ಹರಿತಲೇಖನಿ ದಿನಕ್ಕೊಂದು ಕಥೆ: ಬ್ರಾಂಟಿ
ಹರಿತಲೇಖನಿ ದಿನಕ್ಕೊಂದು ಕಥೆ: ಬ್ರಾಂಟಿ

ಉತ್ತರಧ್ರುವ ಪ್ರದೇಶದ ಹತ್ತಿರ ವಿಜ್ಞಾನಿಗಳಿಗೆ ಒಂದು ದೊಡ್ಡ ತತ್ತಿ ಸಿಕ್ಕಿತು. ಹಿಮದಲ್ಲಿ ಹುಗಿದುಹೋಗಿದ್ದ ಆ ಭಾರೀ ತತ್ತಿ ಎಷ್ಟೂ ಕೆಟ್ಟಿರಲಿಲ್ಲ. ಎಕ್ಸೆರೇ ತೆಗೆದು ಪರೀಕ್ಷಿಸಿದಾಗ ಅದು ಬ್ರಾಂಟಾಸಾರಸ್ ಎಂಬ ಪೆಡಂಭೂತದ್ದೆಂದು ತಿಳಿಯಿತು. ಲಕ್ಷಾಂತರ ವರ್ಷಗಳ ಹಿಂದೆ ನಾಶವಾಗಿದ್ದ ಆ ಪ್ರಾಣಿ ಪಕ್ಷಿಗಳ ಒಂದು ಜೀವಂತ ತತ್ತಿ (ಮೊಟ್ಟೆ) ಸಿಕ್ಕಿದ್ದು ವಿಜ್ಞಾನಿಗಳಿಗೆ ಸಂತೋಷದ ವಿಷಯವಾಯಿತು.

ಆ ತತ್ತಿಯನ್ನು ಮರಿ ಮಾಡಲು ಕಾವು ಪೆಟ್ಟಿಗೆಯಲ್ಲಿ ಇಟ್ಟರು. ಪಿಂಕಿಯ ತಂದೆ ವಿಜ್ಞಾನಿಯಷ್ಟೇ. ಈ ಕಾವು ಪೆಟ್ಟಿಗೆಯ ಜವಾಬುದಾರಿ ಅವರ ಕೊರಳಿಗೆ ಬಿದ್ದಿತು. ಬ್ರಾಂಟಾಸಾರಸ್ಸಿನ ಸುದ್ದಿ ಎಲ್ಲೆಡೆ ಹಬ್ಬಲು ತಡವಾಗಲಿಲ್ಲ. ಈ ಕೌತುಕ ನೋಡಲು ವಿಜ್ಞಾನಿಗಳು, ಪತ್ರಿಕೆಗಳವರು, ಪ್ರವಾಸಿಗರು ತಂಡ ತಂಡಗಳಲ್ಲಿ ಬರತೊಡಗಿದರು.

ಆ ಭಾರೀ ತತ್ತಿಯ ಸುದ್ದಿ ಟಿವಿ, ರೇಡಿಯೋ, ಪತ್ರಿಕೆಗಳಲ್ಲಿ ಒಂದೇ ಸಮನೆ ಬರತೊಡಗಿತು. ಇಡೀ ಜಗತ್ತೆಲ್ಲ ಬ್ರಾಂಟಾಸಾರಸ್ಸಿನ ಮೊಟ್ಟೆ ಒಡೆದು. ಅದರೊಳಗಿಂದ ಮರಿ ಬರುವ ಹಾದಿಯನ್ನೇ ನೋಡತೊಡಗಿತು!

ಪ್ರಾಣಿ ಸಂಗ್ರಹಾಲಯದಲ್ಲಿದ್ದ (ಜೂ) ಕಾವು ಪೆಟ್ಟಿಗೆಯ ಸುತ್ತ ಬೇಲಿ ಹಾಕಿದ್ದರು. ಪಿಂಕಿಯ ತಂದೆ ತಮ್ಮ ಗೆಳೆಯ ಪ್ರೊ. ಯಾಕಟ್ಟಿಯವರೊಡನೆ ಮಾತನಾಡುತ್ತ ಕುಳಿತಿದ್ದರು. ಕಾವು-ಪೆಟ್ಟಿಗೆಯ ಕೋಣೆ ಹೊರಗೆ ಕೆಂಪು ದೀಪ ಹತ್ತಿತು. ಇಬ್ಬರೂ ಒಳಗೆ ಓಡಿದರು. ತತ್ತಿ ಒಡೆದು ಮರಿ ಬ್ರಾಂಟಾಸಾರಸ್ ಹೊರಗೆ ಬಂದಿತು! ಸುದ್ದಿ ತಿಳಿದು ಹೊರಗೆ ಜನಸಂದಣಿಯಾಯಿತು. 'ಅದರ ಹೆಸರೇನು ಡ್ಯಾಡೀ?' ಪಿಂಕಿ ಕೇಳಿದಳು. ತಂದೆ ಗೊಂದಲದಲ್ಲಿ ಬಿದ್ದರು. ಮಕ್ಕಳಿಗೆ ಪ್ರವೇಶವಿಲ್ಲ. ಆದರೂ ಪಿಂಕಿ ಏಕೆ ಮತ್ತು ಹೇಗೆ ಬಂದಿದ್ದಾಳೆ?

"ಪಿಂಕಿ? ಹೋಗು ನೋಡೋಣ. ಹೇಗೆ ಒಳಗೆ ಬಂದೆ?' ತಂದೆ ಸಿಟ್ಟಿನಿಂದ ಕೇಳಿದರು. 'ಪತ್ರಿಕೆಯವರೊಡನೆ ಡ್ಯಾಡೀ, ನಿಮ್ಮ ಮಗಳೆಂದು ತಿಳಿದೊಡನೆ ಸುಮ್ಮನೆ ಒಳಗೆ ಬಿಟ್ಟರು ನೋಡು''ಇನ್ನೊಮ್ಮೆ ಇಲ್ಲಿ ಬಂದರೆ ನಿನ್ನ ಕಾಲು ಮುರಿಯುತ್ತೇನೆ' ಎಂದು ಬೆದರಿಸಿ ಪಿಂಕಿಯನ್ನು ಹೊರಗೆ ಕಳಿಸಿದರು.

ಆದರೆ ಪಿಂಕಿ ಬ್ರಾಂಟಿಯ ಹತ್ತಿರ ಹೋಗು ವುದನ್ನು ನಿಲ್ಲಿಸಲಿಲ್ಲ! (ಬ್ರಾಂಟಾಸಾರಸ್ಸಿಗೆ ಆಕೆ 'ಬ್ರಾಂಟಿ' ಎಂದು ಮುದ್ದಿನಿಂದ ಕರೆಯ ತೊಡಗಿ ದ್ದಳು). ಬೇರೆ ಬೇರೆ ದೊಡ್ಡ ಸಂದರ್ಶಕರು ಬಂದಾಗಲೆಲ್ಲ ಅವರನ್ನು ಮರಳು ಮಾಡಿ ಒಳಗೆ ಬಂದುಬಿಡುವಳು. ಬ್ರಾಂಟಿ ಕೂಡ ಪಿಂಕಿಯನ್ನು ಗುರುತು ಹಿಡಿಯ ತೊಡಗಿತು!

ಪಿಂಕಿಯ ಮನೆ ಪ್ರಾಣಿಸಂಗ್ರಹಾಯಲದ ಪಕ್ಕಕ್ಕೆ ಇದ್ದದ್ದರಿಂದ ಹೆಚ್ಚ ಕಡಿಮೆ ಆಕೆ ಬ್ರಾಂಟಿ ಯೊಡನೆ ಹೊತ್ತು ಕಳೆಯತೊಡಗಿದಳು. ಒಂದೇ ತಿಂಗಳಲ್ಲಿ ಬ್ರಾಂಟಿ ಬಹಳ ಬೆಳೆ ಯಿತು. ತಲೆಯಿಂದ ಬಾಲದವರೆಗೆ ಸುಮಾರು ಮೂರು ಮೀಟರ್ ಉದ್ದವಾಗಿತ್ತು. ಪ್ರಾಣಿಸಂಗ್ರಹಾಲಯದಲ್ಲಿ ಅದಕ್ಕಾಗಿ ಬೇರೆ ಮನೆಯನ್ನೇ ಮಾಡಿದರು. ಸಾರ್ವಜನಿಕರು ಒಳಗೆ ಬರಬಾರದೆಂದು ಹಳಿಗಳನ್ನು ಅಡ್ಡವಿಟ್ಟರು. ಅದಕ್ಕೆ ತಿನ್ನಲು ಎಳೆಯ ಬಿದಿರು ಮತ್ತು ಬಾಳೆಹಣ್ಣು ಕೊಡುತ್ತಿದ್ದರು. ಬ್ರಾಂಟಿಗೆ ತಿನ್ನಲು ಏನು ಇಷ್ಟ ಎಂದು ಅವರಿಗೇನು ಗೊತ್ತು?

ಒಮ್ಮೆ ಬ್ರಾಂಟಿ ತನ್ನ ಮುಂದಿಟ್ಟ ಆಹಾರವನ್ನು ಮುಟ್ಟಲೇ ಇಲ್ಲ! ವಿಶ್ರಾಂತಿಗಾಗಿ ಮಾಡಿದ ಕೊಳದಲ್ಲಿ ಸುಮ್ಮನೆ ಬಿದ್ದುಕೊಂಡಿತು. ಬಿದಿರು, ಬಾಳೆಹಣ್ಣು ಹಾಗೇ ಉಳಿದವು. ನೀರನ್ನೂ ಮುಟ್ಟಲಿಲ್ಲ.

ಮೂರು ದಿನ ಹೀಗೇ ಉಪವಾಸದಲ್ಲಿ ಕಳೆದವು. ವಿಜ್ಞಾನಿಗಳಿಗೆ ಬಹಳ ಚಿಂತೆಯಾಯಿತು. ಎಲ್ಲ ರೀತಿ ಪ್ರಯೋಗಮಾಡಿದರು; ಪರೀಕ್ಷೆ ಮಾಡಿ; ಪ್ರಯತ್ನ ಮಾಡಿದರು.

ಊಹುಂ! ಬ್ರಾಂಟಿ ಸತ್ಯಾಗ್ರಹಿಗಳಂತೆ ಉಪವಾಸವಿದ್ದು ಬಿಟ್ಟಿತು. ಹೀಗೆ ಬಿಟ್ಟರೆ ಅದು ಸತ್ತೇ ಹೋಗುವುದೆಂದು ಎಲ್ಲರಿಗೂ ಗೊತ್ತಾಯಿತು. ಏನು ಉಪಾಯಮಾಡಬೇಕು?

ಈ ಮರಿ ಸತ್ತರೇ ಇಡೀ ಜಗತ್ತಿನಲ್ಲಿ ಇಂತಹ ಇನ್ನೊಂದು ಬ್ರಾಂಟಾಸಾರಸ್ ಇಲ್ಲವೇ ಇಲ್ಲ. ವಿಜ್ಞಾನಿಗಳಿಗೆ ಇದೊಂದು ದೊಡ್ಡ ಸವಾಲಾಯಿತು.

ಹೀಗೆ ಬ್ರಾಂಟಿ ಉಪವಾಸ ಪ್ರಾರಂಭಿಸಿದಾಗ ಪಿಂಕಿ ಅಜ್ಜಿಯ ಊರಿಗೆ ಹೋಗಿದ್ದಳು.

ಹಾಗಾಗಿ ಆಕೆಗೆ ಈ ಸುದ್ದಿ ಗೊತ್ತೆ ಆಗಿರಲಿಲ್ಲ. ಆದರೆ ಬ್ರಾಂಟಿಯ ಈ ವಿಚಿತ್ರ ವರ್ತನೆಯ ಸುದ್ದಿ ಟೀವಿಯಲ್ಲಿ ಬಂದೊಡನೆ ಪಿಂಕಿ ಒಂದು ದಿನ ಕೂಡ ನಿಲ್ಲಲಿಲ್ಲ. ಹೇಗೋ ಅಜ್ಜಿಯನ್ನು ರಮಿಸಿ ತಿರುಗಿ ಬಂದಳು.

'ಡ್ಯಾಡೀ! ಎಷ್ಟು ಕೆಟ್ಟರಿದ್ದೀರಿ. ಪಾಪ! ಬ್ರಾಂಟಿ ಸಾಯುತ್ತಿದೆ. ನನಗೆ ತಿಳಿಸೇ ಇಲ್ಲ....' ಎಂದು ತಂದೆಯೊವರೊಡನೆ ಜಗಳ ತೆಗೆದಳು.

ಆದರೆ ಮೂರು ದಿನಗಳಿಂದ ಬ್ರಾಂಟಿಯ ಬಗ್ಗೆ ವಿಜ್ಞಾನಿಗಳು ಮೀಟಿಂಗು ನಡೆಸಿ ತಲೆ ಕೆಡಿಸಿಕೊಂಡಿದ್ದರು. 'ಹೋಗು ಹೋಗು ಪಿಂಕೀ! ನಮ್ಮ ತಲೆನೋವು ನಿನಗೇನು ಗೊತ್ತು?' ಎಂದು ರೇಗಿ ಕಳಿಸಿದರು.

ಪಿಂಕಿ ಏನು ಉತ್ತರಿಸದಲೆ ನೆಟ್ಟಗೆ ಬ್ರಾಂಟಿಯ ಪೆವಿಲಿಯನ್ನಿಗೆ ಹೋದಳು. ಸಳಿ ಹತ್ತಿ ಒಳಗೆ ಹೋಗಿ ಬ್ರಾಂಟಿಯನ್ನು ರಮಿಸತೊಡಗಿದಳು.

'ಬ್ರಾಂಟೀ ಅವರೆಲ್ಲಾ ಬಹಳ ಕೆಟ್ಟವರಿದ್ದಾರೆ. ದಿನಾ ಬಾಳೆಹಣ್ಣು ಕೊಟ್ಟರೆ ನಾನೂ ನಿನ್ನಂತೇ ಉಪವಾಸಮಾಡುತ್ತಿದ್ದೆ. ತಗೋ ತಿನ್ನು' ಎಂದು ತಾನು ತಂದಿದ್ದ ಬ್ರೆಡ್ಡು - ಬನ್ನು ತಿನಿಸತೊಡಗಿದಳು.

ಅದ್ಭುತವೆಂದರೆ ಬ್ರಾಂಟಿ ತಿನ್ನತೊಡಗಿತು!

ಅದು ಪಿಂಕಿಯನ್ನು ಕಚ್ಚುವುದೇನೋ ಎಂದು ಹೆದರಿ ಬಂದ ತಂದೆ ಈ ದೃಶ್ಯ ನೋಡಿ ಕಂಗಾಲಾದರು! ಎಲ್ಲ ವಿಜ್ಞಾನಿಗಳಿಗೂ ಸಂತೋಷವಾಯಿತು.

ಪಿಂಕಿ ಬ್ರಾಂಟಿಗೆ ಆಹಾರ ಕೊಡುತ್ತಿದ್ದ ಸುದ್ದಿ - ಚಿತ್ರ ಜಗತ್ತಿನ ತುಂಬ ಪ್ರಸಾರವಾದವು!

ಬ್ರಾಂಟಿಗೆ ಬರೀ ಬಾಳೆಹಣ್ಣು - ಬಿದಿರಿನ ಕಳಲೆ ತಿಂದು ಬೇಸರವಾಗಿತ್ತೋ, ಅಥವಾ ಅದು ಪಿಂಕಿಯ ಮೇಲಿನ ಪ್ರೀತಿಗೆ ಬ್ರೆಡ್ಡು ತಿಂದಿತೋ, ಯಾರಿಗೂ ಗೊತ್ತಾಗಿಲ್ಲ.

ಈಗಂತೂ ಬ್ರಾಂಟಿ ಬಹಳ ಸಾಧುಪ್ರಾಣಿಯಾಗಿದೆ. ಒಂದು ದೊಡ್ಡ ಮನೆಯಷ್ಟು ಬೆಳೆದಿದ್ದರೂ (ಆನೆಗಿಂತ ಎಷ್ಟೋ ಪಟ್ಟು ದೊಡ್ಡದು!) ಯಾರನ್ನೂ ಹೆದರಿಸುವುದಿಲ್ಲ. ಅದನ್ನು ಹತ್ತಿ ಅಡ್ಡಾಡಲು ಪಿಂಕಿ ಒಂದು ನಿಚ್ಚಣಿಕೆಯನ್ನೇ ಮಾಡಿದ್ದಾಳೆ.

ಆಕೆಯನ್ನು ಬೆನ್ನಮೇಲೆ ಕೂಡಿಸಿಕೊಂಡು ಅಡ್ಡಾಡುತ್ತ ಇಲ್ಲವೆ ಕೊಳದಲ್ಲಿ ಈಜುತ್ತ ಅದು ಮೋಜು ಮಾಡುತ್ತಿದೆ.

ಕೃಪೆ: ಮಕ್ಕಳ ಅಭಿವೃದ್ಧಿ ಪ್ರಾಧಿಕಾರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime