ದೊಡ್ಡಬಳ್ಳಾಪುರ: ಮದಗೊಂಡನಹಳ್ಳಿ ಗ್ರಾಮದಲ್ಲಿ ಮೇಕೆಯನ್ನು ಬಲಿ ಪಡೆದ ಚಿರತೆ
ದೊಡ್ಡಬಳ್ಳಾಪುರ: ಮದಗೊಂಡನಹಳ್ಳಿ ಗ್ರಾಮದಲ್ಲಿ ಮೇಕೆಯನ್ನು ಬಲಿ ಪಡೆದ ಚಿರತೆ

ದೊಡ್ಡಬಳ್ಳಾಪುರ, (ಜ.23): ತಾಲ್ಲೂಕಿನ ಮದಗೊಂಡನಹಳ್ಳಿ ಗ್ರಾಮದ ಸರಹದ್ದಿನ ಅರಣ್ಯದ ಅಂಚಿನ ಭಾನುವಾರ ಸಂಜೆ ಚಿರತೆ ಕಾಣಿಸಿಕೊಂಡಿದೆ. ಮದಗೊಂಡನಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವವರಿಗೆ ಸೇರಿದ್ದ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿ ಒಂದು ಮೇಕೆಯನ್ನು ಹೊತ್ತೊಯ್ದಿದೆ.

ಇದರಿಂದಾಗಿ ಸಂಜೆ ವೇಳೆ ರೈತರು ತೋಟಗಳ ಕಡೆಗೆ ಹೋಗಲು ಭಯಪಡುವಂತಾಗಿದೆ ಎಂದು ಮದಗೊಂಡನಹಳ್ಳಿ ಗ್ರಾಮದ ರೈತ  ಮಂಜುನಾಥ್ ತಿಳಿಸಿದ್ದಾರೆ.

ಮದಗೊಂಡನಹಳ್ಳಿ ಗ್ರಾಮಕ್ಕೆ ಎರಡು ಕಿ.ಮೀ ದೂರದ ನರಸಯ್ಯನಅಗ್ರಹಾರ ಗ್ರಾಮದಲ್ಲಿ ಮೂರು ದಿನಗಳ ಹಿಂದೆಯಷ್ಟೇ ಚಿರತೆಯು ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿ ಒಂದು ಮೇಕೆಯನ್ನು ಬಲಿಪಡೆದಿತ್ತು. ಈಗ ಮದಗೊಂಡನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವುದರಿಂದ ಚಿರತೆ ಈ ಭಾಗದಲ್ಲಿಯೇ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....