ಲೋಕಸಭೆ ಚುನಾವಣೆ; ಕರ್ನಾಟಕದಲ್ಲಿ BJP ಹೆಚ್ಚು ಸ್ಥಾನ ಗೆಲ್ಲಲು ಅಮಿತ್ ಶಾ ತಂತ್ರ
ಲೋಕಸಭೆ ಚುನಾವಣೆ; ಕರ್ನಾಟಕದಲ್ಲಿ BJP ಹೆಚ್ಚು ಸ್ಥಾನ ಗೆಲ್ಲಲು ಅಮಿತ್ ಶಾ ತಂತ್ರ

ಬೆಂಗಳೂರು, (ಏ.02); ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಇಂದು ಬಿಜೆಪಿ ಚಾಣಾಕ್ಯ ರಾಜ್ಯ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಿದರು.

ಕೇಂದ್ರ ಸಚಿವ ಅಮಿತ್ ಶಾ‌ ನೇತೃತ್ವದಲ್ಲಿ 4 ಲೋಕಸಭಾ ಕ್ಷೇತ್ರಗಳ ಪ್ರಮುಖರ ಸಭೆಯನ್ನು ಖಾಸಗಿ ಹೊಟೆಲ್ ನಲ್ಲಿ‌ ನಡೆಸಲಾಯಿತು.

ಈ ವೇಳೆಎಲ್ಲಾ ಬಂಡಾಯ, ಅಸಮಾಧಾನಗಳನ್ನು ಶಮನ ಮಾಡುವಂತೆ ಸೂಚನೆ ನೀಡಿದ್ದು, ಬಿಜೆಪಿ ಜೆಡಿಎಸ್ ನಾಯಕರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. 

ಕಮಲದಳ ಮೈತ್ರಿಯಿಂದ ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳು ಜೊತೆಯಾಗಿರುವ ಸಂದೇಶ ರವಾನೆಯಾಗಿದ್ದು, ಜೊತೆಗೆ ಹಿಂದುಳಿದ ಸಮುದಾಯಗಳ ಮತಗಳನ್ನು ಬಿಜೆಪಿ ಎಡೆಗೆ ಸೆಳೆಯಲು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಸಾಗುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು. ಹಿಂದುಳಿದ ಸಮುದಾಯಗಳು ಹೆಚ್ಚಾಗಿರುವ ಕ್ಷೇತ್ರಗಳ ಮೇಲೆ ಹೆಚ್ಚು ನಿಗಾ ವಹಿಸಿ ಮತ ಸೆಳೆಯಲು ಕಾರ್ಯ ಪ್ರವೃತ್ತರಾಗಬೇಕು‌.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ ಸೆಳೆಯಲು ಪ್ಲಾನ್ ಮಾಡಿ, ಯಾವುದೇ ಸಮುದಾಯದ ವೋಟ್ ಮೈತ್ರಿ ಬಿಟ್ಟು ಹೋಗದಂತೆ ಯೋಜನೆ ರೂಪಿಸುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ ಅಹಿಂದ ಮತಗಳು ಹೋಗದಂತೆ ತಡೆಯುವುದು.

ಮೀಸಲಾತಿ ಇರುವ ಕ್ಷೇತ್ರಗಳಲ್ಲಿ ಹೆಚ್ಚು ಸಮಾವೇಶಗಳನ್ನು ರೋಡ್ ಶೋಗಳನ್ನು ಆಯೋಜಿಸಲು ಸಿದ್ಧತೆ.

ತಳ ಸಮುದಾಯಗಳ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟನೆ ಚುರುಕುಗೊಳಿಸುವುದು. ಎರಡೂ ಪಕ್ಷ ಹಿರಿಯರು ಪಕ್ಷದಲ್ಲಿನ ಅಸಮಾಧಾನಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಶಾ ಸೂಚನೆ ನೀಡಿದ್ದಾರೆನ್ನಲಾಗಿದೆ.

ಸಭೆಯಲ್ಲ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕ ಮುಖಂಡರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--