ಹರಿತಲೇಖನಿ ದಿನಕ್ಕೊಂದು ಕಥೆ: ಅಹಂಕಾರ
ಹರಿತಲೇಖನಿ ದಿನಕ್ಕೊಂದು ಕಥೆ: ಅಹಂಕಾರ

ಒಮ್ಮೆ ಶಂಕರಾಚರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು.

ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೊ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚರ್ಯರು ಕೈಯಲ್ಲಿರುವ ಕೋಲನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯನಿಗೆ ತೋರಿಸಿ ಹೀಗೆ ಹೇಳಿದರು ‘ನೋಡು, ಈ ಕೋಲನ್ನು ಆ ಪವಿತ್ರ ನದಿಯಲ್ಲಿ ಅದ್ದಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು.

‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ಕೋಲನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವುದು ಕೇವಲ ಒಂದು ಬಿಂದು ಜ್ಞಾನವಷ್ಟೇ!’

ಕೃಪೆ: ಹಿಂದೂ ಜಾಗೃತಿ..

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime