ಇದು ಕ್ರೀಡೆ... ಯುದ್ಧ ಅಲ್ಲವಲ್ಲ ಏಕೆ ಬೇಸರ..?; ಟಿ.ಎನ್.ಸೀತಾರಾಂ
ಇದು ಕ್ರೀಡೆ... ಯುದ್ಧ ಅಲ್ಲವಲ್ಲ ಏಕೆ ಬೇಸರ..?; ಟಿ.ಎನ್.ಸೀತಾರಾಂ

ಬೆಂಗಳೂರು, (ನ.19); ಭಾರತ V/S ಆಸ್ಟ್ರೇಲಿಯಾ ನಡುವೆ ಇಂದು ನಡೆದ ವಿಶ್ವಕಪ್ ಏಕದಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 06 ವಿಕೆಟ್‌ಗಳ ಅಂತರದಲ್ಲಿ ಜಯವನ್ನು ಸಾಧಿಸಿದ್ದು, ಸತತ ಗೆಲುವಿನ ಕಾರಣ ವಿಶ್ವಕಪ್ ಎತ್ತಿಹಿಡಿಯುತ್ತೇವೆಂಬ ಭಾರತೀಯರ ದೃಢವಾದ ವಿಶ್ವಾಸ ಕರಗಿ ನೀರಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಭಾರತ 06 ವಿಕೆಟ್‌ಗಳ ಅಂತರದಲ್ಲಿ ಸೋಲನಪ್ಪಿದ್ದು, ಭಾರತದ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆ, ನೋವು, ಸಂಕಟ ಉಳಿಸಿದೆ.

ಈ ಕುರಿತಂತೆ ಬಹುಮುಖ ವ್ಯಕ್ತಿತ್ವದ ಕಲಾವಿದ, ನಟ, ನಿರ್ದೇಶಕ ದೊಡ್ಡಬಳ್ಳಾಪುರ ತಾಲೂಕಿನ ನಾರಾಯಣರಾವ್ ಸೀತಾರಾಂ (ಟಿ.ಎನ್.ಸೀತಾರಾಂ) ಅವರು ಫೇಸ್ಬುಕ್ ನಲ್ಲಿ ಸಂದೇಶ ನೀಡಿದ್ದು, ಇದು ಕ್ರೀಡೆ...ಯುದ್ಧ ಅಲ್ಲವಲ್ಲ ಏಕೆ ಬೇಸರ ಎಂದು ಭಾರತೀಯ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--