ರಂಗೋಲಿ ಮೂಲಕ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಲೈಂಗಿಕ ನಿಂದನೆ ತಡೆ ಜಾಗೃತಿ
ರಂಗೋಲಿ ಮೂಲಕ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಲೈಂಗಿಕ ನಿಂದನೆ ತಡೆ ಜಾಗೃತಿ

ದೊಡ್ದಬಳ್ಳಾಪುರ, (ಡಿ.06); ಬಾಲ್ಯ ವಿವಾಹ ಪದ್ಧತಿ ನಿಷೇಧ ಮತ್ತು ಮಕ್ಕಳ ಲೈಂಗಿಕ ನಿಂದನೆ ತಡೆಯುವ ಕುರಿತಂತೆ ರಂಗೋಲಿ ಬಿಡಿಸುವ ಮೂಲಕ ತಾಲೂಕಿನ ಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ ಅರಿವು ಮೂಡಿಸಲಾಯಿತು.

ಶ್ರೀ ಬೃಂದಾವನ  ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದವತಿಯಿಂದ ಲಿಂಗತ್ವ ದೌರ್ಜನ್ಯದ ವಿರುದ್ದ ಅಭಿಯಾನ ಕೈಗೊಂಡಿದ್ದು, ಈ ಅಭಿಯಾನ ಅಂಗವಾಗಿ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಲೈಂಗಿಕ ನಿಂದನೆ ತಡೆ ಅರಿವು ಮೂಡಿಸುವರಂಗೋಲಿ ಬಿಡಿಸಲಾಗಿತ್ತು.

ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತಂತೆ ಪ್ರತಿಜ್ಞೆ ಮಾಡಿದರು. ಅಲ್ಲದೆ ಇಂದೇ ನಿಮ್ಮ ಧ್ವನಿ ಎತ್ತಿ ಮತ್ತು ನಾವು ಯಾವುದೇ ಹೆಣ್ಣಿನ ಧ್ವನಿಯನ್ನು  ಹತ್ತಿಕ್ಕಲು ಬಿಡುವುದಿಲ್ಲ ಎಂಬ ಘೊಷಣೆಗಳ ಮೂಲಕ ಜಾಥಾ ಮಾಡಲಾಯಿತು. 

ಗ್ರಾಮಪಂಚಾಯಿತಿ ಪಿಡಿಒ ಮಲ್ಲೇಶ್ ಮಾತನಾಡಿ, ಬಾಲ್ಯ ವಿವಾಹ ಪದ್ಧತಿ ಎನ್ನುವುದು ಸಮಾಜಕ್ಕೆ ಪಿಡುಗು. ನಾವೆಷ್ಟೇ ವಿದ್ಯಾವಂತರಾಗಿ ವೈಜ್ಞಾನಿಕವಾಗಿ ಮುನ್ನುಗ್ಗಿದ್ದರು ಸಹ ಇನ್ನೂ ಅನೇಕ ಗ್ರಾಮಗಳಲ್ಲಿ ಈ ಬಾಲ್ಯ ವಿವಾಹ ಪದ್ಧತಿ ಇದೆ. ಆದ್ದರಿಂದ ಇದನ್ನು ತೊಡೆದು ಹಾಕುವುದು ಎಲ್ಲರ ಕರ್ತವ್ಯವಾಗಿದೆ. ಯಾರೇ ಇಂತಹ ಪ್ರಕರಣಗಳು ನಡೆದಲ್ಲಿ ಕೂಡಲೇ ಜಾಗ್ರತರಾಗಿ ದೂರವಾಣಿ ಕರೆ ಮುಖಾಂತರ ತಿಳಿಸಿ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಿ ಎಂದರು.

ಈ ಸಂದರ್ಭದಲ್ಲಿ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಚೈತ್ರ.ಸಿ.ಎಂ., ವಲಯ ಮೇಲ್ವಿಚಾರಕ ಶ್ರೀನಿವಾಸ್ ಶಿಕ್ಷಕರಾದ ನರಸಿಂಹಮೂರ್ತಿ, ಆನಂದ್ ಸೇರಿದಂತೆ ಒಕ್ಕೂಟದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....