ಪ್ರಿಯಾಂಕ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಗ ಮಣಿಕಂಠ ಮೇಲೆ ಮಾರಣಾಂತಿಕ ಹಲ್ಲೆ
ಪ್ರಿಯಾಂಕ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಗ ಮಣಿಕಂಠ ಮೇಲೆ ಮಾರಣಾಂತಿಕ ಹಲ್ಲೆ

ಕಲುಬುರಗಿ, (ನ.20); ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ್ ವಿರುದ್ಧ ಸ್ಪರ್ಧಿಸಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಶನಿವಾರ ತಡರಾತ್ರಿ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.

ಮಾಲಗತ್ತಿ ಸಮೀಪದ ತಮ್ಮ ಫಾರ್ಮ್ ಹೌಸ್‌ನಿಂದ ರಾತ್ರಿ 1.30ರ ಸುಮಾರಿಗೆ ಕಲಬುರಗಿ ಕಡೆಗೆ ಹೊರಟಿದ್ದಾಗ ಕಾಗಿಣಾ ಸೇತುವೆ ಸಮೀಪ ಕಾರು ತಡೆದು ಹಲ್ಲೆ ನಡೆಸಿದ ಬಳಿಕ ಗುಂಪು ಪರಾರಿಯಾಗಿದೆ. 

ಮದ್ಯದ ಬಾಟಲಿ, ಕಲ್ಲುಗಳಿಂದ ದಾಳಿ ಮಾಡಲಾಗಿದೆ. ಇದರಿಂದ ರಾಠೋಡ್ ತಲೆಗೆ ಮತ್ತು ಎದೆ, ತೋಳು, ಕಿವಿಬಳಿ ತೀವ್ರ ಪೆಟ್ಟಾಗಿದೆ. ತಲೆಯಿಂದ ರಕ್ತ ಸುರಿದು ನೆಲಕ್ಕೆ ಬಿದ್ದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಜೊತೆಗಿದ್ದ ಶ್ರೀಕಾಂತ ಸುಲೇಗಾಂವ್ ಅವ ಗಾಯಗಳಾಗಿವೆ. ಶಹಾಬಾದ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಹಲ್ಲೆಗೆ ಪ್ರಿಯಾಂಕ್ ಖರ್ಗೆ ಕಾರಣವೆಂಬ ಆರೋಪ: ತಮ್ಮ ಮೇಲಿನ ಹಲ್ಲೆಗೆ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಕಾರಣ ಎಂದು ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ. 

ಹಲ್ಲೆ ಘಟನೆ ಹಿಂದೆ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ. ಇತ್ತೀಚೆಗೆ ನಾನು ಅವರ ವಿರುದ್ಧ ಬೆಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೆ. ಹೀಗಾಗಿ ನನ್ನ ಕೊಲೆ ಮಾಡಿಸುವ ಉದ್ದೇಶದಿಂದ ದಾಳಿ ಮಾಡಿಸಿದ್ದಾರೆ ಎಂದು ದೂರಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature