ದಕ್ಷಿಣ ಕಾಶಿ ನಂಜುಂಡೇಶ್ವರನ 35 ಹುಂಡಿ ಎಣಿಕೆ; 1.72 ಕೋಟಿ ರೂ. ಕಾಣಿಕೆ| ವಿಡಿಯೋ ನೋಡಿ
ದಕ್ಷಿಣ ಕಾಶಿ ನಂಜುಂಡೇಶ್ವರನ 35 ಹುಂಡಿ ಎಣಿಕೆ; 1.72 ಕೋಟಿ ರೂ. ಕಾಣಿಕೆ| ವಿಡಿಯೋ ನೋಡಿ

ನಂಜನಗೂಡು, (ಮೇ.15): ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ಮತ್ತೆ ಕೋಟ್ಯಾಧೀಶನಾಗಿದ್ದಾರೆ. ನಂಜುಂಡೇಶ್ವರನ ದೇಗುಲಕ್ಕೆ ಭಕ್ತರಿಂದ ದೇಣಿಗೆ ಹರಿದುಬಂದಿದ್ದು ಹುಂಡಿ ಎಣಿಕೆ ಕಾರ್ಯದಲ್ಲಿ ಇದು ಸಾಬೀತಾಗಿದೆ.

ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ದಲ್ಲಿ 1.72 ಕೋಟಿ ರೂ ನಗದು , 92 ಗ್ರಾಂ 50 ಮಿಲಿಗ್ರಾo ಚಿನ್ನ ಹಾಗೂ 3 ಕೆಜಿ 500 ಗ್ರಾಂ ಬೆಳ್ಳಿ ಲಭ್ಯವಾಗಿದೆ.

ಮಂಗಳವಾರ ದೇವಾಲಯದ ದಾಸೋಹ ಭವನದ ಆವರಣದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಒಟ್ಟು 35 ಹುಂಡಿಗಳನ್ನ ತೆಗೆದು ಎಣಿಕೆ ಮಾಡಲಾಯ್ತು.

ಈ ವೇಳೆ 1.72, 85, 296 ರೂ. ಲಭ್ಯವಾಗಿದ್ದು, ಇದರೊಂದಿಗೆ 92 ಗ್ರಾo 50 ಮಿಲಿ ಗ್ರಾಂ ಚಿನ್ನ , 3 ಕೆಜಿ 500 ಗ್ರಾಂ ಬೆಳ್ಳಿ, ಹಾಗೂ 33 ವಿದೇಶಿ ಕರೆನ್ಸಿ ಲಭ್ಯವಾಗಿದೆ.

ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಈ ಪ್ರಮಾಣದ ಹಣದ ಮೊತ್ತ ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸತೀಶ್, ವೆಂಕಟೇಶ್ ಪ್ರಸಾದ್, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ವಿದುಲತಾ, ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಕಾರ್ತಿಕ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports

HL

health