ ಅಂಗಡಿ ಮಾಲೀಕರು ದಂಡಕ್ಕೆ ಹೆದರಿ ಆತುರಕ್ಕೆ ಬಿದ್ದು, ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಭಾಷೆಯ ನಿಖರತೆ ಪ್ರಶ್ನಿಸಲಾಗುತ್ತಿದೆ.

ಇದೇ ರೀತಿ ಬೆಂಗಳೂರಿನ ಅನೇಕ ಅಂಗಡಿಗಳ ನಾಮ ಫಲಕಗಳು ಅನುವಾದ ದೋಷಗಳನ್ನು ಎದುರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿವೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....