ಕ್ಯಾಂಟರ್ - ಮಹಿಂದ್ರಾ ಪಿಕಪ್ ನಡುವೆ ACCIDENT: 20 ಕುರಿ‌, ಮೂವರ ದುರ್ಮರಣ..!
ಕ್ಯಾಂಟರ್ - ಮಹಿಂದ್ರಾ ಪಿಕಪ್ ನಡುವೆ ACCIDENT: 20 ಕುರಿ‌, ಮೂವರ ದುರ್ಮರಣ..!

ಹಾವೇರಿ, (ಏ.02): 20 ಕುರಿ ಹಾಗೂ ಮೂವರು ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ‌ ಜಿಲ್ಲೆಯ ವರದಾಹಳ್ಳಿ ಬಳಿ ಮಂಗಳವಾರ ಸಂಭವಿಸಿದ್ದು, ಕ್ಯಾಂಟ‌ರ್ ಹಾಗೂ ಕುರಿಗಳನ್ನು ಸಾಗಿಸುತ್ತಿದ್ದ ಮಹೀಂದ್ರ ಪಿಕಪ್ ವಾಹನಗಳ ನಡುವೆ ಡಿಕ್ಕಿಯಾಗಿದೆ.

ಕಾಕೋಳ ಗ್ರಾಮದ ಮೈಲಾರಪ್ಪ ಕೈದಾಳಿ (40 ವರ್ಷ), ಗುಡ್ಡಪ್ಪ ಕೈದಾಳಿ (35 ವರ್ಷ), ಶಿವಕುಮಾ‌ರ್ ಹೊಳಿಯಪ್ಪನವರ ಮೃತ‌‌ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯಿಂದ ಹಾವೇರಿಗೆ ಕುರಿಗಾಹಿಗಳು ಹೋಗುತ್ತಿದ್ದರು. ಬೆಳಗಾವಿ ಜಿಲ್ಲೆ ಕೇರೂರು ಗ್ರಾಮಕ್ಕೆ ಕುರಿ ತರಲು ಕುರಿಗಾಹಿಗಳು ಮುಂದಾಗಿದ್ದರು. ಈ ವೇಳೆ‌‌ ಅವಘಡ ಸಂಭವಿಸಿದೆ. 

ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು  ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....