ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯದಲ್ಲಿ ಮಗುಚಿ ಬಿದ್ದ ಮದುವೆ ಬಸ್..!!/ ಮೂವರ ಸ್ಥಿತಿ ಗಂಭೀರ
ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯದಲ್ಲಿ ಮಗುಚಿ ಬಿದ್ದ ಮದುವೆ ಬಸ್..!!/ ಮೂವರ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ, (ಜೂ.08): ಮದುವೆಗೆ ಜನರನ್ನು ಕರೆತಂದಿದ್ದ ಬಸ್ ಚಾಲಕ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಮಧುಗಿರಿ ತಾಲೂಕಿನ ಐಡಿ ಹಳ್ಳಿಯಿಂದ ಮದುವೆಗೆ ಜನರನ್ನು ಕರೆತಂದಿದ್ದ ಬಸ್ ಇದಾಗಿದ್ದು, ಚಾಲಕನ ಅಜಾಗರೂಕತೆಯಿಂದ ದೇವಾಲಯ ಹಿಂಭಾಗದಲ್ಲಿ ವೃದ್ದೆಯೋರ್ವರಿಗೆ ಡಿಕ್ಕಿ ಹೊಡೆದಿದ್ದು, ಪಾರಾಗುವ ಬರದಲ್ಲಿ ವೇಗವಾಗಿ ತೆರಳಿದ ವೇಳೆ ರಸ್ತೆ ಬದಿಯ ದಿಬ್ಬದ ಮೇಲೇರಿದ ಪರಿಣಾಮ ಮಗುಚಿ ಬಿದ್ದಿದೆ.

ಘಟನೆಯಲ್ಲಿ ಐಡಿಹಳ್ಳಿ ಗ್ರಾಮದ ಹನುಮಕ್ಕ (65 ವರ್ಷ), ಲಕ್ಷ್ಮೀದೇವಮ್ಮ (56ವರ್ಷ), ಹನುಮಯ್ಯ (71ವರ್ಷ) ಎಂಬುವವರಿಗೆ ತೀವ್ರವಾಗಿ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಅನೇಕ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....