ವೃಷಭ ರಾಶಿಯ ಏಪ್ರಿಲ್ 2024 ರಾಶಿ ಫಲ: ಕೊಂಚ ಮಾನಸಿಕ ಕಿರುಕುಳ
ವೃಷಭ ರಾಶಿಯ ಏಪ್ರಿಲ್ 2024 ರಾಶಿ ಫಲ: ಕೊಂಚ ಮಾನಸಿಕ ಕಿರುಕುಳ

ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಮಾಸಿಕ ವೃಷಭ ರಾಶಿಯವರಿಗೆ  ಆರೋಗ್ಯ, ಶಿಕ್ಷಣ, ವೃತ್ತಿ, ಹಣಕಾಸು, ಕುಟುಂಬ ಮತ್ತು ವ್ಯಾಪಾರಕ್ಕೆ ಸಂಬಂದಿಸಿದ ಫಲಿತಾಂಶಗಳು ಹೀಗಿದೆ.

ಈಗ ನಿಮಗೆ ರಾಹು ಬಲದಿಂದ ಉತ್ತಮ ಫಲಗಳು ದೊರೆಯುತ್ತದೆ. ರಾಹು ನಿಮಗೆ ಬಹಳ ಶಕ್ತಿ ಪರಾಕ್ರಮ ಕೊಟ್ಟು ಕಾಪಾಡುತ್ತಾನೆ. ವೃಷಭ ರಾಶಿಗೆ ರಾಹು ಮಿತ್ರ. ಹಾಗಾಗಿ ಲಾಭಸ್ಥಾನದ ರಾಹುವಿನಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ನಾನಾ ಮೂಲಗಳಿಂದ ಹಣದ ಹರಿವು ಹರಿದು ಬರುತ್ತದೆ.

ಸ್ಟಾಕ್ಸ್‌ನಲ್ಲಿ ಉತ್ತಮ ಲಾಭ ಇದೆ. 12ರ ಗುರು ಖರ್ಚುಗಳನ್ನು ಕೊಟ್ಟರೂ ಹಣದ ಹರಿವು ಉತ್ತಮವಾಗಿಯೇ ಇರುತ್ತದೆ. ಕೊಂಚ ಮಾನಸಿಕ ಕಿರುಕುಳ ಇರುತ್ತದೆ. ಆದರೆ ನಿಮ್ಮ ಇಷ್ಟದೈವವನ್ನು ನಂಬಿ. ಪ್ರಾಮಾಣಿಕರಾಗಿ ಇರಿ. ನಿಮ್ಮನ್ನು ಆಕ್ಷೇಪಿಸುವವರು ತಣ್ಣಗಾಗುತ್ತಾರೆ. ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ನಿಮ್ಮನ್ನು ದೂರ ಮಾಡಿರುವವರೂ ಸಹ ನಿಮ್ಮ ಬಳಿ ವಾಪಸು ಬರುತ್ತಾರೆ. ಈಗ ನಿಮಗೆ ಗುರುಬಲ ಹಾಗೂ ಶನಿ ಬಲ ಎರಡೂ ಇಲ್ಲದಿದ್ದರೂ ರಾಹುಬಲದಿಂದ ನೀವು ಮುಂದುವರೆಯುತ್ತೀರಿ. ರಾಹುವಿನ ಶಕ್ತಿ ನಿಮ್ಮನ್ನು ಕಾಪಾಡುತ್ತದೆ. ಎದುರಿಸಿ ಮುನ್ನಡೆಯುವ ಶಕ್ತಿ ಕೊಡುತ್ತದೆ.

ವೃಷಭ ರಾಶಿ: ಕೃತ್ತಿಕಾ (2, 3, 4 ಪಾದ), ರೋಹಿಣಿ (4), ಮೃಗಶಿರ (1, 2 ಪಾದ) ಅಡಿಯಲ್ಲಿ ಜನಿಸಿದವರು ವೃಷಭ  ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ.

ವೃಷಭ ರಾಶಿಗೆ ಸೂಚಿಸಲಾದ ಅಕ್ಷರಗಳು: ಇ, ಉ, ಎ, ಒ, ವ, ವಿ, ವು, ವೆ, ವೊ.

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....