ನವದೆಹಲಿ, (ಆಗಸ್ಟ್.02); ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು, ಪೆದ್ದ, ತಿಳುವಳಿಕೆ ಇಲ್ಲದವ ಎಂಬಂತೆ ಬಿಂಬಿಸಿದ್ದ ಬಿಜೆಪಿ ವಲಯ, ಕಳೆದ ಲೋಕಸಭೆ ಚುನಾವಣೆ ನಂತರ ತಾಳ್ಮೆ ಕಳೆದುಕೊಂಡಂತೆ ವರ್ತಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇದಕ್ಕೆ ಕಾರಣ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳು, ಇವು ಅಪಹಾಸ್ಯಕ್ಕೂ ಕಾರಣವಾಗುತ್ತಿದೆ.
ಕಳೆದ ಹತ್ತು ವರ್ಷಗಳ ಕಾಲ ವಿರೋಧ ಪಕ್ಷವಿಲ್ಲದೆ ಕೇಂದ್ರದಲ್ಲಿ ರಾಜ್ಯಭಾರ ಮಾಡಿದ್ದ ಮೋದಿ ನೇತೃತ್ವದ ಸರ್ಕಾರಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ರಾಹುಲ್ ದ್ರಾವಿಡ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮೂಲಕ ಪುಟಿದೆದ್ದ ಕಾಂಗ್ರೆಸ್, ಇಂಡಿ ಮೈತ್ರಿಕೂಟವನ್ನು ರಚಿಸಿಕೊಂಡು. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಾರ್ಸೋ ಪಾರ್ ಕನಸು ಕಾಣುತ್ತಿದ್ದ ಮೋದಿ ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸಲು ಮಿತ್ರ ಪಕ್ಷಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಸಿತು.
ಇನ್ನು ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ರಾಹುಲ್ ಗಾಂಧಿ ಸ್ವೀಕರಿಸುತ್ತಿದ್ದಂತೆ, ಸದನದಲ್ಲಿ 101 ನಿಮಿಷಗಳ ಕಾಲ ನಡೆಸಿದ ವಾಗ್ದಾಳಿಯಲ್ಲಿ ಪ್ರಸ್ತಾಪಿಸಿದ ನೀಟ್ ಹಗರಣ, ನಿರುದ್ಯೋಗ ಸಮಸ್ಯೆ, ಅಗ್ನಿ ವೀರರಿಗೆ ಅನ್ಯಾಯ, ರೈತರಿಗೆ ಕಿರುಕುಳ ಮುಂತಾದ 18 ಗಂಭೀರ ಪ್ರಶ್ನೆಗಳು ದೇಶದ ಜನರನ್ನು ಒಮ್ಮೆ ರಾಹುಲ್ ಗಾಂಧಿ ಕಡೆಗೆ ತಿರುಗಿ ನೋಡುವಂತೆ ಮಾಡಿತು.
ಆದರೆ ವಿರ್ಪರ್ಯಾಸ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಪ್ರಧಾನಿ ಮೋದಿ ದಿಟ್ಟ ಉತ್ತರ ನೀಡುತ್ತಾರೆ ಎಂದು ಬಯಸಿದರೆ, ಮೋದಿ ಅವರು ರಾಹುಲ್ ಗಾಂಧಿಯ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಿಟ್ಟು ಅವರು ಬೇಲ್ ಮೇಲಿದ್ದಾರೆ, ಆ ಕೇಸ್ ಇದೆ, ಈ ಕೇಸ್ ಇದೆ ಎಂಬಂತೆ ವಯಕ್ತಿಕ ನಿಂದನೆಗೆ ಇಳಿದುಬಿಟ್ಟಿದ್ದು, ಮೋದಿ ಏಕೆ ಇಷ್ಟು ಕಳಪೆ ಉತ್ತರ ನೀಡಿದರು ಎಂಬ ಬೇಸರಕ್ಕೆ ಕಾರಣವಾಯಿತು.
ಮತ್ತೊಂದೆಡೆ ಬಿಜೆಪಿಯ ಸಜ್ಜನ ಯುವ ಸಂಸದ ಎಂಬ ಹೆಸರು ಪಡೆದಿರುವ ಅನುರಾಗ್ ಠಾಕೂರ್, ಕಳೆದ ಮಂಗಳವಾರ ಲೋಕಸಭೆಯಲ್ಲಿ ಮಾತನಾಡುವ ವೇಳೆ, 'ತನ್ನ ಜಾತಿ ಯಾವುದೆಂದೇ ಗೊತ್ತಿಲ್ಲದವ (ರಾಹುಲ್ ಗಾಂಧಿ), ಜಾತಿ ಗಣತಿ ಬಗ್ಗೆ ಕೇಳುತ್ತಿದ್ದಾರೆ' ಎಂದು ಬೇಕಾಬಿಟ್ಟಿ ಹೇಳಿಕೆ ನೀಡಿಬಿಟ್ಟರು.
ಇನ್ನೊಂದೆಡೆ ವಿವಾದದ ಮೂಲಕವೇ ಚಿತ್ರ ನಟಿಯಾಗಿ, ಸಂಸದೆಯಾಗಿ, ರೈತರ ವಿರುದ್ಧ ನಾಲಿಗೆ ಹರಿಬಿಟ್ಟು ಭದ್ರತಾ ಸಿಬ್ಬಂದಿಯಿಂದ ಕಪಾಳ ಮೋಕ್ಷ ಅನುಭವಿಸಿರುವ ಕಂಗನ ರನೋತ್ ಒಂದ್ ಹೆಚ್ಚೆ ಮುಂದೆ ಹೋಗಿ, ರಾಹುಲ್ ಗಾಂಧಿಗೆ ಡ್ರಗ್ಸ್ ತಪಾಸಣೆ ಮಾಡಿಸಬೇಕು, ಸದನದಲ್ಲಿ ಕುಡಿದಂತೆ ಮಾತಾಡುತ್ತಾರೆ ಎಂದರು.
ಪುರಿ ಸೋಮನಾಥ ದೇವರು ಕೂಡ ಮೋದಿ ಭಕ್ತ ಎಂದು ಹೇಳಿ ಛೀಮಾರಿಗೆ ಒಳಗಾಗಿದ್ದ ಮತ್ತೋರ್ವ ಸಂಸದ ಸಂಭೀತ್ ಪಾತ್ರ, ರಾಹುಲ್ ಗಾಂಧಿ ಟೀ ಶರ್ಟ್, ಪ್ಯಾಂಟ್ ಧರಿಸುತ್ತಾರೆ, ಜೇಬಲ್ ಕೈ ಇಟ್ಕೊಂಡ್ ನಿಲ್ತಾರೆ ಎಂಬಂತೆ ಕ್ಷುಲ್ಲಕವಾಗಿ ಪ್ರಶ್ನಿಸುವ ಮೂಲಕ ಇಷ್ಟು ವರ್ಷಗಳ ಪಪ್ಪು ಎಂದು ಬಿಂಬಿಸಿದ್ದವರು, ರಾಹುಲ್ ಗಾಂಧಿ ವಾಗ್ದಾಳಿಗೆ ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವಂತೆ ಮಾಡಿದೆ.
ಇದರ ಬೆನ್ನಲ್ಲೆ ರಾಹುಲ್ ಗಾಂಧಿ ಅವರ ಆಕ್ರಮಣಾಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಲು ಇಡಿಯನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ವಲಯ ಅನುಮಾನಿಸಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ಸಂಸತ್ತಿನಲ್ಲಿ ಚಕ್ರವ್ಯೂಹದ ಹೇಳಿಕೆ ನೀಡಿದ ನಂತರ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂಸತ್ತಿನಲ್ಲಿ ಚಕ್ರವ್ಯೂಹದ ಹೇಳಿಕೆ ನೀಡಿದ ನಂತರ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ. ಆದರೆ ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಕ್ತ ತೋಳುಗಳಿಂದ ಅವರನ್ನು ಬರಮಾಡಿಕೊಳ್ಳುತ್ತಾನೆ.
ಸ್ಪಷ್ಟವಾಗಿ ಹೇಳುತ್ತೇನೆ, ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ನನ್ನ ವಿರುದ್ಧ ಇಡಿ ದಾಳಿ ನಡೆಸಲು ಯೋಜಿಸಲಾಗುತ್ತಿದೆ ಎಂದು ಇಡಿ ಒಳಗಿನವರೇ ನನಗೆ ಹೇಳಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.
ಇಡಿ ಅಧಿಕಾರಿಗಳು ಯಾವಾಗ ಬೇಕಾದರೂ ಬರಲಿ ನಾನು ಟೀ ಹಾಗೂ ಬಿಸ್ಕೆಟ್ ಹಿಡಿದು ಅವರಿಗೆಗಾಗಿ ತೆರೆದ ತೋಳುಗಳಿಂದ ಸ್ವಾಗತಿಸಲು ಕಾಯುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ಇಷ್ಟಕ್ಕೂ ರಾಹುಲ್ ಸಂಸತ್ತಿನಲ್ಲಿ ಹೇಳಿದ್ದೇನೆಂದು ನೋಡೋದಾದ್ರೆ ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಕೊಳ್ಳಲು ಕೌರವರು ಚಕ್ರವ್ಯೂಹ ನಿರ್ಮಿಸಿದ ಹಾಗೆ ಬಿಜೆಪಿಯು ದೇಶದಲ್ಲಿ ರೈತರು ಮತ್ತು ನಿರುದ್ಯೋಗಿ ಯುವಕರ ಸುತ್ತ ಚಕ್ರವ್ಯೂಹ ನಿರ್ಮಿಸುವ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
Latest News
others
crime
crime
crime
crime
politics
crime
others
crime
others
others
crime
others
others
others
others
crime
education
crime
crime
others
crime
education
others
others
crime
economy
crime
sports
others