Heart attack; ಪಿಎಸ್‌ಐ ಪರುಶುರಾಮ್ ಹೃದಯಾಘಾತದಿಂದ ನಿಧನ..!: ಸಾವಿನ ಸುತ್ತ ಅನುಮಾನದ ಹುತ್ತ
Heart attack; ಪಿಎಸ್‌ಐ ಪರುಶುರಾಮ್ ಹೃದಯಾಘಾತದಿಂದ ನಿಧನ..!: ಸಾವಿನ ಸುತ್ತ ಅನುಮಾನದ ಹುತ್ತ

ಯಾದಗಿರಿ, (ಆಗಸ್ಟ್.03): ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಅವರು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಅವರಿಗೆ ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಆದರೆ ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಶುರುವಾಗಿದ್ದು, ಯಾದಗಿರಿ ನಗರದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. 

ಪತಿಯ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಶ್ವೇತಾ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಮಾಧ್ಯಮ ಮುಂದೆ ಮಾತನಾಡಿದ ಅವರು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ವರ್ಗಾವಣೆಗೆ 30, 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ‌ನನಗೆ ಹೇಳಿದ್ದಾರೆ. ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ. ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾದಗಿರಿ ಪಿಎಸ್ಐ ಪರಶುರಾಮ ಅನುಮನಾಸ್ಪದ ಸಾವಿನ ಬಗ್ಗೆ ಈಗಾಗಲೇ ತನಿಖೆಗೆ ಸೂಚನೆ ಕೊಟ್ಟಿದ್ದೇನಿ ಎಂದು ಹೇಳಿದ್ದಾರೆ.

ಅವರು ನ್ಯಾಚುರಲ್ ಆಗಿ ಮೃತಪಟ್ಟಿದ್ದಾಗಿ‌ ಸುದ್ದಿ ಬರ್ತಿದೆ. ಅವರು ಸೂಸೈಡ್ ಮಾಡಿಲ್ಲ, ಡೆತ್ ನೋಟ್ ಬರೆದಿಟ್ಟಿಲ್ಲ. ಕುಟುಂಬಸ್ಥರು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲಾ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನಿ. ವರದಿ ಬಂದ ಮೇಲೆ ನೋಡೋಣ. ಅವರ ಪತ್ನಿ ಆರೋಪವನ್ನೂ ನಾನು ಪರಿಗಣಿಸುತ್ತೇನೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others