MSV ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳ ಅಬಾಕಸ್ ಸಾಧನೆ: ಎ.ಸುಬ್ರಮಣ್ಯರಿಂದ ಪ್ರಶಂಸೆ
MSV ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳ ಅಬಾಕಸ್ ಸಾಧನೆ: ಎ.ಸುಬ್ರಮಣ್ಯರಿಂದ ಪ್ರಶಂಸೆ

ದೊಡ್ಡಬಳ್ಳಾಪುರ, (ಫೆ.11); 'ಬ್ರೈನೋಬ್ರೈನ್‌' ಇಂಟ‌ರ್ ನ್ಯಾಷನಲ್ ದುಬೈ' ವತಿಯಿಂದ ಜನವರಿ 27 ರಂದು ಆಯೋಜಿಸಿದ್ದ 11ನೇ ಅಂತರ ರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್‌ ಆನ್ಲೈನ್ ಸ್ಪರ್ಧೆ-2024ರಲ್ಲಿ  ನಗರದ ಪ್ರತಿಷ್ಠಿತ MSV ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತಿ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ದೊಡ್ಡಬಳ್ಳಾಪುರದ ಅಬಾಕಸ್ ತರಬೇತಿ ಕೇಂದ್ರದ ಮುಖ್ಯಸ್ಥೆ ವಿ.ಎ.ಪುಷ್ಪ ನೇತೃತ್ವದಲ್ಲಿ ಎಂಎಸ್‌ವಿ ಶಾಲೆಯ 11 ವಿದ್ಯಾರ್ಥಿಗಳು ಅಂತರ ರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್‌ ಆನ್ಲೈನ್ ಸ್ಪರ್ಧೆ-2024ರಲ್ಲಿ ಭಾಗವಹಿಸಿದ್ದು ಇವರಲ್ಲಿ  05 ಮಂದಿ ಚಾಂಪಿಯನ್ ಟ್ರೋಫಿ, 03 ಮಂದಿ ಚಿನ್ನದ ಪದಕ ಮತ್ತು 03 ಮಂದಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. 

ಈ ಕುರಿತಂತೆ ಎಂಎಸ್‌ವಿ ಶಾಲೆಯ ಆವರಣದಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಎ ಸುಬ್ರಹ್ಮಣ್ಯ ಟ್ರೋಫಿ, ಮೆಡಲ್‌ಗಳನ್ನು ವಿತರಿಸಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಸ್ವರೂಪ್, ಪ್ರಾಂಶುಪಾಲರಾದ ಬಿ.ವಿ.ರಮ್ಯ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು. 

ಚಾಂಪಿಯನ್ ಟ್ರೋಫಿ ಪಡೆದ ವಿದ್ಯಾರ್ಥಿಗಳು; ಅಬ್ದುಲ್ ಖಾಲಿಖ್, ಅನೈತಾ.ಎಂ., ಭುವನ್. ಇ., ದೀಪಕ್.ಎಂ.ಎಚ್., ಶಾನ್ವಿ.ಆರ್.

ಚಿನ್ನದ ಟ್ರೋಫಿ ಪಡೆದ ವಿದ್ಯಾರ್ಥಿಗಳು; ದೈವಿಕ್ ರಾಮ್, ಸಮೃದ್ಧಿ.ಆರ್.ಕೆ., ಸ್ನೇಹರಾಜ್.ಎಚ್.ಪಿ.

ಬೆಳ್ಳಿಯ ಟ್ರೋಫಿ ಪಡೆದ ವಿದ್ಯಾರ್ಥಿಗಳು; ಹನ್ಸಿಕ, ಮಹಮ್ಮದ್ ಅರ್ಹಾನ್, ಸಂತೃಪ್ತಿ. ಆರ್.ಕೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--