ಮಿಥುನ ರಾಶಿಯ ಏಪ್ರಿಲ್ 2024ರ ರಾಶಿ ಫಲ: ಧನಲಾಭ, ಗೌರವ, ಸುಖ ಭೋಜನ, ಮಾನ್ಯತೆ, ಬಡ್ತಿ ಮುಂತಾದ ಶುಭಫಲ ಸಾಧ್ಯತೆ
ಮಿಥುನ ರಾಶಿಯ ಏಪ್ರಿಲ್ 2024ರ ರಾಶಿ ಫಲ: ಧನಲಾಭ, ಗೌರವ, ಸುಖ ಭೋಜನ, ಮಾನ್ಯತೆ, ಬಡ್ತಿ ಮುಂತಾದ ಶುಭಫಲ ಸಾಧ್ಯತೆ

ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಮಾಸಿಕ ಮಿಥುನ ರಾಶಿಯವರಿಗೆ  ಆರೋಗ್ಯ, ಶಿಕ್ಷಣ, ವೃತ್ತಿ, ಹಣಕಾಸು, ಕುಟುಂಬ ಮತ್ತು ವ್ಯಾಪಾರಕ್ಕೆ ಸಂಬಂದಿಸಿದ ಫಲಿತಾಂಶಗಳು ಹೀಗಿದೆ.

ಈಗ ನಿಮಗೆ ಸಂಪೂರ್ಣ ಗುರುಬಲ ಇರುವುದರಿಂದ ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈಗ ಸಲೀಸಾಗಿ ನಡೆಯುತ್ತದೆ. ಸಮಸ್ಯೆಗಳಿಗೆ ಒಂದು ಪರಿಹಾರ ಗೋಚರವಾಗುತ್ತದೆ. ಲಾಭ ಸ್ಥಾನದ ಗುರು ನಿಮಗೆ ಧನಲಾಭ, ಗೌರವ, ಸುಖ ಭೋಜನ, ಮಾನ್ಯತೆ, ಬಡ್ತಿ ಮುಂತಾದ ಶುಭಫಲಗಳನ್ನು ಕೊಡುತ್ತಾನೆ.

ಅವಿವಾಹಿತರಿಗೆ ವಿವಾಹ ಯೋಗ ಇದೆ. ಮಕ್ಕಳಿಗಾಗಿ ಪ್ರಯತ್ನ ಪಡುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ನಾಲ್ಕನೇ ಮನೆಯ ಕೇತುವಿನಿಂದ ತಾಯಿಗೆ ಒತ್ತಡ ಹೆಚ್ಚಾಗುತ್ತದೆ. ಐದನೇ ಮನೆಯಲ್ಲಿ ಶುಕ್ರ ನಿಮಗೆ ಉತ್ತಮಫಲಗಳನ್ನು ನೀಡುತ್ತಾನೆ.

ಧನಲಾಭ, ಸಂತಾನದಿಂದ ಖುಷಿ, ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದು ಮುಂತಾದ ಶುಭ ಸಂಗತಿಗಳು ನಡೆಯುತ್ತದೆ. ಆಭರಣ ಖರೀದಿ ಮಾಡುತ್ತೀರಿ. ಮನಸ್ಸಿಗೆ ಖುಷಿ ಕೊಡುವಂಥ ವಿಷಯಗಳು ನಡೆಯುತ್ತದೆ. ವಿದೇಶ ಪ್ರಯಾಣ ಯೋಗ ಇದೆ. ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಸರ್ಕಾರಿ ನೌಕರಿಗೆ ಪ್ರಯತ್ನ ಪಡುತ್ತಿದ್ದರೆ ಈಗ ಯಶಸ್ಸು ಸಿಗುತ್ತದೆ.

ಮಿಥುನ ರಾಶಿ: ಮೃಗಶಿರಾ (3, 4 ಪಾದ), ಆರಿದ್ರ (4 ಪಾದಗಳು), ಪುನರ್ವಸು (1, 2, 3 ಪಾದಗಳು) ಅಡಿಯಲ್ಲಿ ಜನಿಸಿದ ಜನರು ಮಿಥುನ ರಾಶಿ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಬುಧ.

ಮಿಥುನ ರಾಶಿಗೆ ಸೂಚಿಸಲಾದ ಅಕ್ಷರಗಳು:  ಕ,ಕಿ,ಕು,ಕೆ,ಕೊ,ಚ,ಹ.

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....