ಶಕ್ತಿ ಯೋಜನೆ: KSRTCಗೆ 3,930 ಕೋಟಿ ರೂ. ಆದಾಯ
ಶಕ್ತಿ ಯೋಜನೆ: KSRTCಗೆ 3,930 ಕೋಟಿ ರೂ. ಆದಾಯ

ಬೆಂಗಳೂರು, (ಜೂ.11): ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ'ಯೋಜನೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯ ದಾಖಲೆ ಪ್ರಮಾಣದಲ್ಲಿ ಹೆಚ್ಚಳಕ್ಕೆ ನೇರ ಹಾಗೂ ಪರೋಕ್ಷವಾಗಿ ನೆರವಾಗಿದೆ. ಯೋಜನೆಯ ಪರಿಣಾಮವಾಗಿ 2023-24ನೇ ಸಾಲಿನಲ್ಲಿ 3,930 ಕೋಟಿ ರೂ. ಆದಾಯಗಳಿಸಿದೆ.

ಕೆಎಸ್‌ಆರ್‌ಟಿಸಿಯ ಒಟ್ಟು ಸಂಚಾರ ಆದಾಯ 2016 ರಲ್ಲಿ 2,738 ಕೋಟಿ ರೂ., 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ, 3,182 ಕೋಟಿ ರೂ‌, 2020 ರಲ್ಲಿ 1,569 ಕೋಟಿ ರೂ. (ಕೋವಿಡ್‌ನಿಂದಾಗಿ ಕಡಿಮೆ ಆದಾಯ), 2021ರಲ್ಲಿ 2,037 ಕೋಟಿ ರೂ. ಮತ್ತು 2022 ರಲ್ಲಿ 3,349 ಕೋಟಿ ಆಗಿತ್ತು.

ಶಕ್ತಿ ಯೋಜನೆಯ ಅನುಷ್ಠಾನದ ನಂತರ 2023-24ನೇ ಸಾಲಿನ ಆದಾಯ 3,930 ಕೋಟಿ ರು. ಆಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಶಕ್ತಿ ಆದಾಯ ಶೇ.42.5 (2,044 ಕೋಟಿ ರು.) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (2,764 ಕೋಟಿ ರು.) ಇತ್ತು. ಆದರೆ, ಮಹಿಳಾ ಪ್ರಯಾಣಿಕರು ನಮ್ಮ ಸೇವೆಯನ್ನು ಬಳಸಿದಾಗ, ಅವರು ಎಲ್ಲ ಸಮಯದಲ್ಲೂ ಒಬ್ಬಂಟಿಯಾಗಿ ಪ್ರಯಾಣಿಸಿರುವುದಿಲ್ಲ. ಪತಿ ಅಥವಾ ಮಕ್ಕಳೊಂದಿಗೆ ಪ್ರಯಾಣಿಸಿದ್ದಾರೆ. ಇದರಿಂದ ಶಕ್ತಿಯೇತರ ಆದಾಯ ಹೆಚ್ಚಳವಾಗಿದೆ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others