ನನ್ನ ತೆರಿಗೆ ನನ್ನ ಹಕ್ಕು ಅಭಿಯಾನ ಅಮಿತ್ ಶಾ ಬಳಿ ಚರ್ಚಿಸುವ ವಿಚಾರವಲ್ಲ; ಬಿ.ವೈ.ವಿಜಯೇಂದ್ರ
ನನ್ನ ತೆರಿಗೆ ನನ್ನ ಹಕ್ಕು ಅಭಿಯಾನ ಅಮಿತ್ ಶಾ ಬಳಿ ಚರ್ಚಿಸುವ ವಿಚಾರವಲ್ಲ; ಬಿ.ವೈ.ವಿಜಯೇಂದ್ರ

ಮೈಸೂರು, (ಫೆ.11); ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಇಂದಿನ ಮೈಸೂರು ಪ್ರವಾಸ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಕೋರ್ ಕಮಿಟಿಯ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಮೈಸೂರು ಪ್ರವಾಸ ಯಶಸ್ವಿಯಾಗಿದೆ. ಸುತ್ತೂರಿಗೆ ಭೇಟಿ ನೀಡಿ ನಂತರ ಮೈಸೂರು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು, ಕೋರ್ ಕಮಿಟಿ ಸಭೆ ಕೂಡ ಯಶಸ್ವಿಯಾಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಎನ್‌ಡಿಎ ಕೂಟವಾದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹೇಗಿರಬೇಕು. ಮತ್ತು ಪ್ರತಿ ಬೂತಿನಲ್ಲಿ ಗರಿಷ್ಠ 10% ಮತಗಳನ್ನು ಜಾಸ್ತಿ ಮಾಡಬೇಕು ಎಂದು ಸಲಹೆ, ಸೂಚನೆ ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಅಮಿತ್ ಶಾ ಅವರು ಸೂಚಿಸಿರುವ ಕಾರ್ಯತಂತ್ರವನ್ನು ಪ್ರತಿ ಬೂತಿನಲ್ಲಿ ಅನುಷ್ಠಾನಗೊಳಿಸಿ, ಬಿಜೆಪಿ ಜೆಡಿಎಸ್‌ ಪಕ್ಷಕ್ಕೆ ಗೆಲುವು ನೀಡುವ ನಿಟ್ಟಿನಲ್ಲಿ, ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ, ಒಂದಾಗಿ ದುಡಿಯು ಭರವಸೆ ನೀಡಲಾಗಿದೆ ಎಂದರು

ಜೆಡಿಎಸ್‌- ಬಿಜೆಪಿ ನಡುವಿನ ಸೀಟು ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಈ ಕುರಿತಂತೆ ಇಂದು ಯಾವುದೇ ಚರ್ಚೆಯಾಗಿಲ್ಲ. ಅತೀ ಶೀಘ್ರದಲ್ಲೇ ಎರಡು ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಯಾರೇ ಅಭ್ಯರ್ಥಿಯಾಗಲಿ ಅವರ ಗೆಲುವಿಗೆ ಕಾರ್ಯತಂತ್ರ ಸಿದ್ದ ಮಾಡಲಿದ್ದೇವೆ ಎಂದರು.

ನನ್ನ ತೆರಿಗೆ ನನ್ನ ಹಕ್ಕು ಎಂಬ ರಾಜ್ಯ ಸರ್ಕಾರದ ಅಭಿಯಾನ ಎದುರಿಸುವ ಕಾರ್ಯತಂತ್ರದ ಕುರಿತು ಅಮಿತ್ ಶಾ ಬಳಿ ಪ್ರಸ್ತಾಪವಾಯಿತೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಅಮಿತ್ ಶಾ ಎದುರು ಪ್ರಸ್ತಾಪವ ವಿಚಾರವಲ್ಲ. ತಮ್ಮ ಉಳುಕನ್ನು, ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಈ ರೀತಿಯ ಕುತಂತ್ರದ ಹಾದಿಯಲ್ಲಿ ಮುಖ್ಯಮಂತ್ರಿಗಳು, ಸರ್ಕಾರ ಕೈಹಾಕಿದೆ. 

ಕೊಟ್ಟ ಕುದುರೆ ಏರದವ ವೀರನು ಅಲ್ಲ ಶೂರನೂ ಅಲ್ಲ ಎಂದು ಮುಖ್ಯಮಂತ್ರಿಗಳು ಬಜೆಟ್ ಬಾಷಣದಲ್ಲಿ  ಹೇಳಿದ್ದರು. ಆದರೆ ಆ ಕುದುರೆಯನ್ನು ಏರಲಾರದೆ‌.. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗದೆ ಈ ರೀತಿಯ ಕುಂಟು ನೆಪವನ್ನು ಹೇಳುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ರಾಜ್ಯದ ಜನರ ಮುಂದೆ ಯಶಸ್ವಿಯಾಗಿ ಬಿಚ್ಚಿಡುತ್ತೇವೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....