ದೊಡ್ಡಬಳ್ಳಾಪುರ; ಕನ್ನಡವ ನಿರ್ಲಕ್ಷ್ಯ ತೋರಿದ ಆರೋಪ.. ಬಡಾವಣೆ, ವಾಣಿಜ್ಯ ಮಳಿಗೆ ಮಾಲೀಕರಿಗೆ ಕರವೇ ವಾರ್ನಿಂಗ್
ದೊಡ್ಡಬಳ್ಳಾಪುರ; ಕನ್ನಡವ ನಿರ್ಲಕ್ಷ್ಯ ತೋರಿದ ಆರೋಪ.. ಬಡಾವಣೆ, ವಾಣಿಜ್ಯ ಮಳಿಗೆ ಮಾಲೀಕರಿಗೆ ಕರವೇ ವಾರ್ನಿಂಗ್

ದೊಡ್ಡಬಳ್ಳಾಪುರ, (ಏ.02); ಪ್ರಖ್ಯಾತ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಬಡಾವಣೆ ಹಾಗೂ ವಾಣಿಜ್ಯ ಮಳಿಗಗಳಲ್ಲಿ ಕನ್ನಡವನ್ನು ನಿರ್ಲಕ್ಷ್ಯಿಸಿ ಆಂಗ್ಲ ಭಾಷೆಗೆ ಪ್ರಾಮುಖ್ಯತೆ ನೀಡುತ್ತ ಆರೋಪ ಹಿನ್ನೆಲೆಯಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಇಂದು ಸ್ಥಳಕ್ಕೆ ಭೇಟಿ ನೀಡಿ, ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿಯ ನಂದಿ ತಪ್ಪಲಿನಲ್ಲಿರುವ ಕೆಲ ಬಡಾವಣೆಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿ ಆಂಗ್ಲ ಭಾಷೆಯನ್ನು ವೈಭವಿಕರಿಸುತ್ತಿವೆ ಎಂದು ಆರೋಪಿಸಿದರು. 

ಈ ಕುರಿತು ನಾಮ ಫಲಕಗಳನ್ನು, ಜಾಹೀರಾತುಗಳನ್ನು ಬದಲಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ಬಡಾವಣೆಗಳ ಮಾಲೀಕರಿಗೆ ಮನವಿ ಪತ್ರ ನೀಡಿದ್ದೇವೆ, ಕನ್ನಡದ ನಿರ್ಲಕ್ಷ್ಯ ಮುಂದುವರಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.

ಈ ವೇಳೆ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಮುಖೇನಳ್ಳಿ ರವಿ, ಮಂಜುನಾಥ್, ಖಜಾಂಚಿ ಆನಂದ್, ನಗರ ಪ್ರಧಾನ ಕಾರ್ಯದರ್ಶಿ ರಘುನಂದನ್, ಸಂಚಾಲಕರಾದ ನೂರುಲ್ಲಾ, ಮುಖಂಡರಾದ ರಾಜಣ್ಣ, ಶ್ರೀನಿವಾಸ್, ಹೆಗ್ಗಡಿಹಳ್ಳಿ ಗ್ರಾಮ ಶಾಖೆಯ ಪ್ರಧಾನ ಕಾರ್ಯದರ್ಶಿ ಚೇತನ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

crime

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime