ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, (ಜುಲೈ,20): ಮೀನುಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಿಂದ ಕೇಂದ್ರ ಪುರಸ್ಕೃತ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

2020-21, 2021-22, 2022-23 ಮತ್ತು 2023-24 ನೇ ಸಾಲಿನಲ್ಲಿ ಉಳಿಕೆಯಾಗಿರುವ ಗುರಿಗಳಿಗೆ 2024-25ನೇ ಸಾಲಿನ ಯೋಜನೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಮಧ್ಯಮ ಗಾತ್ರದ ಆರ್.ಎ.ಎಸ್, 0.1 ಹೆಕ್ಟರ್ ಬಯೋಫ್ಲಾಕ್ ಘಟಕಗಳಿಗೆ, ಶೈತ್ಯಾಗಾರ/ ಮಂಜುಗಡ್ಡೆ, ಸ್ಥಾವರ ನಿರ್ಮಾಣ, ಐಸ್ ಪೆಟ್ಟಿಗೆಯೊಂದಿಗೆ ಮೋಟರ್ ಸೈಕಲ್, ಮೀನು/ ಅಕ್ವೇರಿಯಂ ಕಿಯೋಸ್ಕಗಳ ಸ್ಥಾಪನೆ ಮತ್ತು ಇತರೆ ಯೋಜನೆಗಳನ್ನು ಅನುಷ್ಠಾನಗೂಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40 ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60 ರಷ್ಟು ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 05 ಕೊನೆಯ ದಿನವಾಗಿದೆ.

2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಕೇಂದ್ರ ವಲಯ/ರಾಜ್ಯ ವಲಯ / ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನು ಮರಿ ಖರೀದಿಗೆ ಹಾಗು ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಅಸಕ್ತ ಒಳನಾಡು ಮೀನುಗಾರರು/ ಮೀನು ಕೃಷಿಕರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ, ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಜಿಲ್ಲಾ ಕಛೇರಿ ಹಾಗೂ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರುಗಳನ್ನು ಸಂಪರ್ಕಿಸುವುದು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೀನುಗಾರಿಕೆ ಉಪನಿರ್ದೇಶಕರು ದೂ.ಸಂ-080-23362555/ 9972189781, ದೇವನಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9448500385, ದೊಡ್ಡಬಳ್ಳಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9945189390.

ಹೊಸಕೋಟೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9845180161, ನೆಲಮಂಗಲ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-8747012127 ಇವರನ್ನು ಸಂಪರ್ಕಿಸಬಹುದೆಂದು  ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime