ಶಕ್ತಿ ಯೋಜನೆಯಿಂದ KSRTCಗೆ ಲಾಭ.!; ಟೀಕಾಕಾರರಿಗೆ ಸಿಎಂ ತಿರುಗೇಟು..!
ಶಕ್ತಿ ಯೋಜನೆಯಿಂದ KSRTCಗೆ ಲಾಭ.!; ಟೀಕಾಕಾರರಿಗೆ ಸಿಎಂ ತಿರುಗೇಟು..!

ಬೆಂಗಳೂರು, (ಜೂ.14): ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಕೆಎಸ್‌ಆರ್ಟಿಸಿ ಲಾಭ ಹೆಚ್ಚಾಗಿದೆ ಎಂಬ ಸಂಸ್ಥೆ ಮುಖ್ಯಸ್ಥ ಹೇಳಿಕೆ ವಿರೋಧ ಪಕ್ಷದವರ ಟೀಕೆಗೆ ಕಾರಣವಾಗಿತ್ತು.

ಇದರ ಬೆನ್ನಲ್ಲೆ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಈಗ ಶಕ್ತಿ ದೊರೆತಿದೆ. ನಮ್ಮ ಸರ್ಕಾರದ ಆಡಳಿತದ ಒಂದೇ ವರ್ಷದಲ್ಲಿ ಸಾರಿಗೆ ನಿಗಮಗಳು 3,900 ಕೋಟಿ ರೂ.ಗಳ ಲಾಭದೊಂದಿಗೆ ಮುನ್ನುಗ್ಗುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿಮಾಹಿತಿ ಹಂಚಿಕೊಳ್ಳುವ ಅವರು, ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ಯೋಜನೆಗೆ ವರ್ಷದ ಸಂಭ್ರಮ. ಕಳೆದೊಂದು ವರ್ಷದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಏರಿಕೆಯಾಗಿದೆ, ದೂರಪ್ರಯಾಣ ಮಾಡಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಹಲವು ಸಮೀಕ್ಷೆಗಳು ವರದಿ ಮಾಡಿವೆ. ಒಟ್ಟಿನಲ್ಲಿ ಶಕ್ತಿ ನಾಡಿನಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ.

ಶಕ್ತಿ ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. 

ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ 226 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈ ವರೆಗಿನ ಒಟ್ಟು ಟಿಕೇಟ್ ಮೌಲ್ಯ ರೂ.5,500 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ.

ತನ್ನ ಶಿಕ್ಷಣದ ಕನಸಿಗೆ ಬೆಂಬಲವಾಗಿ ನಿಂತಿರುವ ಶಕ್ತಿ ಯೋಜನೆಯ ಬಗ್ಗೆ ಕಲಬುರಗಿಯ ಬಾಲಕಿಯೊಬ್ಬಳು ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇದು ಈ ವಿದ್ಯಾರ್ಥಿನಿಯ ಮಾತು ಮಾತ್ರವಲ್ಲ ನಾಡಿನ ಸಮಸ್ತ ಹೆಣ್ಣುಮಕ್ಕಳ ಮನಸಿನ ಮಾತೂ ಆಗಿದೆ. 

ಕಳೆದ ವರ್ಷ ಈ ಹೊತ್ತಿಗೆ ನಷ್ಟದ ಸುಳಿಯಲ್ಲಿ ಸಿಲುಕಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆ ಜಾರಿಗೊಂಡ ನಂತರದಲ್ಲಿ ಲಾಭದ ಹಾದಿಗೆ ಮರಳಿದೆ. ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಗಳು ಇಂದು ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ.

ವಿವಿಧ ಸಾರಿಗೆ ಸಂಸ್ಥೆಗಳಿಗೆ ಶೇ. 57.5 ರಷ್ಟು ಶಕ್ತಿ ಯೋಜನೆ ಹೊರತಾದ ಪ್ರಯಾಣಿಕರಿಂದ ಆದಾಯ ಬರುತ್ತಿದೆ. ಶಕ್ತಿ ಯೋಜನೆ ನಾಡಿನ ಮಹಿಳೆಯರಿಗೆ ಮಾತ್ರವಲ್ಲ ಸಾರಿಗೆ ಸಂಸ್ಥೆಗಳಿಗೂ ವರದಾನವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಶಕ್ತಿ ಯೋಜನೆ ಜಾರಿಗೊಂಡ ಬಳಿಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಈ ಪ್ರಯಾಣಿಕರಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಮಾತ್ರವಲ್ಲದೆ ಅವರ ಕುಟುಂಬದವರು ಪ್ರಯಾಣ ಮಾಡುತ್ತಿದ್ದು ಸಹಜವಾಗಿಯೇ ಇದು ಸಾರಿಗೆ ಸಂಸ್ಥೆಗೆ ಹೆಚ್ಚಿನ ಲಾಭ ತಂದುಕೊಡುಹಾಡಿದೆ.

ಶಕ್ತಿ ಯೋಜನೆ ಜಾರಿಗೆ ಮೊದಲು ರೂ. 250 ಕೋಟಿ ಇದ್ದ ಸರಾಸರಿ ಮಾಸಿಕ ಆದಾಯವೀಗ ರೂ.400 ಕೋಟಿ ಮೀರಿದೆ. ನಾಡಿನ ಮಹಿಳೆಯರಿಗೂ ಅನುಕೂಲವಾಗಿರುವ, ಸಾರಿಗೆ ಸಂಸ್ಥೆಗಳಿಗೂ ಲಾಭ ತಂದುಕೊಡುತ್ತಿರುವ ಶಕ್ತಿ ಯೋಜನೆ ರಾಜ್ಯದಲ್ಲಿ ಹೊಸಯುಗಕ್ಕೆ ನಾಂದಿ ಹಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೂ ಇದೇ ವಿಚಾರವಾಗಿ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಾರಿಗೆ ನಿಗಮಗಳು ನಷ್ಟದಲ್ಲಿದ್ದವು, ನಿಗಮಗಳ ಆಸ್ತಿಗಳನ್ನು ಅಡಮಾನ ಇಡಲಾಗಿತ್ತು, ಹೊಸ ಬಸ್ಸುಗಳ ಸೇರ್ಪಡೆ ಮರೀಚಿಕೆಯಾಗಿತ್ತು, ಕಾಲ ಕಾಲಕ್ಕೆ ವೇತನ ಸಿಗದೆ ಸಾರಿಗೆ ನೌಕರರು ಕಂಗಾಲಾಗಿದ್ದರು.

ನಮ್ಮ ಸರ್ಕಾರದ ಆಡಳಿತದ ಒಂದೇ ವರ್ಷದಲ್ಲಿ ಸಾರಿಗೆ ನಿಗಮಗಳು 3,900 ಕೋಟಿ ಲಾಭದೊಂದಿಗೆ ಮುನ್ನುಗ್ಗುತ್ತಿವೆ, ಹೊಸ ಬಸ್ಸುಗಳು ಸೇರ್ಪಡೆಯಾಗುತ್ತಿವೆ.
ಸಾರಿಗೆಗೆ “ಶಕ್ತಿ” ದೊರಕಿದೆ.

ವಾಯುವ್ಯ ಸಾರಿಗೆ 425 ಸಿಸಿ ಟಿವಿ ಅಳವಡಿಸಿದ ಸುಸಜ್ಜಿತ ಬಸ್ಸುಗಳನ್ನು ಸೇರ್ಪಡೆ ಮಾಡಲು ಸಚಿವ ರಾಮಲಿಂಗಾ ರೆಡ್ಡಿ ಅವರು ಮುಂದಾಗಿದ್ದಾರೆ. ಹಾಗೂ ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಹಾಗೂ ಪ್ರಯಾಣಿಕರಿಗೆ ಅಪಘಾತ ವಿಮೆ ಪರಿಹಾರ ನೀಡಲಾಗಿದೆ ಎಂದಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others