Accident: ಪ್ರಧಾನಿ ಮೋದಿ ರ‍್ಯಾಲಿ ಭದ್ರತೆಗೆ ತೆರಳುತ್ತಿದ್ದ ಆರು ಮಂದಿ ಪೊಲೀಸರು ಸಾವು...!!
Accident: ಪ್ರಧಾನಿ ಮೋದಿ ರ‍್ಯಾಲಿ ಭದ್ರತೆಗೆ ತೆರಳುತ್ತಿದ್ದ ಆರು ಮಂದಿ ಪೊಲೀಸರು ಸಾವು...!!

ರಾಜಸ್ಥಾನ, (ನ.19): ಪೊಲೀಸರು ಸಾಗುತ್ತಿದ್ದ ವಾಹನ ಟ್ರಕ್ ವೊಂದಕ್ಕೆ ಡಕ್ಕಿ ಹೊಡೆದ ಪರಿಣಾಮ ಆರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ನಗೌರ್‌ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಎಲ್ಲ ಪೊಲೀಸ್ ಅಧಿಕಾರಿಗಳು ರಾಜಸ್ಥಾನದ ನಾಗೌರ್ ಜಿಲ್ಲೆಯವರಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದಕ್ಕೆ ಡಿಜಿಪಿ ಉಮೇಶ್ ಮಿಶ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ನಾಗೌರ್ ಜಿಲ್ಲೆಯ ಖಿನ್ವಸರ್ ಪೊಲೀಸ್ ಠಾಣೆಯ ಪೊಲೀಸರಾದ ರಾಮಚಂದ್ರ, ಕುಂಭರಾಮ್, ಥನರಾಮ್, ಲಕ್ಷ್ಮಣ್ ಸಿಂಗ್ ಮತ್ತು ಸುರೇಶ್ ಮೃತಪಟ್ಟರೆ, ಕಾನ್‌ಸ್ಟೆಬಲ್ ಸುಖರಾಮ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸುಖರಾಮ್ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಗಾಯಾಳುಗಳುವನ್ನು ನಾಗೌರ್‌ನ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ನಂತರ ಇಬ್ಬರನ್ನೂ ಗ್ರೀನ್ ಕಾರಿಡಾರ್ ಮೂಲಕ ಜೋಧ್‌ಪುರ ಎಂಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯೆ ಕಾನ್‌ಸ್ಟೆಬಲ್ ಸುಖರಾಮ್ ಸಾವನ್ನಪ್ಪಿದ್ದಾರೆ.

ಪೊಲೀಸ್ ವಾಹನವು ಚಲಿಸುತ್ತಿದ್ದಾಗ ಟ್ರಕ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿ, ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಇದರಿಂದ ಪೊಲೀಸ್‌ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->