ರೈಲಿಗೆ ಸಿಲುಕಿ 50ಕ್ಕೂ ಹೆಚ್ಚು ಕುರಿಗಳ ಸಾವು..!
ರೈಲಿಗೆ ಸಿಲುಕಿ 50ಕ್ಕೂ ಹೆಚ್ಚು ಕುರಿಗಳ ಸಾವು..!

ದಾಬಸ್‌ಪೇಟೆ, (ಮೇ.15): ಕೆರೆಯಲ್ಲಿ ನೀರು ಕುಡಿಸಲು ರೈಲ್ವೆ ಹಳಿ ದಾಟುವಾಗ ರೈಲು ಕುರಿಗಳ ಮೇಲೆ ಹರಿದ ಪರಿಣಾಮ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಿಡವಂದ ರೈಲ್ವೆ ನಿಲ್ದಾಣದ ಕೆರೆ ಸಮೀಪ ನಡೆದಿದೆ.

ನಿಡವಂದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಸಂಜೆ 4 ಗಂಟೆ ಸುಮಾರಿನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಪ್ಯಾಸೆಂಜರ್‌ರೈಲಿಗೆ 50ಕ್ಕೂ ಹೆಚ್ಚು ಕುರಿಗಳು ಸಿಕ್ಕಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. 

ತುಮಕೂರು ಜಿಲ್ಲೆ ದೊಡ್ಡಾಲದ ಮರದ ಬಳಿಯ ಹೊಸಮಾರನಹಳ್ಳಿ ರೈತ ದೇವರಾಜು ಮತ್ತಿತರ ರೈತರಿಗೆ ಸೇರಿರುವ ರೂ.15 ಲಕ್ಷಕ್ಕೂ ಹೆಚ್ಚು ಮೌಲ್ಯದ ಕುರಿಗಳು ಮೃತಪಟ್ಟಿವೆ.

ರೈತ ದೇವರಾಜು ಮಾತನಾಡಿ, ನಾವು ಕುರಿಗಳಿಂದಲೇ ಬದುಕು ಕಟ್ಟಿಕೊಂಡಿದ್ದು, ಕುರಿಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದು, ಸರ್ಕಾರ ನಮಗೆ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. 

ಸ್ಥಳೀಯ ನಿವಾಸಿಗಳು ಮಾತನಾಡಿ, ಹಳಿ ದಾಟಲು ಕೂಡಲೇ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime