ಹರಿತಲೇಖನಿ ದಿನಕ್ಕೊಂದು ಕಥೆ: ‘ಆಂಜನೇಯನ’ ಜನ್ಮದ ಕಾರಣಗಳು
ಹರಿತಲೇಖನಿ ದಿನಕ್ಕೊಂದು ಕಥೆ: ‘ಆಂಜನೇಯನ’ ಜನ್ಮದ ಕಾರಣಗಳು

ಆಂಜನೇಯನಿಗೆ ಕೇಸರಿನಂದನ ವಾಯುಪುತ್ರ ಶಿವಪುತ್ರ ಅಂಜನಿಪುತ್ರ ಹೀಗೆ ಹಲವಾರು ಹೆಸರುಗಳು ಇದೆ. ಇವರ ಹುಟ್ಟಿಗೆ ಪ್ರಮುಖವಾದ ಕಾರಣಗಳು ಇವೆ. ಇದೆಲ್ಲ ಕಾರ್ಯ ಕಾರಣಕ್ಕಾಗಿ ಆಗಿತ್ತು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಅವುಗಳಲ್ಲಿ. ದಕ್ಷ ಪ್ರಜಾಪತಿ ಮಗಳು ‘ಸತಿ’ ತಂದೆ ದಕ್ಷನಿಗೆ ಇಷ್ಟವಿಲ್ಲದಿದ್ದರೂ ಶಿವನನ್ನು ವಿವಾಹವಾಗುತ್ತಾಳೆ. ಮುಂದೆ ಶಿವನಿಗೆ ಅವಮಾನ ಮಾಡ ಬೇಕೆಂದು  ದಕ್ಷ ಯಜ್ಞವನ್ನು ಮಾಡಿ ಅಳಿಯ ಮಗಳಿಗೆ ಆಹ್ವಾನವನ್ನು ಕೊಡಲಿಲ್ಲ. ಶಿವ ಬೇಡ ಎಂದರು ಕೇಳದೆ ಸತಿ ಆಹ್ವಾನವಿಲ್ಲದೆ ಯಜ್ಞಕ್ಕೆ ಬಂದಳು. ಅಲ್ಲಿ ತಂದೆಯಿಂದ ಅವಮಾನಿತಳಾಗಿ, ಯಜ್ಞಕ್ಕೆ ಆಹುತಿಯಾದಳು.

ಶಿವನಿಗೆ ತಿಳಿದು ದುಃಖವಾಗಿ ಮೃತಪಟ್ಟ ಸತಿಯ ಶರೀರವನ್ನೇ ಹಿಡಿದುಕೊಂಡು ಮೂಲೋಕಗಳಲ್ಲೂ ಅಲೆಮಾ ರಿಯಂತೆ ಅಲೆಯುತ್ತಿದ್ದನು. ಇದರಿಂದ ಜಗತ್ತಿನ ಕಾರ್ಯಗಳೆಲ್ಲವೂ ನಿಂತವು ದೇವಾನು ದೇವತೆಗಳು ಚಿಂತಿತರಾದರು. ಕೊನೆಗೆ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಚೂರು ಚೂರು ಮಾಡಿದನು. ಆ ಚೂರುಗಳೆ ಶಕ್ತಿಪೀಠಗಳಾಗಿವೆ. ಸತಿಯ ದೇಹವನ್ನು ಚೂರು ಚೂರು ಮಾಡಿದ ಕಾರಣ ಶಿವನಿಗೆ ಹರಿಯ ಮೇಲೆ ಸಿಟ್ಟು ಬಂದಿತು.

ನನ್ನ ಸತಿಯ ನೆನಪಿನಲ್ಲಿ ಇರುವಾಗ ಅವಳನ್ನು ನನ್ನಿಂದ ದೂರ ಮಾಡಿದೆ. ನೀನು ಸಹ ಮುಂದೊಂದು ದಿನ ಪತ್ನಿಯಿಂದ ದೂರ ವಾಗುವ ನೋವನ್ನು ಅನುಭವಿಸು ಎಂದು ಶಾಪ ಕೊಟ್ಟನು. ಸ್ವಲ್ಪ ಹೊತ್ತಿಗೆ ಅವನ ಕೋಪ ಕಡಿಮೆಯಾಗಿ ಇಂತಹ ಶಾಪ ಕೊಟ್ಟೆನಲ್ಲ ಎಂದು ಮರುಗಿ, ಪ್ರತಿಯಾಗಿ ವರ ಕೊಟ್ಟನು. ನೀನು ತ ಪತ್ನಿಯಿಂದ ದೂರವಾಗಿ ನೋವಿನಲ್ಲಿರುವಾಗ ನಾನು ನಿನ್ನ ಜೊತೆಯಲ್ಲಿದ್ದು ನಿನ್ನನ್ನು ನಿನ್ನ ಪತ್ನಿ ಯನ್ನು ಒಂದು ಮಾಡುತ್ತೇನೆ. ಎಂದಾಗ ಶ್ರೀಹರಿಯು ಲೋಕ ಕಲ್ಯಾಣಾರ್ಥವಾಗಿ ಇವೆಲ್ಲ ಹೀಗೆ ಆಗಬೇಕಿತ್ತು ಎಂದನು. 

ಇತ್ತ ಲಂಕಾ ಸಾಮ್ರಾಜ್ಯದಲ್ಲಿ ದುಷ್ಟ ರಾವಣ ಮೆರೆದಾಡುತ್ತಿದ್ದು, ಶಿವನನ್ನು ಕುರಿತು ಕಠಿಣ ತಪಸ್ಸು ಮಾಡಿ ಸಾವಿಲ್ಲದಂತೆ ವರವನ್ನು ಪಡೆದಿದ್ದ. ಹಾಗೂ ತನಗೆ ಸಾವು ಬರುವುದಾದರೆ ನರನಿಂದ ಮತ್ತು ಕೋತಿಯಿಂದ ಬರಬೇಕೆಂದು ವರ ಪಡೆದಿದ್ದನು.

ಒಮ್ಮೆ ರಾವಣ ಅಟ್ಟಹಾಸದಿಂದ ಮೆರೆಯುತ್ತಾ ಕೈಲಾಸ ಪರ್ವತವನ್ನೇ  ಎತ್ತಲು ನೋಡಿದನು. ಅಡ್ಡ ಬಂದ ನಂದಿಗೆ ನೀನೂಂದು ಕಪಿ ಇದ್ದಹಾಗೆ ಇದ್ದೀಯ ನನ್ನನ್ನು ತಡೆಯುವೆಯಾ?  ಎಂದು ಅಹಂಕಾರದಿಂದ ನುಡಿದು ನಂದಿಗೆ ಅವಮಾನ ಮಾಡಿದನು. ನಂದಿಯು ಸಿಟ್ಟಿನಿಂದ ನಿನ್ನ ಸಾಮ್ರಾಜ್ಯ ಹಾಗೂ ನಿನ್ನ ಅವನತಿ ಆ ಕೋತಿಗಳಿಂದಲೇ ಆಗಲಿ ಎಂದು ಶಾಪ ಕೊಟ್ಟನು. 

ಈ ಎಲ್ಲಾ ಕಾರ್ಯಗಳು ಕೈಗೂಡಬೇಕಾದರೆ ಮತ್ತೊಂದು ಕಾರಣ ಬೇಕು. ರಾಕ್ಷಸರ ಸಂಹಾರಕ್ಕೆಂದೇ ಮಹಾವಿಷ್ಣು ನರನ ಅವತಾರದಲ್ಲಿ ದಶರಥನ ಮಗನಾಗಿ ಭುವಿಗೆ ಬಂದನು. ಹನುಮಂತನ ಅವತಾರವಾಗಬೇಕು. ದೇವಲೋಕದಲ್ಲಿ ಕುಂಜಿಕಾತಲ ಎಂಬ ಅಪ್ಸರೆ ಇದ್ದಳು ಅವಳು ಗುರು ಬೃಹಸ್ಪತಿಗೆ ಸಹಾಯಕಳಾಗಿದ್ದಳು.

ಒಮ್ಮೆ ಪೂಜಾ ಕಾರ್ಯಗಳಿಗೆ  ಹೂ ತರಲು ಹೋದಳು. ಅಲ್ಲಿ ಗಂಧರ್ವ ಸ್ತ್ರೀ ಪುರುಷರು ಜಲಕ್ರೀಡೆ ಆಡುತ್ತಿರುವುದನ್ನು ನೋಡಿ ಮೋಹಿತಳಾಗಿ ಹಾಗೆ ಬಂದಳು. ಧ್ಯಾನ ಮಗ್ನ ರಾಗಿದ್ದ ಬೃಹಸ್ಪತಿ ಗುರುಗಳನ್ನು ನೋಡಿ ಗುರುಗಳು ಎಂಬುದನ್ನು ಮರೆತು ಒಬ್ಬ ಸುಂದರ ತರುಣನನ್ನಾಗಿ ಕಲ್ಪಿಸಿಕೊಂಡಳು. ಅವರು ಧ್ಯಾನದಲ್ಲಿ ಮುಳುಗಿದ್ದ ರು. ಅವರ ಧ್ಯಾನ ಭಂಗಮಾಡಲು  ಕೋತಿಯಂತೆ ಅವರ ಜೊತೆ ಚೇಷ್ಟೆ ಮಾಡಿ ದಳು. ಎಚ್ಚರಗೊಂಡ ಬೃಹಸ್ಪತಿಗಳು ಕೋಪಗೊಂಡು ಕೋತಿಯಂತೆ ಚೇಷ್ಟೇ ಮಾಡಿ ನನ್ನ ಧ್ಯಾನಕ್ಕೆ ಭಂಗ ತಂದಿರುವೆ. ನೀನು ಕೋತಿಯಾಗಿ ಜನಿಸು ಎಂದು ಶಾಪ ಕೊಟ್ಟರು. 

