ಎಣ್ಣೆ ಏಟು: ನಾಗರ ಹಾವಿನೊಂದಿಗೆ ಚೇಸ್ಟೇ.. ಆಸ್ಪತ್ರೆ ಪಾಲಾದ ಕುಡುಕ..! ವೈರಲ್ ವಿಡಿಯೋ ನೋಡಿ
ಎಣ್ಣೆ ಏಟು: ನಾಗರ ಹಾವಿನೊಂದಿಗೆ ಚೇಸ್ಟೇ.. ಆಸ್ಪತ್ರೆ ಪಾಲಾದ ಕುಡುಕ..! ವೈರಲ್ ವಿಡಿಯೋ ನೋಡಿ

ಶ್ರೀ ಸತ್ಯಸಾಯಿ, (ಜುಲೈ.26); ರಸ್ತೆಯಲ್ಲಿ ಕಾಣಿಸಿಕೊಂಡ ನಾಗರ ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಇಲ್ಲೊಬ್ಬ ಕುಡುಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ‌ ನಡೆದಿದ್ದು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯ ಕಾಲೇಜು ಆವರಣದ ಸಮೀಪ ಈ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿ ಕುಡುಕನೊಬ್ಬ ನಾಗರ ಹಾವಿನ ಜೊತೆ ಚೇಸ್ಟೇ ಮಾಡಲು ಹೋಗಿ, ಆಸ್ಪತ್ರೆ ಸೇರಿದ್ದಾನೆ. 

ಕುಡುಕ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ ವೇಳೆ ಸರಸರನೆ ಬಂದ ನಾಗರ ಹಾವೊಂದು ಕಾಲೇಜು ಆವರಣದ ಪೊದೆಯೊಳಗೆ ಹೋಗಲು ಪ್ರಯತ್ನಿಸುತ್ತದೆ. ಇದನ್ನು ಕಂಡ ಕುಡುಕ ಮಹಾಶಯ, ಭಂಡ ಧೈರ್ಯದಿಂದ ಹಾವನ್ನು ಹಿಡಿದು ರಸ್ತೆಗೆ ತಂದು, ಅದರ ಜೊತೆ ಚೆಲ್ಲಾಟವಾಡಿದ್ದಾನೆ. 

ಸ್ಥಳೀಯರು ಎಚ್ಚರಿಕೆ ನೀಡಿದರೂ ಕೂಡಾ ಹಾವಿಗೆ ತೊಂದರೆ ಕೊಡುವುದನ್ನು ಮಾತ್ರ ಆತ ಬಿಟ್ಟಿಲ್ಲ. ಕೊನೆಗೆ ಈತನ ಕಾಟ ತಾಳಲಾರದೆ ಹಾವು ಆತನಿಗೆ ಕಚ್ಚಿದೆ. ಆ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಕುರಿತಾದ ವಿಡಿಯೋವನ್ನು ಪತ್ರಕರ್ತ ಸುಧಾಕರ್‌ ಎಂಬವರು ಟ್ವಿಟತ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಕುಡುಕ ಮಹಾಶಯ ನಾಗರ ಹಾವಿನೊಂದಿಗೆ ಆಟವಾಡುತ್ತಿರುವ ಭಯಾನಕ ದೃಶ್ಯವನ್ನು ಕಾಣಬಹುದು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime