ವಿದ್ಯಾರ್ಥಿಗಳಿಗೆ ಓದಿನೊಂದಿಗೆ ವ್ಯವಹಾರಿಕ ಜ್ಞಾನ ಕಲಿಕೆ ಅಗತ್ಯ: ಡಾ.ನಿರ್ಮಲಾನಂದ ನಾಥ ಸ್ವಾಮೀಜಿ
ವಿದ್ಯಾರ್ಥಿಗಳಿಗೆ ಓದಿನೊಂದಿಗೆ ವ್ಯವಹಾರಿಕ ಜ್ಞಾನ ಕಲಿಕೆ ಅಗತ್ಯ: ಡಾ.ನಿರ್ಮಲಾನಂದ ನಾಥ ಸ್ವಾಮೀಜಿ

ಚಿಕ್ಕಬಳ್ಳಾಪುರ, (ಜೂ.11): ವಿದ್ಯಾರ್ಥಿಗಳಿಗೆ  ಓದಿನೊಂದಿಗೆ ವ್ಯವಹಾರಿಕ ಜ್ಞಾನ ತಿಳಿಸಿ ಕೊಡುವ ಅಗತ್ಯವಿದೆ.ವ್ಯವಹಾರ ಜ್ಞಾನದ ಬಗ್ಗೆ ಅರಿವು ಹೊಂದುವ ನಿಟ್ಟಿನಲ್ಲಿ ವಿದ್ಯಾರ್ಥಿ ಮಾರುಕಟ್ಟೆ ಕಾರ್ಯಕ್ರಮಗಳನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳ ಮೂಲಕ ಭವಿಷ್ಯದಲ್ಲಿ ವ್ಯವಹಾರ ಜ್ಞಾನ ಹೊಂದುತ್ತಾರೆ ಎಂದು ಆದಿ ಚುಂಚನ ಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಎಸ್ ಜೆಸಿಐಟಿ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿನ ಬಿ ಜಿ ಎಸ್ ಇನ್ಸಟಿಟ್ಯೂಟ್ ಆಫ್  ಮ್ಯಾನೇಜ್ಜ್ಮೆಂಟ್  ಸ್ಟಡೀಸ್ ಕಾಲೇಜು ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ  ವಿದ್ಯಾರ್ಥಿ ಬಜಾರ್ ಎಂಬ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಈ ವಿದ್ಯಾರ್ಥಿ ಬಜಾರ್ ಕಾರ್ಯಕ್ರಮವು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ನಮ್ಮ ಕಾಲೇಜಿನ ವ್ಯವಹಾರ  ನಿರ್ವಾಹಣ  ಶಾಸ್ತ್ರ ಹಾಗೂ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ಪದವಿಯ ನಂತರ ಸ್ವಂತವಾಗಿ ವ್ಯವಹಾರವನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ವ್ಯಾಸಂಗ ಮಾಡುತ್ತಿರುವಾಗಲೇ ಸ್ವoತ ವ್ಯವಹಾರವನ್ನು ಹೇಗೆ  ಪ್ರಾರಂಭಿಸಿ, ಲಾಭ -ನಷ್ಟದ ಬಗೆಗಿನ ಅನುಭವಗಳನ್ನು ಪಡೆಯವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎಂದರು. 

ಸ್ವoತ  ವ್ಯವಹಾರವನ್ನು ಆರಂಭಿಸಲು ಒಂದು ಉತ್ತಮ ವೇದಿಕೆಯನ್ನು ನಮ್ಮ ಕಾಲೇಜಿನಲ್ಲಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ವoತ ಸಾಮರ್ಥ್ಯದಿಂದ ತಮ್ಮದೇ ಆದ ವಿವಿಧ ರೀತಿಯ ತಿಂಡಿ -ತಿನಿಸು, ಸಿಹಿ,ಕಾರಾ ಖಾದ್ಯಗಳು, ಬಟ್ಟೆ, ದಿನಸಿ ವಸ್ತುಗಳು, ಅಲoಕಾರಿಕ ವಸ್ತುಗಳ ಮಳಿಗೆ, ಹೀಗೆ ಹಲವಾರು ಮಾರಾಟ ಮಳಿಗೆಗಳನ್ನು ಪ್ರಾರಂಭ ಮಾಡುವ ಮೂಲಕ ತಮ್ಮಲ್ಲಿರುವ  ಸಾಮರ್ಥ್ಯ, ಕೌಶಲ್ಯ, ಚಾಕಚಕ್ಯತೆಯಿಂದ ವ್ಯಾಪಾರ ವಹಿವಾಟು ಮಾಡುವುದನ್ನು ತೋರ್ಪಡಿಸಿದ್ದಾರೆ ಎಂದು ಹೇಳಿದರು.

ಸಿಸ್ಟಮ್ ಡೋಮೈನ್ಸ್ ನ ನಿರ್ದೇಶಕ  ಕೃಷ್ಣನ್ ಆಗರ್ವಾಲ್ ಮಾತನಾಡಿ, ಇಂದಿನ  ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವಿಪುಲ ಸಾಧ್ಯತೆಗಳಿವೆ. ಅದನ್ನು ಮನಗಂಡೇ  ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಬಿಎ ಪದವಿ ಪಡೆಯಲು ಮುಂದಾಗುತ್ತಿದ್ದಾರೆ. ತಯಾರಿಸಿದ ವಸ್ತುಗಳು ಮಾರಾಟವಾಗಬೇಕಾದರೆ,ಮಾರ್ಕೆಟಿಂಗ್ ಕೌಶಲ್ಯ ತಿಳಿದಿರಲೇ ಬೇಕು.ಉದ್ಯೋಗ ದೊರೆತು ಅದರ ಅನುಭವ ಪಡೆಯುವುದಕ್ಕಿಂತ ಮೊದಲೇ ಅಂದರೆ ಕಲಿಕೆಯ ಹಂತದಲ್ಲೇ ಮಾರ್ಕೆಟಿಂಗ್ ತಂತ್ರಗಾರಿಕೆಯನ್ನು ಅರಿತುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳಿಗಾಗಿ ಈ ಮೇಳವನ್ನು ಆಯೋಜಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪಡೆದ ಅನುಭವ ಅಪಾರ ಎಂದೇ ಹೇಳಬಹುದು ಎಂದರು.

ವಿದ್ಯಾರ್ಥಿಗಳು ಹೆಚ್ಚಿನ ವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಲಾಭಗಳಿಕೆಯ ದೃಷ್ಟಿಯಿಂದ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು. ಆದರೆ ಕೆಲವು ವಸ್ತುಗಳನ್ನು ವಿದ್ಯಾರ್ಥಿಗಳೇ ತಯಾರಿಸಿದ್ದರು. ಜತೆಗೆ ಎಲ್ಲದರ ಮೇಲೆಯೂ ವಿದ್ಯಾರ್ಥಿಗಳು ನಿಗಾಮೇಲೆಯೂ ವಿದ್ಯಾರ್ಥಿಗಳು ನಿಗಾ ವಹಿಸಿದ್ದರು.

ಕೆಲ ವಿದ್ಯಾರ್ಥಿಗಳು ತಾವೇ ತಯಾರಿಸಿದ ಸಿಹಿ-ಖಾರ ಖಾದ್ಯಗಳನ್ನು ತಮ್ಮ ಮಳಿಗೆಗಳಲ್ಲಿ ಮಾರಾಟ ಮಾಡಿದರೆ, ಕೆಲ ವಿಧ್ಯಾರ್ಥಿಗಳು ಫನ್ ಕಾರ್ನರ್ ಹೆಸರಿನಲ್ಲಿ ಗೇಮಿಂಗ್ ಸೆಂಟ‌ರ್, ಕೆಲವರು ಬಟ್ಟೆ ಅಂಗಡಿ ಮತ್ತೆ ಕೆಲವರು ಪುಸ್ತಕ ಮಳಿಗೆ , ಜ್ಯೂಸ್ ಕಾರ್ನರ್ ,ಹಣ್ಣಿನ ಅಂಗಡಿಗಳನ್ನು  ತೆರೆದಿದ್ದರು.

ಇನ್ನು ಮೆಹೆಂದಿ ಮಳಿಗೆಯಲ್ಲಂತೂ ಮಹೆಂದಿ ಹಚ್ಚಿಸಿಕೊಳ್ಳುವುದರ ಜೊತೆಗೆ ಉಗುರಿನ ಅಲಂಕಾರ ಕೂಡ ಇತು. ನೇಲ್ ಉಗುರಿನ ಅಲಂಕಾರ ಕೂಡ ಇತ್ತು. ನೇಲ್ ಆರ್ಟ್ ಮಳಿಗೆಯಲ್ಲಂತೂ ವಿದ್ಯಾರ್ಥಿನಿಯರ ದೊಡ್ಡ ಗುಂಪೇ ಸೇರಿತ್ತು. ಇನ್ನು  ವಿವಿಧ ರಾಜ್ಯಗಳ  ರುಚಿಯಾದ ಖಾದ್ಯಗಳ ಪರಿಚಯವನ್ನು ವಿದ್ಯಾರ್ಥಿಗಳು  ಮಾಡಿಕೊಟ್ಟರು.

ಅಂತೂ ಕೊನೆಗೆ ಮೇಳ ಮುಗಿದಾಗ ವಿದ್ಯಾರ್ಥಿಗಳ ಮುಖದಲ್ಲಿ ತೃಪ್ತಿಯ ಭಾವ ಕಂಡುಬಂದಿತ್ತು. ವಸ್ತುಗಳೆಲ್ಲವೂ ಮಾರಾಟವಾಗಿ ಉತ್ತಮ ಲಾಭ ದೊರೆತಾಗ ಅವರಿಗೆ ಮಾರುಕಟ್ಟೆ ತಂತ್ರದ ನಿಜವಾದ ಪರಿಚಯವಾಗಿತ್ತು.

ಈ ವಿದ್ಯಾರ್ಥಿ ಬಜಾರ ನಲ್ಲಿ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದು, ಸಿಬ್ಬಂದಿಗಳು ತಮ್ಮ ವಿದ್ಯಾರ್ಥಿಗಳ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯವನ್ನು ಹೆಚ್ಚಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಬಿ ಜಿ ಎಸ್ ಸಮೂಹ ಸಂಸ್ಥೆಯ ಮುಖ್ಯ ಆಡಳಿತಧಿಕಾರಿ ಡಾ. ಎನ್. ಶಿವರಾಮ್ ರೆಡ್ಡಿ, ಎಸ್ ಜೆ ಸಿ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ ಟಿ ರಾಜು, ರಿಜಿಸ್ಟ್ರಾರ್ ಜೆ.ಸುರೇಶ್, ಕಾಲೇಜಿನ ಪ್ರಾoಶುಪಾಲ  ಡಾ.ಬಿ.ಆರ್.ವೆಂಕಟೇಶ್ ಬಾಬು, ಕಾಲೇಜಿನ ಭೋಧಕ, ಭೋಧಕೇತರ ಸಿಬ್ಬಂಧಿ, ವಿದ್ಯಾರ್ಥಿಗಳು ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics