ಸಿಎಂಗೆ ಶೋಕಾಸ್ ನೋಟಿಸ್: ಕಾನೂನು, ಸಂವಿಧಾನ ಕಾಪಾಡಬೇಕಾದ ರಾಜ್ಯಪಾಲರೇ ಉಲ್ಲಂಘಿಸಿದರೆ ನ್ಯಾಯಾಲಯದ ಮೊರೆ - ಡಾ.ಜಿ.ಪರಮೇಶ್ವರ್| ವಿಡಿಯೋ
ಸಿಎಂಗೆ ಶೋಕಾಸ್ ನೋಟಿಸ್: ಕಾನೂನು, ಸಂವಿಧಾನ ಕಾಪಾಡಬೇಕಾದ ರಾಜ್ಯಪಾಲರೇ ಉಲ್ಲಂಘಿಸಿದರೆ ನ್ಯಾಯಾಲಯದ ಮೊರೆ - ಡಾ.ಜಿ.ಪರಮೇಶ್ವರ್| ವಿಡಿಯೋ

ಬೆಂಗಳೂರು, (ಆಗಸ್ಟ್.02); ಮುಡಾ ಹಗರಣ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲರು ಆತುರಾತುರವಾಗಿ ಶೋಕಾಸ್ ನೋಟಿಸ್ ನೀಡಿರುವುದರ ಹಿಂದೆ ಒತ್ತಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಸದಾಶಿವನಗರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿಯೇ ಸಂಪುಟದ ನಿರ್ಣಯ ಕಳಿಸಲು ತೀರ್ಮಾನಿಸಲಾಗಿತ್ತು. ಆದರೆ ರಾಜ್ಯದಲ್ಲಿ ರಾಜ್ಯಪಾಲರು ಇಲ್ಲ. ಈ ಹಿನ್ನೆಲೆಯಲ್ಲಿ ಅವರ ಕಚೇರಿಗೆ ಕಳಿಸಿಕೊಡುವ ಸಾಧ್ಯತೆಯಿದೆ.

ರಾಜ್ಯಪಾಲರ ಬಳಿ ಹತ್ತಾರು ಕೇಸ್ ಗಳು ಬಾಕಿ ಉಳಿದಿವೆ. ಈ ಕುರಿತು ಪ್ರಾಸಿಕ್ಯೂಷನ್ ಗೆ ಕೇಳಿದರು ಅವರು ಅನುಮತಿ ಕೊಟ್ಟಿಲ್ಲ. ಆದರೆ ಇಷ್ಟೋಂದ್ ಆತುರಾತುರವಾಗಿ ದೂರು ಕೊಟ್ಟ ದಿನವೇ ಅವರು ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. 

ಶೋಕಾಸ್ ನೋಟೀಸ್ ಕೊಡೋದು, ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವ ಅಧಿಕಾರ ಇದೆ. ಆದರೆ ಒಂದೇ ದಿನದಲ್ಲಿ ಪರಿಶೀಲನೆ ನಡೆಸದೆ ಆತುರಾತುರವಾಗಿ ಸಿಎಂ ಸಿದ್ದರಾಮಯ್ಯರಿಗೆ ಶೋಕಾಸ್ ನೋಟಿಸ್ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಸದ್ಯದ ಮಾಹಿತಿಯ ಪ್ರಕಾರ ರಾಜ್ಯಪಾಲರ ಮೇಲೆ ಬೇರೆ ಬೇರೆ ರೀತಿಯಲ್ಲಿ ಒತ್ತಡಗಳು ಬಂದಿದೆ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಅದೇನೇ ಆಗಲಿ ಅವರು ಕೈಗೊಂಡ ನಿರ್ಧಾರವನ್ನು ಕಾನೂನಾತ್ಮಕವಾಗಿ ನಾವು ಎದುರಿಸುತ್ತೇವೆ.

ರಾಜ್ಯಪಾಲರು ಈ ರೀತಿ ಕ್ರಮಕೈಗೊಂಡಾಗ ಸರ್ಕಾರ ನೋಡಿ ಈ ರೀತಿ ಕಾನೂನಿನಲ್ಲಿ ಈ ರೀತಿ ಇದೆ ಎಂದು ತಿಳಿಹೇಳುವ ಕೆಲಸ ಸರಕಾರದಿಂದ ಮಾಡಲಾಗಿದೆ. ರಾಜ್ಯಪಾಲರು ಸಂವಿಧಾನದ ರಕ್ಷಕರು. ಅವರೇ ಕಾನೂನು, ಸಂವಿಧಾನ ಹೊರತು ಪಡಿಸಿ ತೀರ್ಮಾನ ಕೈಗೊಂಡರೆ ಸರ್ಕಾರ ನ್ಯಾಯಾಲಯದ ಬಾಗಿಲು ತಟ್ಟಬೇಕಾಗುತ್ತದೆ ಎಂದರು.

ಇನ್ನು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಜೆಡಿಎಸ್ ನಾಯಕರು ಶಾಂತಿಯುತವಾಗಿ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದು, ಈ ಕಾರಣಕ್ಕೆ ಅನುಮತಿ ನೀಡಲು ನಿರ್ಧರಿಸಿದ್ದೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ಇದೇ ವೇಳೆ ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ ಭವಾನಿ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಕೆ ವಿಚಾರವಾಗಿ ಮಾತನಾಡಿದ್ದು, ತನಿಖಾಧಿಕಾರಿಗಳು ಎಲ್ಲ ಗಮನಿಸಿ ಚಾರ್ಜ್‌ ಶೀಟ್ ಹಾಕಿದ್ದಾರೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ. ಮುಂದಿನ ಕೆಲಸವನ್ನು ಕೋರ್ಟ್ ಮಾಡುತ್ತೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others