ದೊಡ್ಡಬಳ್ಳಾಪುರ: ಎಜಾಕ್ಸ್ ಕಂಪನಿಯಿಂದ ಆಕರ್ಷಣೆ ವಿನ್ಯಾಸದ ಅಂಗನವಾಡಿ ನಿರ್ಮಾಣ / ಉದ್ಘಾಟನೆ ಶೀಘ್ರ
ದೊಡ್ಡಬಳ್ಳಾಪುರ: ಎಜಾಕ್ಸ್ ಕಂಪನಿಯಿಂದ ಆಕರ್ಷಣೆ ವಿನ್ಯಾಸದ ಅಂಗನವಾಡಿ ನಿರ್ಮಾಣ / ಉದ್ಘಾಟನೆ ಶೀಘ್ರ

ದೊಡ್ಡಬಳ್ಳಾಪುರ: ನಗರದ ಕೈಗಾರಿಕಾ ಪ್ರದೇಶದಲ್ಲಿನ ಎಜಾಕ್ಸ್ ಕಂಪನಿ ತನ್ನ ಸಿಎಸ್ ಆರ್ ಅನುದಾನದಲ್ಲಿ, ಸರ್ಕಾರಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣದ ಬೆನ್ನಲ್ಲೇ ಸದ್ದಿಲ್ಲದೆ ಮಾದರಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿ ಗಮನ ಸೆಳೆದಿದೆ.

ತಾಲೂಕಿನ ರಾಜಘಟ್ಟ ಗ್ರಾಮ ಪಂಚಾಯತಿಯ ತಿಮ್ಮಸಂದ್ರ ಗ್ರಾಮದಲ್ಲಿ ಎಜಾಕ್ಸ್ ಕಂಪನಿಯಿಂದ ರೂ.22 ಲಕ್ಷ ಅನುದಾನದಲ್ಲಿ ಮಾದರಿ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು, ಮಕ್ಕಳಿಗೆ ಸುಸಜ್ಜಿತವಾದ ಶೌಚಾಲಯ ಮತ್ತು ನೀರಿನ ಸಂಪರ್ಕ, ಆಕರ್ಷಣೆ ವಿನ್ಯಾಸವುಳ್ಳ ಕಟ್ಟಡದ ಗಮನ ಸೆಳೆಯುತ್ತಿದೆ.

ಈ ಕುರಿತಂತೆ ಸಿಡಿಪಿಒ ಅನಿತಾಲಕ್ಷ್ಮೀ ಹರಿತಲೇಖನಿಗೆ ಮಾಹಿತಿ ನೀಡಿ, ಕಾರ್ಖಾನೆಗಳ ಸಿಎಸ್ಆರ್ ಅನುದಾನದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿದ್ದು, ಎಜಾಕ್ಸ್ ಕಂಪನಿ ತಿಮ್ಮಸಂದ್ರ ಗ್ರಾಮದಲ್ಲಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಿಸಿದೆ. 

ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳಲಿದೆ. ಅಲ್ಲದೆ ಇದೇ ಮಾದರಿಯಲ್ಲಿ ತಾಲೂಕಿನ ನಗರ ವ್ಯಾಪ್ತಿಯಲ್ಲಿ 03, ಗ್ರಾಮೀಣ ಪ್ರದೇಶಗಳಲ್ಲಿ 03 ಅಂಗನವಾಡಿ ಕಟ್ಟಡ ನಿರ್ಮಿಸಲು ಇತರೆ ಕಂಪನಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದು ಅನಿತಾಲಕ್ಷ್ಮೀ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ....