ಕಾಶ್ಮೀರದ ಸಮಸ್ಯೆಗೆ ನೆಹರು ಕಾರಣ: ಅಮಿತ್ ಶಾ
ಕಾಶ್ಮೀರದ ಸಮಸ್ಯೆಗೆ ನೆಹರು ಕಾರಣ: ಅಮಿತ್ ಶಾ

ಹೊಸದಿಲ್ಲಿ, (ಡಿ.06); ಅಂದಿನ ಪ್ರಧಾನಿ ನೆಹರು ಮಾಡಿರುವ ತಪ್ಪುಗಳಿಂದಾಗಿ ಪಾಕ್ ಅಕ್ರಮಿತ ಕಾಶ್ಮೀರ ಸೃಷ್ಟಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪಂಡಿತ್‌ ನೆಹರು ಪ್ರಧಾನಿಯಾಗಿದ್ದಾಗ ಎರಡು ದೊಡ್ಡ ತಪ್ಪುಗಳಾಗಿದ್ದು ಅದರಲ್ಲಿ ಇದು ಒಂದು. ಹೀಗಾಗಿ ಅನೇಕ ವರ್ಷಗಳ ಕಾಲ ಕಾಶ್ಮೀರದ ಜನತೆ ಕಷ್ಟ ಪಡುವಂತಾಯಿತು ಎಂದರು.

ಯುದ್ಧದಲ್ಲಿ ಸೈನ್ಯ ಗೆಲ್ಲುತ್ತಿದ್ದಾಗ ಕದನ ವಿರಾಮ ಘೋಷಿಸಲಾಗಿದ್ದು ಮೂರು ದಿನ ಕಳೆದಿದ್ದರೆ ಇಂದು ಪಾಕ್ ಅಕ್ರಮಿತ ಕಾಶ್ಮೀರ ಭಾರತದ ಭಗವಾಗಿರುತ್ತಿತ್ತು ಎಂದು ಹೇಳಿದರು.

ಈ ಹೇಳಿಕೆಗೆ ಕಾಂಗ್ರೆಸ್‌ ಸಂಸದರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಅಮಿತ್ ಶಾ ನಿಮ್ಮ ಆಕ್ರೋಶವನ್ನು ನೆಹರು ಮೇಲೆ ತೋರಿಸಿ ಎಂದರು. ಆಗ ಕಾಂಗ್ರೆಸ್ ಸಂಸದರು ಸಭಾತ್ಯಾಗ ನಡೆಸಿದರು.

ಬಳಿಕ ಮಾತು ಮುಂದುವರಿಸಿದ ಅಮಿತ್ ಶಾ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿ, ಜಮ್ಮು ಮತ್ತು ಕಾಶ್ಮೀರದ ಎಲ್ಲ ಜನರ ಚಿಕಿತ್ಸಾ ವೆಚ್ಚ 5 ಲಕ್ಷದ ವರೆಗೆ ಕೇಂದ್ರ ಸರ್ಕಾರ ಭರಿಸುತ್ತದೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....