ಕುಂಜಿತಲ ಮೊದಲಿನಿಂದಲೂ ಶಿವನನ್ನು ಧ್ಯಾನಿಸುತ್ತಾ,  ಭಗವಂತ ಪರಮೇಶ್ವರ ನಾನು ಲೋಕಕಲ್ಯಾಣಾರ್ಥವಾಗಿ ಏನಾದರೂ ಮಾಡಬೇಕು. ನನಗೆ ಅಂತಹ ಅವಕಾಶವನ್ನು ಕಲ್ಪಿಸು.  ನನ್ನ ಜನ್ಮ ನಷ್ಟವಾಗಬಾರದು ಎಂದು ಪ್ರಾರ್ಥಿಸಿ ವರ ಪಡೆದಿದ್ದಳು. ಈಗ ಆ ಅವಕಾಶ ಒದಗಿ ಬೃಹಸ್ಪತಿಗಳ ಶಾಪದಂತೆ ಆಕೆ ಗೌತಮ ಅಹಲ್ಯೆಗೆ ಮಗಳಾಗಿ ಜನಿಸಿದಳು. ಅಂಜನಾ ಎಂಬ ಹೆಸರಿನಲ್ಲಿ ಒಳ್ಳೆಯ ಸಂಸ್ಕಾ ರವಂತಳಾಗಿ ಬೆಳೆದಳು.

ಮುಂದೆ ವಾನರ ರಾಜ ಕೇಸರಿ ಜೊತೆ ವಿವಾಹವಾಯಿತು. ಬಹಳ ಕಾಲವಾದರೂ ಮಕ್ಕಳಾಗಲಿಲ್ಲ. ಕೇಸರಿಯು ಪತ್ನಿಗೆ ವಾಯುದೇವನನ್ನು ಆರಾಧಿಸು ಎಂದು ಹೇಳಿ  ಸಂಚಾರಕ್ಕೆ ಹೊರಟನು. ಒಮ್ಮೆ ಅಂಜನಾ ಹೂವು ಪತ್ರ ತರಲು ಕಾಡಿಗೆ ಹೋಗಿದ್ದಳು. ಆ ಸಮಯದಲ್ಲಿ ಗಗನ ಮಾರ್ಗದಲ್ಲಿ ಶಿವ ಪಾರ್ವತಿ ಯರು ಸಂಚರಿಸುತ್ತಿದ್ದರು. ಪಾರ್ವತಿ  ಭೂಮಿಯಲ್ಲಿ ಎರಡು ಮಂಗಗಳು ಅನ್ಯೋನ್ಯ ವಾಗಿರು ವುದನ್ನು ಕಂಡು ಶಿವನಿಗೆ ಹೇಳಿದಳು.

ಆ ಕೋತಿಗಳು ಎಷ್ಟು ಸಂತೋಷವಾಗಿವೆ ಅಲ್ಲವೇ ಎಂದಳು. ಶಿವನು ಹಾಸ್ಯಕ್ಕಾಗಿ, ಹಾಗಾದರೆ ನಾನು ನೀನು ಭೂಮಿ ಮೇಲೆ ಹೋಗಿ ಸ್ವಲ್ಪ ಕಾಲ ಹಾಗೆ ಇದ್ದುಬಿಡೋಣ ಎಂದನು. ಪಾರ್ವತಿಗೂ ಸರಿ ಎನಿಸಿತು ಅವರು ಕೋತಿಯ ಜನ್ಮದಲ್ಲಿ ಸ್ವಲ್ಪ ಕಾಲ ಉಳಿದರು. ಆ ಸಮಯದಲ್ಲಿ ಪಾರ್ವತಿ ಗರ್ಭ ಧರಿಸಿದಳು. ಆ ಗರ್ಭವನ್ನು ಯಾರಲ್ಲಿ ಸೇರಿಸು ವುದು ಎಂದು ಯೋಚಿಸುತ್ತಿರುವಾಗ ಶಿವನು ವಾಯುದೇವನನ್ನು ಕರೆದು ನಿಯಮ ದಂತೆ ಈ ಗರ್ಭವನ್ನು ಅಂಜನಾಳ ಗರ್ಭಕ್ಕೆ ಸೇರಿಸು ಎಂದನು. ವಾಯುದೇವ ಆ ಗರ್ಭವನ್ನು ಆಕೆಯ ಕಿವಿಯ ಮೂಲಕ ಅವಳ ಗರ್ಭಕ್ಕೆ ಸೇರಿಸಿದನು. ಹೀಗೆ ಎಲ್ಲರ  ಶಾಪ ವರಗಳಿಂದಾಗಿ ಅಂಜನಾದೇವಿ ಕೇಸರಿಗೆ ಮಗನಾಗಿ ಶುಭಮೂರ್ತದಲ್ಲಿ ಆಂಜನೇಯ ಜನ್ಮ ತಾಳಿದನು.

