U-19: ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ..
U-19: ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ..

ಬೆನೂನಿ(ದಕ್ಷಿಣ ಆಫ್ರಿಕಾ): U-19 ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ 79 ರನ್ ಗಳಿಂದ ಸೋಲು ಅನುಭವಿಸಿದೆ. 

ಈ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಭಾರತ ರನ್ನರ್ ಅಪ್‌ಗೆ ತೃಪ್ತಿಪಡಬೇಕಾಯಿತು. 

ಆಸೀಸ್ ನೀಡಿದ್ದ 254 ಟಾರ್ಗೆಟ್ ಬೆನ್ನಟ್ಟಿದ ಭಾರತ 43.5 ಓವರ್ ಗಳಲ್ಲಿ 174 ರನ್ ಗಳಿಗೆ ಆಲೌಟ್ ಆಯಿತು. ಭಾರತ ತಂಡದ ಪರ ಆದರ್ಶ್-47, ಮುರುಗನ್-42, ಮುಶೀರ್-22 ರನ್ ಗಳಿಸಿದರು. 

ಆಸೀಸ್ ಪರ ಬಿಯರ್ಡ್ಕನ್ & ಮ್ಯಾಕ್‌ಮಿಲನ್-3, ವಿಡ್ಲರ್-2 & ಆಂಡರ್ಸನ್-1 ವಿಕೆಟ್ ಪಡೆದರು. ಆ ಮೂಲಕ 6ನೇ ಬಾರಿಗೆ ಕಪ್ ತನ್ನದಾಗಿಸಿಕೊಳ್ಳುವ ಭಾರತದ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--