SSLC ಫಲಿತಾಂಶ ಕುಸಿತ: ಶಿಕ್ಷಕರ ಬೇಸಿಗೆ ರಜೆ ಕಟ್! ಇಂದಿನಿಂದ ಶಾಲೆಗೆ ಬುಲಾವ್
SSLC ಫಲಿತಾಂಶ ಕುಸಿತ: ಶಿಕ್ಷಕರ ಬೇಸಿಗೆ ರಜೆ ಕಟ್! ಇಂದಿನಿಂದ ಶಾಲೆಗೆ ಬುಲಾವ್

ಬೆಂಗಳೂರು, (ಮೇ‌.15); ಜೂನ್‌-ಜುಲೈನಲ್ಲಿ ನಡೆವ ಎಸ್ಸೆಸ್ಸೆಲ್ಸಿ ಪರೀಕ್ಷೆ-2ಗೆ ನೋಂದಾಯಿಸಿರುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂನ್ 5ರವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ನಿರ್ದೇಶನ ನೀಡಿದೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಭಾರೀ ಕುಸಿದ ಕಾರಣ ಸರ್ಕಾರ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಆದರೆ, ಮೇ 29ರವರೆಗೆ ಬೇಸಿಗೆ ರಜೆ ಇದ್ದರೂ ಶಾಲೆಗೆ ಬನ್ನಿ ಎಂದಿರುವುದಕ್ಕೆ ಶಿಕ್ಷಕ ವರ್ಗದಿಂದ ತೀವ್ರ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗತೊಡಗಿದೆ.

ಮಂಡಳಿ ಪರೀಕ್ಷಾ ನಿರ್ದೇಶಕರು ಮಂಗಳವಾರ ವಿಡಿಯೋ ಕಾನ್ಸರೆನ್ಸ್ ಮೂಲಕ ನೀಡಿದ ನಿರ್ದೇಶನದ ಆಧಾರದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇ ಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ- 2 ಬರೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಬುಧವಾರದಿಂದಲೇ ವಿಶೇಷ ತರಗತಿಗಳನ್ನು ಆರಂಭಿಸುವಂತೆ ಮುಖ್ಯೋಪಾಧ್ಯಾಯರುಗಳಿಗೆ ಮಂಗಳವಾರ ಸಂಜೆಯೇ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆಯಾ ವಿಷಯದ ಶಿಕ್ಷಕರುಗಳೇ ಶಾಲೆಗಳಿಗೆ ಹಾಜರಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಫೇಲಾಗಿರುವ, ಫಲಿತಾಂಶ ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಬೇಕೆಂದು  ಸೂಚಿಸಲಾಗಿದೆ. 

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲಾ ಡಿಡಿಪಿಐಗಳು ಹೊರಡಿಸಿರುವ ಸುತ್ತೋಲೆಗಳು 'ಹರಿತಲೇಖನಿಗೆ' ಲಭ್ಯವಾಗಿವೆ.

ಅಲ್ಲದೆ, ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಆರಂಭಿಸಿರುವುದನ್ನು ಪರಿಶೀಲಿಸಲು ಪ್ರತಿ ಜಿಲ್ಲಾ ಹಂತದಲ್ಲಿ ವಿದ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಬೇಕು. ಪ್ರತಿ ಶಾಲೆಗೆ ಈ ತಂಡ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕೆಂದು ಸೂಚಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime

HL

education

HL

others

HL

economy