ನಿತೀಶ್ ಕುಮಾ‌ರ್ ಸಿಎಂ ಕುರ್ಚಿ ಸೇಫ್..!
ನಿತೀಶ್ ಕುಮಾ‌ರ್ ಸಿಎಂ ಕುರ್ಚಿ ಸೇಫ್..!

ಬಿಹಾರ, (ಫೆ.12): ಬಿಜೆಪಿಯೊಂದಿಗೆ ಮೈತ್ರಿಯಾಗಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನಿತೀಶ್ ಕುಮಾ‌ರ್ ಅವರು ಇಂದು ವಿಶ್ವಾಸ ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಲಾಪ ಪ್ರಾರಂಭದಲ್ಲಿಯೇ RJD ಪಕ್ಷದ ಮೂವರು ಶಾಸಕರು ಬೆಂಬಲ ಸೂಚಿಸಿದ್ದಾರೆ. ಒಟ್ಟು 243 ಸ್ಥಾನಗಳಲ್ಲಿ 122 ಶಾಸಕರ ಬೆಂಬಲ ಪಡೆಯಬೇಕಿತ್ತು. ಅದರಲ್ಲಿ ನಿತೀಶ್, 129 ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಮೂಲಕ ತಮ್ಮ ನೇತೃತ್ವದಲ್ಲಿ ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. ಆರ್ ಜೆಡಿಗೆ ಕೈಕೊಟ್ಟು ಕಮಲ ಮುಡಿದಿದ್ದ ನಿತೀಶ್ ಸಿಎಂ ಗದ್ದುಗೆ ತಮ್ಮದೇ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....