ಅಪ್ಪನಿಗೆ ಹೊಡೆದ ಮಗ.. ಇರಿದು ಕೊಂದೇ ಬಿಟ್ಟ ತಂದೆ...!
ಅಪ್ಪನಿಗೆ ಹೊಡೆದ ಮಗ.. ಇರಿದು ಕೊಂದೇ ಬಿಟ್ಟ ತಂದೆ...!

ಬೆಂಗಳೂರು, (ಜೂ.11): ದ್ವಿಚಕ್ರ ವಾಹನಕ್ಕೆ  ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಘಟನೆಯಲ್ಲಿ ಅಂಜನ್ ಕುಮಾರ್  (27 ವರ್ಷ) ಮೃತ ಯುವಕನಾಗಿದ್ದು  ತಂದೆ ವೆಂಕಟೇಶ್(57 ವರ್ಷ) ನನ್ನು ಪೊಲೀಸರು ಬಂಧಿಸಿದ್ದಾರೆ.

ಡಿ ಗ್ರೂಪ್ ಲೇಔಟ್ ನ ಮುದ್ದನಪಾಳ್ಯದಲ್ಲಿ ವೆಂಕಟೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ವೆಂಕಟೇಶ್ ಗೆ ಅಂಜನ್ ಹಾಗೂ ಓರ್ವ ಮಗಳಿದ್ದು ಮಗಳಿಗೆ ದ್ವಿಚಕ್ರ ವಾಹನ ಕೊಡಿಸಿದ್ದರು. ಭಾನುವಾರ ಸಂಜೆ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದ ಅಂಜನ್ ಸಂಜೆ ವಾಹನ ತರದೆ ಮನೆಗೆ ಬಂದಿದ್ದ ಎನ್ನಲಾಗಿದೆ.

ಸೋಮವಾರ  ಬೆಳಗ್ಗೆ ಈ ಬಗ್ಗೆ ಮಗ ಅಂಜನ್ ನನ್ನು ವೆಂಕಟೇಶ್‌ ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿ ಅಂಜನ್ ಹೆಲ್ಮೆಟ್ ನಿಂದ ತಂದೆಗೆ ಹಲ್ಲೆ ಮಾಡಿದ್ದ. ಇದರಿಂದ ಕುಪಿತಗೊಂಡ ವೆಂಕಟೇಶ್‌ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಂಜನ್ ಎದೆಯ ಎಡಭಾಗದಲ್ಲಿ ಇರಿದಿದ್ದರು. ತೀವ್ರ ರಕ್ತಸ್ರಾವವಾಗಿ ಅಂಜನ್ ಸಾವನ್ನಪ್ಪಿದ್ದ.

ಘಟನೆ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature