ಸದನದಲ್ಲಿ ಕೇಸರಿ ಸದ್ದು..
ಸದನದಲ್ಲಿ ಕೇಸರಿ ಸದ್ದು..

ಬೆಂಗಳೂರು, (ಫೆ.12); ಇಂದಿನಿಂದ ಆರಂಭವಾದ ರಾಜ್ಯ ಬಜೆಟ್‌ ಜಂಟಿ ಅಧಿವೇಶದಲ್ಲಿ ಬಿಜೆಪಿ ಸದಸ್ಯರು ಕೇಸರಿ ಶಾಲು ಧರಿಸಿ ಆಗಮಿಸುವ ಮೂಲಕ ಗಮನ ಸೆಳೆದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಶಾಸಕ ಅರವಿಂದ್ ಬೆಲ್ಲದ, ಸುನೀಲ್ ಕುಮಾರ್, ಡಾ.ಅಶ್ವಥ್ ನಾರಾಯಾಣ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ನಾಯಕರು ಕೇಸರಿ ಶಾಲು ಹಾಕಿಕೊಂಡು ಸದನಕ್ಕೆ ಬಂದರು.

ಮೊದಲ ದಿನ ಸೋಮವಾರ ರಾಜ್ಯಪಾಲರ ಭಾಷಣ, ಮಂಗಳವಾರದಿಂದ ಕಲಾಪಗಳು ನಡೆಯಲಿವೆ. ಮೊದಲ ದಿನದಿಂದಲೇ ಸರ್ಕಾರದ ವಿರುದ್ಧ ಕಮೀಷನ್ ಆರೋಪದ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರವೂ 40 ಪರ್ಸೆಂಟ್ ಕಮೀಷನ್ ಸರ್ಕಾರ ಎನ್ನುವ ಆರೋಪ ಮಾಡಿದ್ದು, ಇದನ್ನೇ ಸದನದಲ್ಲಿ ಪ್ರಸ್ತಾಪಿಸಿ ಭ್ರಷ್ಟಾಚಾರದ ಆರೋಪ ಕುರಿತು ಚರ್ಚೆಗೆ ಪಟ್ಟುಹಿಡಿಯುವ ಸಾಧ್ಯತೆಗಳಿವೆ.

ವಿಧಾನಮಂಡಲ ಬಜೆಟ್​​ ಅಧಿವೇಶನ ಆರಂಭವಾಗಿದ್ದು, ಥಾವರ್ ಚಂದ್ ಗೆಹ್ಲೋಟ್‌ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದು, ಮಂಗಳವಾರದಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. 16ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....