ಸುತ್ತೂರು ಜಾತ್ರ ಮಹೋತ್ಸವದಲ್ಲಿ ಜನರನ್ನು ಜಾಗೃತಗೊಳಿಸುವ ಕಾರ್ಯವಾಗಿದೆ; ಅಮಿತ್ ಶಾ ಪ್ರಶಂಸೆ
ಸುತ್ತೂರು ಜಾತ್ರ ಮಹೋತ್ಸವದಲ್ಲಿ ಜನರನ್ನು ಜಾಗೃತಗೊಳಿಸುವ ಕಾರ್ಯವಾಗಿದೆ; ಅಮಿತ್ ಶಾ ಪ್ರಶಂಸೆ

ಮೈಸೂರು, (ಫೆ.11); ನರೇಂದ್ರ ಮೋದಿಯವರು ದೇಶದ ಸಂಸ್ಕೃತಿ ಬೆಳೆಸುವಲ್ಲಿ, ದೇಶ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶಾದ್ಯಂತ ನಮ್ಮ ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ, ಉಜ್ಜಯಿನಿ, ಬದರಿನಾಥ್ ಕಾರಿಡಾರ್ ಅಭಿವೃದ್ಧಿಯಾಗಿವೆ. ದೇಶದ ಆಯುರ್ವೇದ, ಯೋಗ, ಭಾಷೆ, ಸಂಸ್ಕೃತಿ ಪುನರ್ ಸ್ಥಾಪನೆಯಾಗುತ್ತಿದೆ. ಸುತ್ತೂರು ಮಠವೂ ಅಯೋಧ್ಯೆಯಲ್ಲಿ ಅತಿಥಿ ಗೃಹ ನಿರ್ಮಿಸುತ್ತಿದೆ ಎಂದರು.

ಸುತ್ತೂರು ಮಠ 24 ಪೀಠಾಧಿಪತಿಗಳನ್ನು ಕಂಡಿದೆ. ಅವರೆಲ್ಲರಿಗೂ ನನ್ನ ಪ್ರಣಾಮಗಳು.  ಸುತ್ತೂರು ಕ್ಷೇತ್ರದಲ್ಲಿ ಇವತ್ತಿನ ಮಠಾಧೀಶರವರೆಗೂ ಅದ್ಭುತವಾದ ಸೇವೆ ಮಾಡಿದ್ದಾರೆ. ಅವರ ಸೇವೆಯನ್ನು ಬಿಜೆಪಿ ಗೌರವಿಸುತ್ತದೆ ಎಂದರು.

ನಾನು ನಿನ್ನೆಯೇ ಬರಬೇಕಿತ್ತು. ಒಂದು ದಿನ ಕಲಾಪ ವಿಸ್ತರಣೆಯಾಯಿತು. ಅದರಿಂದ ಬರಲಾಗಿಲಿಲ್ಲ. ಜತೆಗೆ ಅಹಮದ್ ಕಾರ್ಯಕ್ರಮ ರದ್ದು ಮಾಡಿ ಸುತ್ತೂರು ಮಠಕ್ಕೆ ಬಂದೆ. ಆಗ ಪತ್ರಕರ್ತರು ಅಹಮದ್ ಕಾರ್ಯಕ್ರಮ ಬಿಟ್ಟು ಮೈಸೂರಿಗೆ ಹೋಗುತ್ತಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು ಕಟ್ಟಡ ಉದ್ಘಾಟನೆಗೆ ಹೋಗುತ್ತಿದ್ದೇನೆ ಎನ್ನಲಿಲ್ಲ, ನಾನು ಸುತ್ತೂರು ಸ್ವಾಮಿಜೀಯವರ ದರ್ಶನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಬಂದೆ ಎಂದು ಶಾ ಹೇಳಿದರು.

ಇಷ್ಟು ದಿನ ನಡೆದ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಜನರನ್ನು ಜಾಗೃತಗೊಳಿಸುವ ಕಾರ್ಯವಾಗಿದೆ. ಈ ಮೂಲಕ ಸುತ್ತೂರು ಮಠ ಸಮಾಜ ಸೇವೆ ಸಲ್ಲಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಸನ್ಮಾನವಾಗಿದೆ. ಇದು ಸಂತಸದ ವಿಚಾರ. ಸುತ್ತೂರು ಶ್ರೀಗಳು ಅಯೋಧ್ಯೆಯಲ್ಲಿ ಸುತ್ತೂ‌ರು ಶಾಖಾ ಮಠ ಮಾಡುವ ಮನಸ್ಸು ಮಾಡಿದ್ದಾರೆ.  ಅವರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದರು.

ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ಕಾರಿಡಾರ್, ಉಜ್ಜಯಿನಿಯಲ್ಲಿ ಕಾರಿಡಾರ್ ಸೇರಿ ಹಲವು ಕೊಡುಗೆ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ದೇಶದ ಸಂಸ್ಕೃತಿ ಬೆಳೆಸುವಲ್ಲಿ, ದೇಶ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ನಮ್ಮ ಕಾರ್ಯ ಎಂದಿನಂತೆ ಮುಂದುವರೆಯಲಿದೆ. ನಮ್ಮ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಉಳಿವಿಗಾಗಿ ಅದರಂತೆ ಚುನಾವಣೆಗೆ ಹೋಗುತ್ತೇವೆ ಎಂದು ಅಮಿತ್ ಶಾ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಹೇಳಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 'ಭಕ್ತರ ಕಾಮಧೇನುವಾಗಿ ಶಿವರಾತ್ರೀಶ್ವರರ ಆಶೀರ್ವಾದ ಸಿಗುತ್ತಿದೆ. ಭಾರತೀಯ ಗ್ರಾಮೀಣ ಸಂಸ್ಕೃತಿಯನ್ನು ಸುತ್ತೂರು ಜಾತ್ರೆ ಪುನರುಜ್ಜಿವನಗೊಳಿಸುತ್ತಿದೆ. ಮಂತ್ರ ಮಹರ್ಷಿ ಹಾಗೂ ರಾಜೇಂದ್ರ ಸ್ವಾಮೀಜಿ ಅವರು ಮಠದ ಕೆಲಸವನ್ನು ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ವಿಸ್ತರಿಸಿದರು' ಎಂದರು.

ಅಮಿತ್ ಶಾ ಅವರಿಗೆ ಚಾಮುಂಡೇಶ್ವರಿ ಶ್ರೀಗಂಧದ ಪ್ರತಿಮೆ ಹಾಗೂ ಶಾ ಅವರ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ, ಸಂಸದ ಪ್ರತಾಪ ಸಿಂಹ, ಶಾಸಕ ಬಸವರಾಜ ಬೊಮ್ಮಾಯಿ, ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬಿಜೆಪಿ ಮುಖಂಡ ಸಿ.ಟಿ.ರವಿ ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....