ಆಂಜನೇಯ  ಬಹಳ ಶಕ್ತಿವಂತನಾಗಿದ್ದು ಚಿಕ್ಕಂದಿನಲ್ಲಿ ಸೂರ್ಯನನ್ನೇ ಹಣ್ಣು ಎಂದು ತಿನ್ನಲು ಹೋಗಿ ಇಂದ್ರನ ವಜ್ರಾಯದಿಂದ ಹೊಡೆತ ತಿಂದು ನಂತರ ವಾಯುದೇವ ಗಾಳಿ ನಿಲ್ಲಿಸಿ, ದೇವಾನುದೇವತೆಗಳು ಹೆದರಿ ಎಲ್ಲರೂ ಸೇರಿ ಆಂಜನೇಯನಿಗೆ ಸಾಕಷ್ಟು ವರದಾನಗಳನ್ನು ಕೊಟ್ಟು ಚಿರಂಜೀವಿಯಾಗೆಂದು ವರವನ್ನು ದಯಪಾಲಿಸಿದರು, ಇಂಥ ಅಪರಿಮಿತವಾದ ಶಕ್ತಿ ಸಾಮರ್ಥ್ಯದಿಂದ ಹೊಮ್ಮಿ ಬೆಳೆದನು.

ಇತ್ತ ದಶರಥನ ಮಗ ರಾಮ, ತಾಯಿ ಕೈಗೆ ಹಾಗೂ ತಂದೆ ದಶರಥನ ಆಣತಿಯಂತೆ  14 ವರ್ಷಗಳ ವನವಾಸಕ್ಕೆ ಪತ್ನಿ ಸೀತೆ ತಮ್ಮ ಲಕ್ಷ್ಮಣ ರೊಂದಿಗೆ ಬಂದನು. ಆ ಸಮಯದಲ್ಲಿ  ಆಂಜನೇಯ ಮತ್ತು ರಾಮನ ಭೇಟಿಯಾ ಗುತ್ತದೆ.  ತಾಯಿ ಅಂಜನಾಳ ಆಣತಿಯಂತೆ ಅಲ್ಲಿಯವರೆಗೂ ರಾಮನನ್ನೇ ಧ್ಯಾನಿಸುತ್ತಿದ್ದ ಹನುಮಂತನಿಗೆ ರಾಮನ ದರ್ಶನವಾಗಿ ರಾಮನು ಸಂಪರ್ಕವಾದ ಮೇಲೆ ಅವನು ಸಂಪೂರ್ಣವಾಗಿ ರಾಮನೇ ತನ್ನ ಆರಾಧ್ಯನೆಂದು ಸೇವಿಸುತ್ತಾ ರಾಮನ ಮುಂದಿನ ಎಲ್ಲಾ ಕೆಲಸ ಕಾರ್ಯಗಳು ಹನುಮಂತನ ಸಹಕಾರದೊಂದಿಗೆ ನಡೆಯಿತು.

ಸೀತೆಯನ್ನು ರಾವಣನ ಬಂಧನದಿಂದ ಬಿಡಿಸಿ ರಾಮಾ ಸೀತೆಯನ್ನು ಒಂದು ಗೂಡಿಸಿದನು ಸ್ವರ್ಣ ಲಂಕೆಯನ್ನು ನಾಶ ಮಾಡಿದನು. ಹನುಮಂತ ರಾಮಾಯಣ ಎಂಬ ಹೊನ್ನಿನ ಮಾಲೆಯಲ್ಲಿ ಮುತ್ತಿನ ಮಣಿಗಳಾಗಿ ಹನುಮಂತನು ಶೋಭಿಸಿದನು.

ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics