Crime; ಬೈಕ್ ರೈಡ್ ಮಾಡಲು ಕೊಡಲಿಲ್ಲವೆಂದು ಸ್ನೇಹಿತನಿಗೆ ಚಾಕು..!
Crime; ಬೈಕ್ ರೈಡ್ ಮಾಡಲು ಕೊಡಲಿಲ್ಲವೆಂದು ಸ್ನೇಹಿತನಿಗೆ ಚಾಕು..!

ಬೆಂಗಳೂರು, (ಆಗಸ್ಟ್.3): ಕದ್ದ ದ್ವಿಚಕ್ರ ವಾಹನ ಓಡಿಸಲು ಕೊಡಲಿಲ್ಲವೆಂದು ಸ್ನೇಹಿತನಿಗೆ ಚಾಕು ಇರಿದಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಸೈಯ್ಯದ್ ನಜೀಂ ಎಂಬಾತನಿಗೆ ಚಾಕು ಇರಿದಿದ್ದ ಸಾದಿಕ್ ಎಂಬಾತನನ್ನು ಬಂಧಿಸಲಾಗಿದೆ.

ಜುಲೈ 21ರಂದು ರಾತ್ರಿ ದಾಸರಹಳ್ಳಿ ಬಳಿ ಸೈಯದ್ ನಜೀಂಗೆ ಆರೋಪಿ ಚಾಕು ಇರಿದಿದ್ದ. ಆರೋಪಿ ಸಾದಿಕ್ ಹಾಗೂ ಸೈಯದ್‌ ನಜೀಂಗೆ ಈ ಹಿಂದೆ ರಾಮನಗರ ಜೈಲಿನಲ್ಲಿದ್ದಾಗ ಪರಿಚಯವಾಗಿತ್ತು. ಸೈಯದ್ ನಜೀಂಗೆ ಜಾಮೀನು ಪಡೆದುಕೊಳ್ಳಲು ಆರೋಪಿ ಸಾದಿಕ್ ಸಹಾಯ ಮಾಡಿದ್ದ.

ಜೈಲಿನಿಂದ ಹೊರಬಂದ ಬಳಿಕ ಸಹ ಒಟ್ಟಿಗೆ ಓಡಾಡಿಕೊಂಡಿದ್ದ ಇಬ್ಬರೂ ಜುಲೈ 21ರಂದು ಶಿವಾಜಿನಗರದ ಎಕೆಪಿ ಹಾಲ್ ಬಳಿಯಿರುವ ಆರೋಪಿಯ ಅಕ್ಕನ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ ಸೈಯ್ಯದ್‌ ನಜೀಂ, ಆರೋಪಿ ಸಾದಿಕ್ ಹಾಗೂ ಆತನ ಅಕ್ಕನ ಮಗ ವಾಪಸ್ ಬರುವಾಗ ಗೋರಿಪಾಳ್ಯ ಬಳಿ ಒಂದು ಹೊಸ ಹಾಗೂ ಮತ್ತೊಂದು ಹಳೆಯ ಪಲ್ಸರ್ ಬೈಕ್ ಕದ್ದಿದ್ದರು.

ಈ ಪೈಕಿ ಹೊಸಬೈಕ್ ರೈಡ್ ಮಾಡುತ್ತಿದ್ದ ಸೈಯದ್ ನಜೀಂ ಬಳಿ, 'ತನಗೆ ಬೈಕ್ ರೈಡ್ ಮಾಡಲು ಕೊಡು' ಎಂದು ಸಾದಿಕ್ ಕೇಳಿದ್ದ. ಬೈಕ್ ನೀಡಲು ನಿರಾಕರಿಸಿದ್ದ ನಜೀಂ ವೇಗವಾಗಿ ರೈಡ್ ಮಾಡಿಕೊಂಡು ಹೋಗಿದ್ದ. ಆತನನ್ನು ಹಿಂಬಾಲಿಸಿ ಕೊಂಡು ಬಂದಿದ್ದ ಸಾದಿಕ್, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದ.

ಈ ವೇಳೆ ಆತನ ಸಹಾಯಕ್ಕೆ ಸೈಯದ್ ನಜೀಂ ಮುಂದಾದಾಗ ಏಕಾಏಕಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದ. ಗಾಯಗೊಂಡಿದ್ದ ನಜೀಂ ಆಸ್ಪತ್ರೆಗೆ ದಾಖಲಾಗಿದ್ದ ಎಂದು ವರದಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others

HL

crime