ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೀ ದಕ್ಷಿಣಾಮೂರ್ತಿ
ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೀ ದಕ್ಷಿಣಾಮೂರ್ತಿ

ಸರ್ವಲೋಕ ಗಳಿಗೆ ಗುರುವು, ಭವ ರೋಗಿಗಳಿಗೆ ವೈದ್ಯನು, ಸಕಲ ವಿದ್ಯೆಗಳಿಗೆ ನಿಧಿಯು ಆದ ದಕ್ಷಿಣಾಮೂರ್ತಿಗೆ  ನಮಸ್ಕರಿಸುತ್ತೇನೆ.

"ನ  ಹಿ ಜ್ಞಾನೇನ ಸದೃಶಮ್ " ಜ್ಞಾನ ದಂತ ಪಾವನಕರ ವಸ್ತು ಇನ್ನೊಂದಿಲ್ಲ ಎಂಬುದು ಭಗವಂತನ ಸ್ಪಷ್ಟೋಕ್ತಿ. ಆದ್ದರಿಂದ ವಿವೇಕಿಗಳು ಜ್ಞಾನವೂಂದನ್ನೆ ಬಯಸುತ್ತಾರೆ.  ಜ್ಞಾನವನ್ನು ಪಡೆದರೆ ಎಲ್ಲವನ್ನು ಪಡೆದಂತೆ. ಅಂತಹ ಜ್ಞಾನ ವನ್ನು ನೀಡಬಲ್ಲ ಗುರು,  ಜ್ಞಾನ ಸ್ವರೂಪನೇ ಆದ ಶ್ರೀ ದಕ್ಷಿಣಾಮೂರ್ತಿ.

ಆತ ಗುರುವಾಗಿ, ಈಶ್ವರನಾಗಿ ನಮ್ಮೆಲ್ಲರ ಆತ್ಮನಾಗಿ ಹೀಗೆ ಮೂರು ರೂಪ ದಿಂದ ತೋರುತ್ತಿರುವ ಸರ್ವವ್ಯಾಪಿಯೆಂದು  ಶ್ರೀ  ಸುರೇಶ್ವರಾಚಾರ್ಯರು ದಕ್ಷಿಣಾ  ಮೂರ್ತಿಯನ್ನು ಸ್ತುತಿಸಿದ್ದಾರೆ. ವಟವೃಕ್ಷದ ಮೂಲದಲ್ಲಿ ಸಾಕಾರವಾಗಿ ಕಾಣಿಸಿ ಕೊಂಡು ಉಪಾಸಕರೆಲ್ಲರಿಂದ  ಉಪಾಸ್ಯನಾದವನು ದಕ್ಷಿಣಾಮೂರ್ತಿ. "ಓಂ ಕಾರ" ವಿದ್ಯೆಯನ್ನು ಉಪದೇಶಿಸಿ ಅಜ್ಞಾನಂದಕಾರವನ್ನು ನಾಶಮಾಡುವವನು. 

ದಕ್ಷಿಣಾಮೂರ್ತಿಯು ಪರಮೇಶ್ವರನ ಅಂಶವಾಗಿದ್ದು , ಶಿವನ ಲೀಲಾವಿಭೂತಿ ಗಳಲ್ಲಿ ಒಂದು. ದಕ್ಷಿಣಾಮೂರ್ತಿ ಒಂದು "ವಟ ವೃಕ್ಷದ" ಕೆಳಗೆ  ಧ್ಯಾನಸ್ಥನಾಗಿ ಕುಳಿತು ಎಡಗಾಲು ಬಲ ಮೊಣಕಾಲಿನ ಮೇಲಿದೆ. ಇಳಿಬಿಟ್ಟ ಬಲಗಾಲಿನ ಪಾದದಿಂದ ಅಪಸ್ಮಾರನೆಂಬ ರಕ್ಕಸನನ್ನು ತುಳಿಯುತ್ತಿದ್ದಾನೆ. ಸರ್ಪವೆಂಬ ಯೋಗ ಪಟ್ಟದಿಂದ ಅಲಂಕೃತನಾಗಿದ್ದಾನೆ. ದಕ್ಷಿಣಾ ಮೂರ್ತಿಗೆ ನಾಲ್ಕು ಕೈಗಳು ಇದ್ದು, ಒಂದು ಕೈಯಲ್ಲಿ ಪರುಷ ಮುದ್ರೆಯನ್ನು, ಇನ್ನೊಂದು ಕೈಯಲ್ಲಿ  ಅಗ್ನಿಯನ್ನು ಧರಿಸಿದ್ದಾನೆ.

ಮೊಳಕಾಲ ಮೇಲೆ ಕೈಯನ್ನು ಇಟ್ಟುಕೊಂಡಿದ್ದಾನೆ. ವೀಣೆ, ಮುತ್ತಿನ ಜಪಮಾಲೆ, ವೇದ ಗ್ರಂಥ, ಜ್ಞಾನಮುದ್ರೆಗಳನ್ನು ಚತುರ್ಭುಜ ಗಳಲ್ಲಿ ಧರಿಸಿ, ಶುಭ್ರ ಬಿಳಿ ಭಸ್ಮ ಲೇಪಿತ  ಬಿಳಿಯದಾದ ಸ್ವಚ್ಛ ಶರೀರವನ್ನು ಹೊಂದಿರುವ, ಕಿರೀಟ ಧರಿಸಿ ಯೋಗಮುದ್ರೆ ಭಂಗಿಯಲ್ಲಿ  ಇರುವವನು, ಅವಿದ್ಯೆ ಎಂಬ ಕತ್ತಲೆಯನ್ನು ಕಳೆಯುವ ಬೆಳ್ಳಂಬೆಡಗಾದ ದಕ್ಷಿಣಾಮೂರ್ತಿ ಎಂದು ಉಪನಿಷತ್ತಿನಲ್ಲಿ ವರ್ಣಿಸಿದ್ದಾರೆ. ಶಿವನು ಯೋಗ, ಸಂಗೀತ ಮತ್ತು ಬುದ್ಧಿವಂತಿಕೆಯ ಗುರುವೆಂದು ಪರಿಗಣಿಸಲಾಗಿದೆ. 

ಒಮ್ಮೆ ಬ್ರಹ್ಮನ ಪುತ್ರರಾದ, ಸನಕ, ಸನಾತನ, ಸನಂದನ, ಸನತ್ಕುಮಾರ, ಇವರು ಬ್ರಹ್ಮಜ್ಞಾನ ಪಡೆಯಬೇಕೆಂಬ ಆಕಾಂಕ್ಷೆಯಿಂದ ತಪಸ್ಸನ್ನು ಮಾಡುತ್ತಾರೆ. ಆದರೆ ಅವರು ಕಠಿಣ ತಪಸ್ಸು ಮಾಡಿದರು ಬ್ರಹ್ಮಜ್ಞಾನ ಲಭಿಸಲಿಲ್ಲ. ನಂತರ ಅವರು ಪರಮೇಶ್ವರನ ಹತ್ತಿರ ಹೋಗಿ ಪರಮೇಶ್ವರ ನಮಗೆ ಪರಮ ಅದ್ಭುತವಾದ ಜ್ಞಾನವನ್ನು ಅನುಗ್ರಹಿಸು ಎಂದು ಬೇಡಿ ಕೊಂಡರು. ಆಗ ವಟವೃಕ್ಷದ ಕೆಳಗೆ ಕುಳಿತಂತೆ ಪರಮೇಶ್ವರನ ಸುತ್ತಮುತ್ತಲೂ ಋಷಿಮುನಿಗಳು ಕುಳಿತಿದ್ದರು. ಬ್ರಹ್ಮನ ಮಾನಸ ಪುತ್ರರು ಕೇಳಿದ ಪ್ರಶ್ನೆಗೆ ಶಿವನು  ಒಂದು ಉತ್ತರವನ್ನು ಕೊಡದೆ ಮೌನವಾಗಿ ಧ್ಯಾನಸ್ಥನಾಗಿ ಯೋಗ ಭಂಗಿಯಲ್ಲಿ ಕುಳಿತಿದ್ದನು. 

ಅಲ್ಲಿ ಕುಳಿತಿದ್ದ ಋಷಿಗಳಿಗೆ ಈ ದೃಶ್ಯವನ್ನು ನೋಡಿ ಜ್ಞಾನೋದಯವಾಗಿ ಇವನೇ "ದಕ್ಷಿಣಾಮೂರ್ತಿ" ಎಂದುಕೊಂಡರು. ಹಿಂದೂ ಪುರಾಣಗಳಲ್ಲಿ ಇದೇ ರೂಪವನ್ನೇ ದಕ್ಷಿಣಾಮೂರ್ತಿ ರೂಪ ಎಂದು ಕರೆಯುತ್ತಾರೆ. ದಕ್ಷಿಣಾಮೂರ್ತಿಯ ರೂಪವನ್ನು ನೋಡಿದಾಗ, ಜ್ಞಾನ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ. ಜ್ಞಾನವನ್ನು ಅನುಭವಿಸಬೇಕು. ದಕ್ಷಿಣಾಮೂರ್ತಿ ಬಗ್ಗೆ ಪುರಾಣ ಗ್ರಂಥಗಳಲ್ಲಿ ವಿವರಿಸಿದ್ದಾರೆ ಗುರು ಪರಂಪರೆಗೆ ಆದ್ಯ  ದಕ್ಷಿಣಾಮೂರ್ತಿ. ವೇದವೇ ದಕ್ಷಿಣಾಮೂರ್ತಿ. ದತ್ತಾತ್ರೇಯ, ಗುರುದತ್ತ ಇವರೆಲ್ಲ ಬೇರೆ ಬೇರೆ ಅಲ್ಲ, ತತ್ವ ದೃಷ್ಟಿಯಲ್ಲಿ ಒಂದೇ ಉಪಾಸನೆಯಲ್ಲಿ ಸ್ವಲ್ಪ ಬೇರೆ. ಶ್ರೀರಾಮ- ಕೃಷ್ಣರು ಬೇರೆ ಬೇರೆಯಾದರೂ ಅವರು ಒಂದೇ ಅದೇ ರೀತಿ ದಕ್ಷಿಣಾಮೂರ್ತಿ. 

ಶಿವನ  ದಕ್ಷಿಣಾಮೂರ್ತಿಯ ಗುರು ಸ್ವರೂಪವನ್ನೇ  ಗುರುವೆಂದು ಸಾಂಪ್ರದಾಯಿಕವಾಗಿ ಪೂಜಿಸುತ್ತಾರೆ. "ದಕ್ಷಿಣ "ಎಂದರೆ ಸಮರ್ಥತೆ. ದುಃಖ ನೋವಿಗೆ ಕಾರಣ ಅಜ್ಞಾನ, ಅಂತಹ ಅಜ್ಞಾನವನ್ನು ನಾಶಮಾಡಿದರೆ ದುಃಖ ದೂರವಾಗುತ್ತದೆ.‌  ಶಾಶ್ವತವಾಗಿ ದುಃಖವನ್ನು  ಹೋಗಲಾಡಿಸಲು ಪರಿಹಾರ ದಯ ಮತ್ತು ದಾಕ್ಷಿಣ್ಯ. ದಾಕ್ಷಿಣ್ಯ ಮೂರ್ತಿಯಾಗಿ ದರ್ಶನ ಕೊಟ್ಟರೆ ಅದೇ ದಕ್ಷಿಣಾಮೂರ್ತಿ. ದಕ್ಷಿಣಾಮೂರ್ತಿ ಹತ್ತು ಮೂರ್ತಿಗಳಲ್ಲಿ ಶಿವನ ಕೊನೆಯ ಅಂಶವು ಸರ್ವೋಚ್ಚ ಅಥವಾ ಅಂತಿಮ ಅರಿವು ಮತ್ತು ಜ್ಞಾನದ ದಕ್ಷಿಣಾ ಮೂರ್ತಿಯ ವ್ಯಕ್ತಿತ್ವವಾಗಿದೆ.  ವೀಣೆ, ಸಂಗೀತ, ಯೋಗ, ಸಂಹಾರ, ಶಕ್ತಿ, ಜ್ಞಾನ, ಅನುಷ್ಠಾನ, ವ್ಯಾಖ್ಯಾನ, ವಿದ್ಯೆ, ಇವು ಶಿವನ ಹತ್ತು ಅಂಶಗಳು. 

ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಶಿವನ ಅಂಶಕ್ಕೆ ದಕ್ಷಿಣಾಮೂರ್ತಿ ಎಂಬ ಹೆಸರು ಬಂದಿತು. ದಕ್ಷಿಣಾಮೂರ್ತಿಯನ್ನು ಬುದ್ಧಿಮತ್ತೆಯ ದೇವರು ಎಂದು ಪೂಜಿಸುತ್ತಾರೆ. ಯಾರಿಗಾದರೂ ಗುರು ಸಿಗದಿದ್ದರೆ ದಕ್ಷಿಣಾಮೂರ್ತಿಯನ್ನು ಗುರುವೆಂದು ಪೂಜಿಸುತ್ತಾರೆ. ಹೆಚ್ಚಿನ ಜ್ಞಾನದ  ಆಕಾಂಕ್ಷೆ  ಇರುವವರು ದಕ್ಷಿಣಾ ಮೂರ್ತಿಯನ್ನು ಆರಾಧಿಸುತ್ತಾರೆ. ಅಜ್ಞಾನವೆಂಬ ಸಮುದ್ರದ ನೀರನ್ನು ಬತ್ತಿಸುವ ವಡವಾಗ್ನಿ ಅವನು. ಆಚಾರ್ಯರಲ್ಲೇ  ಶ್ರೇಷ್ಠವಾದ ಆಚಾರ್ಯ ದಕ್ಷಿಣಾಮೂರ್ತಿ.

ಗುರು ಸಂಪ್ರದಾಯಕ್ಕೆ ಮೊದಲ ಆದ್ಯತೆ ದಕ್ಷಿಣಾಮೂರ್ತಿಗೆ ಗಾಯತ್ರಿ ಮಂತ್ರ ದಿಂದ ಬುದ್ಧಿ ಮತ್ತು ಜ್ಞಾನ ಸಿದ್ಧಿಸುತ್ತದೆ. ಗ್ರಹ ಪೀಡೆ, ಪಿತೃ ದೋಷ ಮತ್ತು  ಶನಿದೋಷ, ಪೀಡೆಗಳು ತೊಂದರೆಗಳ ಪರಿಹಾರ ದಕ್ಷಿಣಾ ಮೂರ್ತಿಯ ಗಾಯತ್ರಿ ಮಂತ್ರ  ಸರ್ವಶ್ರೇಷ್ಠ ಮಂತ್ರ. ಶುಭಕಾರ್ಯಗಳು ನಡೆಯಬೇಕಾದರೆ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸುತ್ತಾರೆ.

ಅವರವರ ಇಷ್ಟ ಸಿದ್ಧಿಸಿಕೊಳ್ಳಲು, ಅಂದರೆ ಸಂಗೀತ, ಶಿಕ್ಷಣ,ಸಾಹಿತ್ಯ, ನೃತ್ಯ, ವೈದ್ಯಕೀಯ, ಇಂಥ ಸೃಜನಶೀಲವಾದ ಜ್ಞಾನವನ್ನು ಪಡೆಯಲು ದಕ್ಷಿಣಾಮೂರ್ತಿಯನ್ನು ಆರಾಧಿಸುತ್ತಾರೆ. ಮನದಿಷ್ಟಾರ್ಥ ನೆರವೇರುತ್ತದೆ. 

ದಕ್ಷಿಣದ ವಾಸ್ತು ದೋಷ ಇರುವವರು ದಕ್ಷಿಣಾಮೂರ್ತಿಯನ್ನು ಪೂಜಿಸಿದರೆ ಪರಿಹಾರವಾಗುತ್ತದೆ.

ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ..

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime