PM ವಿಶ್ವಕರ್ಮ ಯೋಜನೆ ತರಬೇತಿಯಲ್ಲಿ ಲೋಪ ಮಾಡುತ್ತಿಲ್ಲ:  ಸ್ಪಷ್ಟನೆ ನೀಡಿದ ವ್ಯವಸ್ಥಾಪಕ
PM ವಿಶ್ವಕರ್ಮ ಯೋಜನೆ ತರಬೇತಿಯಲ್ಲಿ ಲೋಪ ಮಾಡುತ್ತಿಲ್ಲ: ಸ್ಪಷ್ಟನೆ ನೀಡಿದ ವ್ಯವಸ್ಥಾಪಕ

ದೊಡ್ಡಬಳ್ಳಾಪುರ, (ಜುಲೈ.26); ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿಯಲ್ಲಿ ಲೋಪ ದೋಷಗಳನ್ನು ಮಾಡುತ್ತಿಲ್ಲವೆಂದು ತರಬೇತಿ ವ್ಯವಸ್ಥಾಪಕ ದೀಪಕ್ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಈ ವರೆವಿಗೂ 850 ಫಲಾನುಭವಿಗಳಿಗೆ ತರಬೇತಿ ನೀಡಿಯೇ, ಪ್ರಮಾಣ ಪತ್ರ ನೀಡಲಾಗಿದೆ. ಇದರಲ್ಲಿ ಯಾವುದೇ ಲೋಪದೋಷಗಳಾಗಿಲ್ಲ.

ತರಬೇತಿಗೆ ಬರುವ ಕೆಲವರು ಮದ್ಯಪಾನ, ಗುಟ್ಕ, ಹೊಗೆ ಸೊಪ್ಪು ಮುಂತಾದ ಕೆಟ್ಟ ಅಭ್ಯಾಸ ಉಳ್ಳವರಿಗೆ ತರಬೇತಿಗೆ ಬರುವಾಗ ಶಿಸ್ತಿನಿಂದ ಬರುವಂತೆ ಕಟ್ಟುನಿಟ್ಟಿನ ನಿಯಮ ವಿಧಿಸಿದ್ದೇವೆ. ನಿಯಮ ಪಾಲಿಸದವರಿಗೆ ಅವಕಾಶ ನೀಡಿಲ್ಲ.. ಇದರಿಂದ ಕೆಲವರಿಗೆ ತರಬೇತಿ ಲಭ್ಯವಾಗದೆ ಇರಬಹುದು, ಉಳಿದಂತೆ ಬಹುತೇಕರಿಗೆ ತರಬೇತಿ ನೀಡಲಾಗುತ್ತಿದೆ.

ಫಲಾನುಭವಿಗಳಿಗೆ ತರಬೇತಿ ನೀಡಿರುವ ಸಂಪೂರ್ಣ ದಾಖಲೆಯನ್ನು ತಾಪಂ ಮಾಜಿ ಅಧ್ಯಕ್ಷ ಡಿಸಿ.ಶಶಿಧರ್ ಅವರಿಗೆ ನೀಡಲಾಗಿದ್ದು, ಅವರು ಕೂಡ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಡ ನಿರುದ್ಯೋಗಿಗಳಿಗೆ ಈ ಯೋಜನೆ ವರದಾನವಾಗಿದ್ದು, ಹೆಚ್ಚು ಜನ ನೊಂದಾಯಿಸಿ, ಸೌಲಭ್ಯ ಪಡೆಯುವ ದೀಪಕ್ ಮನವಿ ಮಾಡಿದರು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿ ಶಶಿಧರ್ ಉತ್ತಮ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು, ಸರ್ಕಾರದ ಹಣ ವ್ಯಯವಾಗಬಾರದು ಎಂಬುದು ನಮ್ಮ ಒತ್ತಾಯವಾಗಿದ್ದು, ಜನರಿಗೆ ಸರಿಯಾದ ತರಬೇತಿ ದೊರಕುವಂತಾಗಲಿ ಎಂದರು.

ಇದೇ ವಿಚಾರವಾಗಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್, ಈ ರೀತಿ ಆರೋಪ ಕೇಳಿಬಂದಾಗ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆ ಹೊರತು ವ್ಯವಸ್ಥಾಪಕರಲ್ಲ. ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರಕ್ಕೆ  ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ‌.

ಇದಕ್ಕೂ ಮುನ್ನ ಪಿಎಂ ವಿಶ್ವಕರ್ಮ ಯೋಜನೆಯ ತರಬೇತಿಗೆ ಬರುವವರಿಗೆ ತರಬೇತಿ ನೀಡುತ್ತಿಲ್ಲ, ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ ವ್ಯರ್ಥವಾಗುತ್ತಿದೆ ಎಂಬ ವ್ಯಾಪಕ ಆರೋಪ ಹಿನ್ನೆಲೆಯಲ್ಲಿ ಹರಿತಲೇಖನಿ ವರದಿ ಮಾಡಿತ್ತು. ಈ ಕುರಿತು ದೀಪಕ್ ಸ್ಪಷ್ಟನೆ ನೀಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others