ಮರು ಜಂಟಿ‌ ಸಮೀಕ್ಷೆ ಬಳಿಕ ಬರಪೀಡಿತ ತಾಲೂಕು ಘೋಷಣೆ: ಕೇಂದ್ರದ ಮಾನದಂಡದಿಂದ ಸಮಸ್ಯೆ ಎಂದ ಸಚಿವರು
ಮರು ಜಂಟಿ‌ ಸಮೀಕ್ಷೆ ಬಳಿಕ ಬರಪೀಡಿತ ತಾಲೂಕು ಘೋಷಣೆ: ಕೇಂದ್ರದ ಮಾನದಂಡದಿಂದ ಸಮಸ್ಯೆ ಎಂದ ಸಚಿವರು

ಬೆಂಗಳೂರು, (ಸೆ.04): ಕೇಂದ್ರ ಸರ್ಕಾರದ ನಿಯಮದಂತೆ ಕರ್ನಾಟಕದ 113 ತಾಲೂಕಗಳ ಪೈಕಿ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 

ಕರ್ನಾಟಕ ಸಚಿವ ಸಂಪುಟ ಉಪಸಮಿತಿ ಸಭೆಯ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, " ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 52 ತಾಲೂಕು ಬರ ಘೋಷಣೆಗೆ ಅರ್ಹ ತಾಲೂಕುಗಳಾಗಿವೆ. ಬೆಳೆ ಸಮೀಕ್ಷೆ ನಂತರ ಬೆಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. 51 ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಸಮೀಕ್ಷೆಗೆ ತೀರ್ಮಾನಿಸಲಾಗಿದೆ' ಎಂದು ತಿಳಿಸಿದ್ದಾರೆ.

ಅಗಸ್ಟ್ 18ರ ಅನ್ವಯ 60 ಪರ್ಸೆಂಟ್ ಗಿಂತ ಮಳೆ ಕಡಿಮೆ ಇತ್ತು. ಅದರ ಅನ್ವಯ ಬರ ಘೋಷಣೆ ಮಾಡಲಾಗಿದೆ. ಇನ್ನೂ 83 ತಾಲೂಕಿನಲ್ಲಿ ಶುಷ್ಕ ವಾತಾವರಣ ಇದೆ ಹಾಗೂ ಮೂರು ವಾರ ಮಳೆ ಆಗಿಲ್ಲ. ಆಗಸ್ಟ್ ನಲ್ಲಿ ಒಂದು ವರದಿ ಸಿಕ್ಕಿತ್ತು ಅದರಲ್ಲಿ 113 ತಾಲೂಕು ಬರ ಪೀಡಿತ ಎಂದು ದಾಖಲಾಗಿದ್ದವು, ಬಳಿಕ 83 ತಾಲೂಕಿನಲ್ಲಿ ಇದೇ ರೀತಿ ಆಗಿದೆ. ಈ 83 ತಾಲೂಕಿನಲ್ಲೂ ಬೆಳೆ ಸಮೀಕ್ಷೆ ಮಾಡಬೇಕಾಗಿದೆ. ನಾಳೆಯಿಂದಲೇ ಬೆಳೆ ಸಮೀಕ್ಷೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಮಾನದಂಡಗಳು ಪದೇ ಪದೇ ಸಮಸ್ಯೆ ಆಗ್ತಾ ಇವೆ. ಜನರ ನಿರೀಕ್ಷೆಗೆ ಅನುಕೂಲಕರವಾಗಿಲ್ಲ ಮಾನದಂಡ ಬದಲಾವಣೆ ಮಾಡಬೇಕು ಅಂತ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಎಲ್ಲಾ ವಿಚಾರವಾಗಿ ಸಂಪುಟದ ನಿರ್ಣಯಕ್ಕೆ ಇಡಲಾಗುತ್ತದೆ. ಬರ ಘೋಷಣೆಯಾದ ತಕ್ಷಣವೇ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚನೆಗೆ ಸೂಚನೆ ಕೊಡಲಾಗಿದೆ. ತುರ್ತು ಕುಡಿಯುವ ನೀರು ಕೊಡುವ ವ್ಯವಸ್ಥೆ ಆಗುತ್ತದೆ. ಅದಕ್ಕೆ ಬೇಕಾದ ಅನುದಾನ ಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಹೋದ್ರೆ ಬರ ಪೀಡಿತ ತಾಲ್ಲೂಕುಗಳನ್ನ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ನಿಯಮ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಪ್ರಧಾನಿ ಅವರು ಇನ್ನು ಸಿಎಂ ಭೇಟಿಗೆ ಸಮಯ ನೀಡಿಲ್ಲ. ನಾವು ಕೂಡ ಕೇಂದ್ರ ನಾಯಕರನ್ನ ಭೇಟಿ ಮಾಡಿ ಪರಿಸ್ಥಿತಿ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.

ಸಭೆಯಲ್ಲಿ ಕೃಷಿ ಸಚಿವ ಚೆಲುವ ನಾರಾಯಣಸ್ವಾಮಿ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others