ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಹಾಗೂ ಮೋಬೈಲ್ ಆಫ್ ನಲ್ಲಿ ಬೆಳೆ ಸಮೀಕ್ಷೆ ಕುರಿತು ತರಬೇತಿ ಶಿಬಿರ
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಹಾಗೂ ಮೋಬೈಲ್ ಆಫ್ ನಲ್ಲಿ ಬೆಳೆ ಸಮೀಕ್ಷೆ ಕುರಿತು ತರಬೇತಿ ಶಿಬಿರ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ರೈತ ಸಂಪರ್ಕ ಕೇಂದ್ರದವತಿಯಿಂದ ಹೊಸಹಳ್ಳಿ ಹಾಗೂ ಆರೂಢಿಯ ಪ್ರೌಢಶಾಲೆಗಳಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಮೋಬೈಲ್ ಆಫ್ ನಲ್ಲಿ ಬೆಳೆ ಸಮೀಕ್ಷೆ ಕುರಿತು ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಕೃಷಿ ಅಧಿಕಾರಿ ಕಸ್ತೂರಯ್ಯ ಮಾತನಾಡಿ, ಕರ್ನಾಟಕ ಸರ್ಕಾರವು ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಎಂಬ ಹೊಸ ಶಿಷ್ಯವೇತನ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ಪಡೆದಿರುವ ಪಿಯುಸಿ, ಪದವಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಕರ್ನಾಟಕ ರಾಜ್ಯದ ರೈತರ ಎಲ್ಲ ಮಕ್ಕಳ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ಸ್ಕಾಲರ್‌ಶಿಪ್‌ ತಲುಪುತ್ತದೆ. ಪ್ರಸಕ್ತ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ರೂ.2500-11,000 ರೂಗಳ ವರೆಗೆ ಶಿಷ್ಟವೇತನದ ಮೊತ್ತವನ್ನು ವಾರ್ಷಿಕ ಶಿಷ್ಟವೇತನ ರೂಪದಲ್ಲಿ ಒದಗಿಸುವ ಯೋಜನೆ ಇದಾಗಿದೆ.

ರೈತ ಮಕ್ಕಳು ರಾಜ್ಯ ವಿದ್ಯಾರ್ಥಿ ವೇತನ ವೆಬ್‌ಸೈಟ್‌ https://ssp.postmatric.karnataka.gov.in ಗೆ ಭೇಟಿ ನೀಡಿ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮದ ಶಿಷ್ಟವೇತನಕ್ಕಾಗಿ ನೊಂದಾಯಿಸಿಕೊಳ್ಳಬಹುದು ಎಂದರು.

ರೈತರು ಮೊಬೈಲ್ ಆಪ್‌ನಲ್ಲಿ ಬೆಳೆ ಸಮೀಕ್ಷೆ ಕುರಿತು ಮಾತನಾಡಿದ ಅವರು, ರೈತರಿಂದಲೇ ತಮ್ಮ ಜಮೀನುಗಳಲ್ಲಿ 2022ರ ಮುಂಗಾರು ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಕೃಷಿ ಇಲಾಖೆಯು ಮೊಬೈಲ್ ಆ್ಯಪ್ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಆಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮೊಬೈಲ್ ಅಪ್‌ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುವ ವಿಧಾನ: ಗೂಗಲ್ ಪ್ಲೇ-ಸ್ಟೋರ್ ನಿಂದ Kharif Farmer Crop - 2022-23 ಡೌನ್‌ಲೋಡ್ ಮಾಡಿಕೊಂಡು, ಆಧಾರ್ ಮೂಲಕ e-KYC ಮಾಡಿ(OTP ನಮೂದಿಸಿ ಆಪ್ ಸಕ್ರಿಯಗೊಳಿಸಿ). ಮೊಬೈಲ್‌ ಸಂಖ್ಯೆ ನಮೂದಿಸಿ ಆಪ್ ಸಕ್ರಿಯಗೊಳಿಸಿ.

FRUITS ನಲ್ಲಿರುವಂತೆ ರೈತರ ವಿವರ ಮತ್ತು ಜಮೀನಿನ ವಿವರ ಸ್ವಯಂ ಡೌನ್‌ಲೋಡ್ ಆಗುವುದು. ಬೆಳೆ ಸಮೀಕ್ಷೆ ಮಾಡಲು ಸರ್ವೇ ನಂ. ಆಯ್ಕೆ ಮಾಡಿ. 

ಬೆಳೆ ಹೆಸರು ಮತ್ತು ವಿವರ ನಮೂದಿಸಿ, ಛಾಯಾಚಿತ್ರ ತೆಗೆದು ಮಾಹಿತಿ ಸೇರಿಸಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳ ವಿವರಗಳನ್ನು ಆಯಾ ಬೆಳೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಹಿತಿಯನ್ನು ಸೇರಿಸಿ ಒಂದಾದನಂತರ ಒಂದರಂತೆ ಎಲ್ಲ ಸರ್ವೇ ನಂ. ಮಾಹಿತಿಯನ್ನು ಸೇರಿಸಬಹುದು. 

ಸರ್ವೇ ನಂ. ಬಿಟ್ಟುಹೋಗಿದ್ದಲ್ಲಿ ಆಪ್ ಮೂಲಕವೇ ಸೇರಿಸಬಹುದಾಗಿದೆ. ಬೆಳೆ ಸಮೀಕ್ಷೆ ವರದಿಯಲ್ಲಿ ಬೆಳೆ ವಿವರ ಅಪ್ಲೋಡ್ ಆಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ.

ಆಧಾರ್ ಮೂಲಕ e-KYC ಮಾಡಲು ಸಾಧ್ಯವಾಗದಿದ್ದಲ್ಲಿ, ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ಆಟಲ್ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಆಧಾರ್‌ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪೇಟ್ ಮಾಡಿಸಿ, FRUITS ವಿವರ ಡೌನ್‌ಲೋಡ್ ಆಗದಿದ್ದಲ್ಲಿ ಆಧಾರ್, ಪಹಣಿ, ಬ್ಯಾಂಕ್‌ ಖಾತೆ ಮಾಹಿತಿಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಇಲಾಖೆ/ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು.

ಸರ್ವೇ ನಂ, ಸೇರಿಸಲು ಸಮಸ್ಯೆ ಇದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ಬಳಕೆ ತಿಳಿಯದ ರೈತರಿಗೆ ವಿದ್ಯಾರ್ಥಿಗಳು ನೆರವಾಗಿ ಬೆಳೆ ಸಮೀಕ್ಷೆ ನಡೆಸಬೇಕೆಂದು ಕಸ್ತೂರಯ್ಯ ಮನವಿ ಮಾಡಿದರು. 

ಈ ವೇಳೆ ಸಹಾಯ ತಾಂತ್ರಿಕ ವ್ಯವಸ್ಥಾಪಕ ದಶರಥ್, ಸಿಬ್ಬಂದಿ ಸುರೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಕಲಾ, ಸುದರ್ಶನ್ ಬಾಬು ಮತ್ತಿತರರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others